Fact Check ಭಗತ್​​ಸಿಂಗ್ ಪರ ನ್ಯಾಯಾಲಯದಲ್ಲಿ ವಾದಿಸಲು ಗಾಂಧಿ ಮತ್ತು ನೆಹರು ನಿರಾಕರಿಸಿದ್ದರೆ? | Gandhi And Nehru Refused to represent Bhagat Singh during his court trials Fact Check about viral tweet


ಮೋಹನ್‌ದಾಸ್ ಕರಮಚಂದ್ ಗಾಂಧಿ ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರು ತಮ್ಮ ಕಾಲದ ಟಾಪ್ ವಕೀಲರು ಮತ್ತು ಬ್ಯಾರಿಸ್ಟರ್‌ಗಳಾಗಿದ್ದರು, ಭಗತ್‌ಸಿಂಗ್ ಪರ ವಾದಿಸಿಲ್ಲ ಯಾಕೆ? ವೈರಲ್ ಟ್ವೀಟ್​​ನ ಫ್ಯಾಕ್ಟ್​​ಚೆಕ್

Fact Check ಭಗತ್​​ಸಿಂಗ್ ಪರ ನ್ಯಾಯಾಲಯದಲ್ಲಿ ವಾದಿಸಲು ಗಾಂಧಿ ಮತ್ತು ನೆಹರು ನಿರಾಕರಿಸಿದ್ದರೆ?

ವೈರಲ್ ಟ್ವೀಟ್

ಭಗತ್ ಸಿಂಗ್​ (Bhagat Singh) ಕಾನೂನು ಹೋರಾಟ ನಡೆಸುತ್ತಿದ್ದ ವೇಳೆ ಯಾರೊಬ್ಬರೂ ಅವರ ಪರ ವಾದ ಮಾಡಲು ಮುಂದಾಗಿಲ್ಲ ಎಂದು ಹೇಳುವ ಟ್ವೀಟ್ ಸಾಮಾಜಿಕ ಮಾಧ್ಯಮಗಳಲ್ಲಿ (social media )ವೈರಲ್ ಆಗಿದೆ. ಮಹಾತ್ಮಗಾಂಧಿ, ಜವಾಹರ್ ಲಾಲ್ ನೆಹರು ಮತ್ತು ಮುಹಮ್ಮದ್ ಅಲಿ ಜಿನ್ನಾ ಮೊದಲಾದವರು ಭಗತ್ ಸಿಂಗ್ ಪರ ವಾದಿಸಲು ನಿರಾಕರಿಸಿದರು ಎಂದು ವೈರಲ್ ಟ್ವೀಟ್​​ನಲ್ಲಿ ಹೇಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಸಂದೇಶವೊಂದು ಭಗತ್ ಸಿಂಗ್ ಅವರ ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅವರ ಕಾಲದ ಉನ್ನತ ವಕೀಲರು ಅವರ ಪರವಾಗಿ ವಾದಿಸಲಿಲ್ಲ ಎಂದು ಹೇಳುತ್ತದೆ.  ರಿಷಿ ಬಾಗ್ರೀ ಎಂಬವರು ಈ ಟ್ವೀಟ್ ಮಾಡಿದ್ದು”ಮೋಹನ್‌ದಾಸ್ ಕರಮಚಂದ್ ಗಾಂಧಿ (Mohandas Karamchand Gandhi), ಜವಾಹರಲಾಲ್ ನೆಹರು ಮತ್ತು ಮೊಹಮ್ಮದ್ ಅಲಿ ಜಿನ್ನಾ ಅವರು ಆ ಕಾಲದ ಟಾಪ್ ವಕೀಲರು ಮತ್ತು ಬ್ಯಾರಿಸ್ಟರ್‌ಗಳಾಗಿದ್ದರು, ಭಗತ್‌ಸಿಂಗ್ ಪರ ವಾದಿಸಿಲ್ಲ ಯಾಕೆ? ಎಂದು ಕೇಳಿದ್ದಾರೆ. ಹಲವಾರು ಟ್ವೀಟಿಗರು ಇದೇ ಟ್ವೀಟ್ ಪುನರಾವರ್ತಿಸಿದ್ದು, ರೀಟ್ವೀಟ್ ಮಾಡಿದ್ದಾರೆ.

