Fact Check: ರಸ್ತೆ ಮೇಲೆ ಬರೆದ Go Back Modi ಬರಹದ ಚಿತ್ರದ ಅಸಲಿಯತ್ತು ಇಲ್ಲಿದೆ | Fact Check of Go Back Modi Image Campaign


Fact Check: ರಸ್ತೆ ಮೇಲೆ ಬರೆದ Go Back Modi ಬರಹದ ಚಿತ್ರದ ಅಸಲಿಯತ್ತು ಇಲ್ಲಿದೆ

ಗೋ ಬ್ಯಾಕ್ ಮೋದಿ

ಪ್ರಧಾನಿ ಮೋದಿ ಅವರಿಗೆ ಜನರು “ಗೋ ಬ್ಯಾಕ್ ಮೋದಿ” ಎಂದು ರಸ್ತೆಗಳ ಮೇಲೆ ಬರಹಗಳನ್ನು ಬರೆದು ಪ್ರಧಾನಿ ಮೋದಿಯವರು ತಮಿಳುನಾಡಿಗೆ ಬರುವುದನ್ನು ಜನರು ವಿರೋಧಿಸಿದರು ಎಂದು ಟ್ವಿಟರ್​ನಲ್ಲಿ ಸಾಕಷ್ಟು ಜನರು ಪೋಟೊವನ್ನು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂಧ್ರ ಮೋದಿ (Narandra Modi) ಅವರು ಗುರುವಾರ (ಮೇ 26)  ರಂದು ವಿವಿಧ ಯೋಜನೆಗಳ ಚಾಲನೆಗೆ ತಮಿಳುನಾಡಿಗೆ ತೆರಳಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಜನರು “ಗೋ ಬ್ಯಾಕ್ ಮೋದಿ” ಎಂದು ರಸ್ತೆಗಳ ಮೇಲೆ ಬರಹಗಳನ್ನು ಬರೆದು ಪ್ರಧಾನಿ ಮೋದಿಯವರು ತಮಿಳುನಾಡಿಗೆ ಬರುವುದನ್ನು ಜನರು ವಿರೋಧಿಸಿದರು ಎಂದು ಟ್ವಿಟರ್​ನಲ್ಲಿ ಸಾಕಷ್ಟು ಜನರು ಪೋಟೊವನ್ನು ಟ್ವೀಟ್ ಮಾಡಿದ್ದಾರೆ. ಆದರೆ ಇದು ಸತ್ಯವೇ? ಇದರ ಸಲಿಯತ್ತು ಏನು ಇಲ್ಲದೆ.

ಇದನ್ನು ಓದಿ: ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..

ಟ್ವಿಟರ್ (Twitter) ಮತ್ತು ಫೇಸ್‌ಬುಕ್‌ನಲ್ಲಿ (Facebook) ಹಲವಾರು ಜನರು #GoBackModi ಮತ್ತು #GoBackFascistModi ನಂತಹ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಈ ಫೋಟೋ ಹೊಸದಲ್ಲ ಅಥವಾ ಚೆನ್ನೈನಿಂದ ಬಂದದ್ದಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಜನವರಿ 2020 ರಲ್ಲಿ, ಕೋಲ್ಕತ್ತಾದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರು ಪ್ರಧಾನಿಯ ಭೇಟಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಲು ಈ ಬರಹವನ್ನು ಚಿತ್ರಿಸಿದರು.

ಇದನ್ನು ಓದಿ: ಬೇಸಿಗೆಯಲ್ಲಿ ಗರ್ಭಿಣಿಯರು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಸಲಹೆಗಳು

ಚಿತ್ರವನ್ನು ಸೂಕ್ಷಮವಾಗಿ ಗಮನಿಸುವುದಾರೇ  ಜನರು ಚಳಿಗಾಲದ ಉಡುಗೆಗಳನ್ನು ಧರಿಸಿರುವುದನ್ನು ಕಾಣಬಹುದು, ಇದು ಮೇ ತಿಂಗಳಲ್ಲಿ ಚೆನ್ನೈನಲ್ಲಿ ಸಂಭವಿಸುವ ಸಾಧ್ಯತೆಯಿಲ್ಲ. ಈ ಚಿತ್ರದ ಕುರಿತು ಜನವರಿ 12 2020 ರಿಂದ Ei Somoy ವರದಿ ಮಾಡಿತ್ತು. ವರದಿ ಪ್ರಕಾರ  ಬರಹದ ಸ್ಥಳವು ಮೆಟ್ರೋ ಚಾನೆಲ್ ಬಳಿ ಇದೆ ಎಂದು ಬಂಗಾಳಿ ಸುದ್ದಿ ಪೋರ್ಟಲ್ ವರದಿ ಮಾಡಿದೆ. “ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್, ಹರೇ ಸ್ಟ್ರೀಟ್ ಪೊಲೀಸ್ ಸ್ಟೇಷನ್” ಎಂಬ ಪದಗಳನ್ನು  ಫೋಟೋದಲ್ಲಿ ಕಂದು ಬಣ್ಣದಲ್ಲಿ ಕಾಣಬಹುದು.

 “ಮೆಟ್ರೋ ಚಾನೆಲ್ ಕಂಟ್ರೋಲ್ ಪೋಸ್ಟ್, ಹೇರ್ ಸ್ಟ್ರೀಟ್ ಪೋಲೀಸ್ ಸ್ಟೇಷನ್” ಗಾಗಿ Google Maps ನಲ್ಲಿ ಹುಡುಕಿದಾಗ  ನಾವು ಕಂಡುಕೊಂಡ ಫೋಟೋಗಳು ಮತ್ತು ವೈರಲ್ ಶಾಟ್‌ಗಳ ನಡುವೆ ನಮಗೆ ಸಂಪೂರ್ಣ ಹೋಲಿಕೆಗಳು ಕಂಡುಬಂದವು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

TV9 Kannada


Leave a Reply

Your email address will not be published. Required fields are marked *