ಫ್ಯಾಕ್ಟ್ ಚೆಕ್ 

ಲಾಜಿಕಲ್ ಇಂಡಿಯನ್  ಫ್ಯಾಕ್ಟ್ ಚೆಕ್ (Fact Check) ತಂಡವು ಈ ವೈರಲ್ ಟ್ವೀಟ್​​ನಲ್ಲಿರುವ ಸಂಗತಿಯನ್ನು ಪರಿಶೀಲಿಸಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ವರದಿ ಮಾಡಿದೆ.ತಮ್ಮ ಪರ ವಕೀಲರು ವಾದ ಮಾಡುವುದನ್ನು ಭಗತ್ ಸಿಂಗ್ ನಿರಾಕರಿಸಿದ್ದರು. ಅವರು ಎರಡು ನ್ಯಾಯಾಲಯದ ವಿಚಾರಣೆಗಳನ್ನು ಎದುರಿಸಿದ್ದಾರೆ. 1929 ರ ಸೆಂಟ್ರಲ್ ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣ ಮತ್ತು 1928ರ ಲಾಹೋರ್ ಪಿತೂರಿ ಪ್ರಕರಣದಲ್ಲಿ ಅವರು ನ್ಯಾಯಾಲದ ವಿಚಾರಣೆಗೊಳಪಟ್ಟಿದ್ದರು. ‘Bhagat Singh lawyer’ ಕೀವರ್ಡ್‌ ಬಳಸಿ ಗೂಗಲ್ ಸರ್ಚ್ ಮಾಡಿದಾಗ ಆಗಸ್ಟ್ 15, 2011 ರಂದು ಪ್ರಕಟವಾದ ದಿ ಹಿಂದೂ ಪತ್ರಿಕೆಯ ಲೇಖನ ಸಿಕ್ಕಿದೆ. ಭಗತ್ ಸಿಂಗ್ ಎರಡು ವಿಚಾರಣೆ ಎದುರಿಸಿದರು ಎಂದು ಹಿಂದೂ ವರದಿ ಉಲ್ಲೇಖಿಸುತ್ತದೆ. ಭಗತ್ ಸಿಂಗ್ ಕಾನೂನು ಸಲಹೆಗಾರರ ಸಹಾಯದಿಂದ ಅವರು ತಮ್ಮ ಪ್ರಕರಣದಲ್ಲಿ ಸ್ವತಃ ವಾದ ಮಾಡಿದ್ದರು ಎಂದು ಹಿಂದೂ ಲೇಖನದಲ್ಲಿ ಉಲ್ಲೇಖಿಸಲಾಗಿದೆ.

ಲೇಖನದಲ್ಲಿ ಕಾನೂನು ವಿದ್ವಾಂಸ ಎ.ಜಿ.ನೂರಾನಿ ಅವರ ‘ದಿ ಟ್ರಯಲ್ ಆಫ್ ಭಗತ್ ಸಿಂಗ್: ಪಾಲಿಟಿಕ್ಸ್ ಆಫ್ ಜಸ್ಟಿಸ್’ ಪುಸ್ತಕವನ್ನು ಉಲ್ಲೇಖಿಸಲಾಗಿದೆ. ಈ ಪುಸ್ತಕದ 33 ನೇ ಪುಟದಲ್ಲಿ ವಕೀಲರ ಉಲ್ಲೇಖ ಇದೆ . ಏಪ್ರಿಲ್ 8, 1929 ರಂದು, ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಅವರು ದೆಹಲಿಯ ಕೇಂದ್ರ ಶಾಸನ ಸಭೆಯ ಮೇಲೆ ರಾಜಕೀಯ ಕರಪತ್ರ ಮತ್ತು ಬಾಂಬ್ ಎಸೆದರು . ಬಾಂಬ್ ದಾಳಿಯ ಉದ್ದೇಶವು ಹಾನಿಯನ್ನುಂಟುಮಾಡುವುದಲ್ಲ,  ಆದರೆ ಎರಡು ದಮನಕಾರಿ ಮಸೂದೆಗಳ ಅಂಗೀಕಾರದ ವಿರುದ್ಧ ಪ್ರತಿಭಟಿಸುವುದಾಗಿತ್ತು.  ಪ್ರಕರಣದ ವಿಚಾರಣೆಯು ಮೇ 7, 1929 ರಂದು ಜಿಲ್ಲಾ ಕಾರಾಗೃಹದಲ್ಲಿ ಪ್ರಾರಂಭವಾಯಿತು, ಅಲ್ಲಿ ಅಸಫ್ ಅಲಿ ಅವರು ಪ್ರತಿವಾದಕ್ಕೆ ಹಾಜರಾಗಿದ್ದರು, ಆದರೆ ರಾಯ್ ಬಹದ್ದೂರ್ ಸೂರಜ್ ನರೇನ್ ಪ್ರಾಸಿಕ್ಯೂಷನ್ ಪರವಾಗಿ ಕಾಣಿಸಿಕೊಂಡರು. ಭಗತ್ ಸಿಂಗ್ ತನ್ನ ಕುಟುಂಬದವರಲ್ಲಿ ಎಲ್ಲವೂ ಸರಿ ಇದೆ “ವಕೀಲರ ಅಗತ್ಯವಿಲ್ಲ” ಎಂದು ತಿಳಿಸಿದ್ದರು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಪುಸ್ತಕದ 52ನೇ ಪುಟದಲ್ಲಿ ಭಗತ್ ಸಿಂಗ್ ವಕೀಲರು ಬೇಡ ಎಂದು ಹೇಳಿರುವುದು ಇದೆ. ಭಗತ್ ಸಿಂಗ್ ಅವರು ವಕೀಲರನ್ನು ಆಯ್ಕೆ ಮಾಡಿಕೊಂಡಿದ್ದಾರೆಯೇ ಎಂದು ಪರಿಶೀಲಿಸಲು ನಾವು ಇತರ ಮೂಲಗಳನ್ನು ಪರಿಶೀಲಿಸಿದಾಗ ಇಂಡಿಯನ್  ಕಲ್ಚರ್  ಪೋರ್ಟಲ್‌ನಲ್ಲಿ ‘Lahore Conspiracy Case, 1930 Proceedings’ ಎಂಬ ಈ ದಾಖಲೆ ಸಿಕ್ಕಿದೆ. ಡಾಕ್ಯುಮೆಂಟ್‌ನ ಪುಟ 13 ರಲ್ಲಿ ಸಿಂಗ್ ಅವರು ಕಾನೂನು ಸಲಹೆಗಾರರನ್ನು ಮಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ವಕೀಲರನ್ನು ಅಲ್ಲ ಎಂದು ಉಲ್ಲೇಖಿಸಿದ್ದಾರೆ.

ಜವಾಹರಲಾಲ್ ನೆಹರು ಮತ್ತು ಭಗತ್ ಸಿಂಗ್ ನಡುವೆ ಯಾವುದೇ ಸಂವಹನ ನಡೆದಿತ್ತೇ ಹುಡುಕಿದಾಗ 2018 ಮೇ 10, ರಂದು ಪ್ರಕಟವಾದ ದಿ ಪ್ರಿಂಟ್‌ನ ಲೇಖನ ಸಿಕ್ಕಿದೆ. ಭಗತ್ ಸಿಂಗ್ ನಂತರ, ರಾಜ್‌ಗುರು ಮತ್ತು ಸುಖದೇವ್ ಜೈಲಿನಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು ಎಂದು ಪ್ರಿಂಟ್ ಲೇಖನದಲ್ಲಿದೆ. ಅವರ ಸ್ಥಿತಿ ಹದಗೆಟ್ಟಾಗ ನೆಹರೂ ಅವರನ್ನು ಜೈಲಿನಲ್ಲಿ ಭೇಟಿ ಮಾಡಿದರು. ಭಗತ್ ಸಿಂಗ್, ಬಟುಕೇಶ್ವರ ಭಟ್ ಮತ್ತು ಜತೀಂದ್ರನಾಥ ದಾಸ್ ಮತ್ತು ಲಾಹೋರ್ ಪಿತೂರಿ ಪ್ರಕರಣದ ಇತರ ಎಲ್ಲ ಆರೋಪಿಗಳನ್ನು ಭೇಟಿ ಮಾಡಿದ್ದೇನೆ ಎಂದು ನೆಹರು ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ.

ಮಹಾತ್ಮಾ ಗಾಂಧಿಯವರು ಭಗತ್ ಸಿಂಗ್ ಮತ್ತು ಲಾಹೋರ್ ಪಿತೂರಿ ಪ್ರಕರಣದ ಇತರ ಆರೋಪಿಗಳಿಗೆ ರಕ್ಷಿಸಲು ಪ್ರಯತ್ನಿಸಿದರು ಎಂದು ಪ್ರಿಂಟ್ ಲೇಖನ ಉಲ್ಲೇಖಿಸುತ್ತದೆ. ವರದಿಯ ಪ್ರಕಾರ, 1931 ರ ಮಾರ್ಚ್ 19 ರಂದು, ಗಾಂಧಿಯವರು ಬ್ರಿಟಿಷ್ ಇಂಡಿಯಾದ ಮಾಜಿ ಗವರ್ನರ್ ಜನರಲ್ ಮತ್ತು ವೈಸರಾಯ್ ಲಾರ್ಡ್ ಇರ್ವಿನ್ ಅವರನ್ನು ಕ್ಷಮಾದಾನದ ಮನವಿಗಾಗಿ ಭೇಟಿಯಾದರು. ಆದಾಗ್ಯೂ, ಮನವಿಯನ್ನು ಪರಿಗಣಿಸಲಿಲ್ಲ ಮತ್ತು ನಾಲ್ಕು ದಿನಗಳ ನಂತರ ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ನೆಹರೂ ಅವರು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುವ ನಿರ್ಣಯವನ್ನು ಕಾಂಗ್ರೆಸ್‌ನಲ್ಲಿ ಅಂಗೀಕರಿಸಿದರು. “ಈ ತ್ರಿವಳಿ ಮರಣದಂಡನೆಯು ಉದ್ದೇಶಪೂರ್ವಕವಾಗಿ ಪ್ರತೀಕಾರದ ಕ್ರಿಯೆಯಾಗಿದೆ ಮತ್ತು ಇದು ದೇಶಾಂತರದ ಸರ್ವಾನುಮತದ ಬೇಡಿಕೆಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತದೆ ಎಂದು ಈ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ” ಎಂದು ನಿರ್ಣಯದಲ್ಲಿದೆ.

ಎ.ಜಿ ನೂರಾನಿಯವರ ಪುಸ್ತಕದ, ಪುಟ 233 ರಲ್ಲಿ, ‘Gandhi’s Truth’ ಅಧ್ಯಾಯದಲ್ಲಿ, ಭಗತ್ ಸಿಂಗ್ ಅವರ ಮರಣದಂಡನೆಯನ್ನು ಅಮಾನತುಗೊಳಿಸುವಂತೆ ಗಾಂಧಿಯವರು ಲಾರ್ಡ್ ಇರ್ವಿನ್‌ಗೆ ಮಾಡಿದ ಮನವಿಯ ಕುರಿತು ಹೆಚ್ಚಿನ ವಿವರಗಳನ್ನು ಒದಗಿಸಿದ್ದಾರೆ. ಅದೇ ಪುಸ್ತಕದಲ್ಲಿ, ಮೊಹಮ್ಮದ್ ಅಲಿ ಜಿನ್ನಾ ಅವರು ಸೆಪ್ಟೆಂಬರ್ 12, 1929 ರಂದು ಕೇಂದ್ರ ಅಸೆಂಬ್ಲಿಯ ಸಭೆಯಲ್ಲಿ ಭಗತ್ ಸಿಂಗ್ ಪರ ಅವರ ಸಮರ್ಥನೆಯನ್ನು ದಾಖಲಿಸಿದ್ದಾರೆ. ಉಪವಾಸ ಸತ್ಯಾಗ್ರಹ ಮಾಡುವ ಮನುಷ್ಯನಿಗೆ ಆತ್ಮವಿದೆ, ಅವನು ಆ ಆತ್ಮದಿಂದ ಪ್ರೇರಿತನಾಗಿರುತ್ತಾನೆ ಮತ್ತು ಅವನು ನ್ಯಾಯವನ್ನು ನಂಬುತ್ತಾನೆ.ಅವನು ಸಾಮಾನ್ಯ ಅಪರಾಧಿಯಲ್ಲ, ಅವನು ತಣ್ಣನೆಯ ರಕ್ತದ, ಕ್ರೂರ, ದುಷ್ಟ ಅಪರಾಧದ ತಪ್ಪಿತಸ್ಥನಲ್ಲ ಎಂದು ಜಿನ್ನಾ ಉಲ್ಲೇಖಿಸಿದ್ದಾರೆ. ಭಗತ್ ಸಿಂಗ್ ಅವರ ಕಾರ್ಯಗಳನ್ನು ನಾನು ಒಪ್ಪುವುದಿಲ್ಲ ಎದು ಜಿನ್ನಾ ಹೇಳುತ್ತಾರೆ. “ಅಂತಹ ಅಪರಾಧಗಳು ನಡೆಯುವುದನ್ನು ನೀವು ತಡೆಯಲು ಸಾಧ್ಯವಿಲ್ಲ, ನೀವು ಎಷ್ಟೇ ಖಂಡಿಸಿದರೂ ಮತ್ತು ಅವು ದಾರಿತಪ್ಪಿವೆ ಎಂದು ನೀವು ಎಷ್ಟೇ ಹೇಳಬಹುದು. ಇದು ವ್ಯವಸ್ಥೆ, ಈ ಖಂಡನೀಯ ಆಡಳಿತ ವ್ಯವಸ್ಥೆ, ಇದು ಜನರ ಅಸಮಾಧಾನಕ್ಕೆ ಒಳಗಾಗಿದೆ ಎಂದು ಜಿನ್ನಾ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.