Fact Check: ಹಿಂದೂ ಹುಡುಗಿಯರ ಒಗ್ಗಟ್ಟು, ಕೇರಳದಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದಾಗ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ ಈ ವಿಡಿಯೊದ ಫ್ಯಾಕ್ಟ್ ಚೆಕ್ ಇಲ್ಲಿದೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೇರಳದ ವಿಡಿಯೊ
ಮಹಿಳೆಯರ ಗುಂಪೊಂದು ವ್ಯಕ್ತಿಯೊಬ್ಬನಿಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. 1 ನಿಮಿಷದ 45 ಸೆಕೆಂಡ್ಗಳ ಈ ವಿಡಿಯೊದಲ್ಲಿ ಮಹಿಳೆಯರು ವ್ಯಕ್ತಿಯನ್ನು ಬೆನ್ನಟ್ಟಿ ದೊಣ್ಣೆಯಿಂದ ಥಳಿಸುತ್ತಿರುವುದನ್ನು ಕಾಣಬಹುದು. ಬಳಿಕ ಅಲ್ಲಿದ್ದ ಕಾರಿನ ಮೇಲೂ ದಾಳಿ ಮಾಡಿದ್ದಾರೆ. ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ವ್ಯಕ್ತಿಗೆ ಥಳಿಸುತ್ತಿರುವ ಹಿಂದೂ ಮಹಿಳೆಯರು ಎಂಬ ಬರಹದೊಂದಿಗೆ ಇದು ವ್ಯಾಪಕವಾಗಿ ಶೇರ್ ಆಗುತ್ತಿದೆ. ಟ್ವಿಟರ್ (Twitter) ಬಳಕೆದಾರರು ಈ ವಿಡಿಯೊವನ್ನು “ಹಿಂದೂ ಹುಡುಗಿಯರ ಒಗ್ಗಟ್ಟು, ಕೇರಳದಲ್ಲಿ (Kerala) ಮುಸ್ಲಿಂ ವ್ಯಕ್ತಿ ಹಿಂದೂ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದಾಗ.. ಜೈ ಹಿಂದ್…!” ಎಂದು ಟ್ವೀಟ್ ಮಾಡಿದ್ದಾರೆ.ಈ ವಿಡಿಯೊವನ್ನು ಹಂಚಿಕೊಂಡ ಫೇಸ್ಬುಕ್ ಬಳಕೆದಾರರು “ಕೇರಳದಲ್ಲಿ ಅನುಚಿತವಾಗಿ ವರ್ತಿಸಿದ ಮುಸ್ಲಿಂ ವ್ಯಕ್ತಿಗೆ ಹಿಂದೂ ಹುಡುಗಿಯರು ಬಾರಿಸಿದ್ದಾರೆ. ಕೇರಳದಲ್ಲಿ ಜಾಗೃತಿ ಪ್ರಾರಂಭವಾಗಿದೆ. ಬೆಂಕಿ ಉರಿಯುತ್ತಿರಲಿ ಎಂದು ಆಶಿಸೋಣ. ಲವ್ ಜಿಹಾದ್ ಅನ್ನು ತಡೆಯಲು ಇದು ಸರಿಯಾದ ಮಾರ್ಗವಾಗಿದೆ. ನಮ್ಮ ಹುಡುಗಿಯರು ಮುಸ್ಲಿಮರಿಗೆ ಅವರ ದುರ್ಗಾ ಅವತಾರ್ ತೋರಿಸಬೇಕು. ಮಾತೃಶಕ್ತಿ ಜಾಗ್ ಉಠೀ” ಎಂದಿದ್ದಾರೆ.
ಇದೇ ರೀತಿಯ ಹೇಳಿಕೆಯೊಂದಿಗೆ ಇದನ್ನು ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
ತಾಜಾ ಸುದ್ದಿ
👆👞🤜 In Kerala Hindu girls attacked a Muslim man for his obnoxious and shameful misbehaviour. The awakening has started in Kerala. Let’s hope the fire rages on. This is the right way to stop Love jihad. Our girls must show their DURGA AVTAR to chuslims. 💪 pic.twitter.com/rSqZ0K2F56
— Amarendra Mishra (@Amarend21195351) January 25, 2023
ಫ್ಯಾಕ್ಟ್ ಚೆಕ್
ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಲಾಜಿಕಲ್ ಇಂಡಿಯನ್ ವೈರಲ್ ವಿಡಿಯೊ ತಪ್ಪಾದ ಬರಹದೊಂದಿಗೆ ಶೇರ್ ಆಗುತ್ತಿದೆ ಎಂದು ವರದಿ ಮಾಡಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಥಳಿತಕ್ಕೊಳಗಾದ ವ್ಯಕ್ತಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವನು. InVid ಟೂಲ್ ಬಳಸಿ ವೈರಲ್ ವಿಡಿಯೊದಿಂದ ವಿವಿಧ ಕೀ ಫ್ರೇಮ್ಗಳನ್ನು ತೆಗೆದು Google ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದಾಗ 2023 ಜನವರಿ 8ರಂದು HW ನ್ಯೂಸ್ನ ವರದಿ ಸಿಕ್ಕಿದೆ. ಈ ವರದಿಯ ಪ್ರಕಾರ ಕೇರಳದ ತ್ರಿಶೂರ್ ಜಿಲ್ಲೆಯ ಆಲೂರ್ ಪೊಲೀಸರು, ವ್ಯಕ್ತಿ ಮತ್ತು ಅವನ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ ಹನ್ನೊಂದು ಮಹಿಳೆಯರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಹಿಳೆಯರ ಮಾರ್ಫ್ ಮಾಡಿದ ಫೋಟೋಗಳನ್ನು ಈತ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಶಾಜಿ ಎಂದು ಗುರುತಿಸಲಾದ ವ್ಯಕ್ತಿ ಮತ್ತು ಅವರ ಕುಟುಂಬ ಇತ್ತೀಚೆಗೆ ಚರ್ಚ್ಗೆ ಹೋಗುವುದನ್ನು ನಿಲ್ಲಿಸಿದ್ದರು. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರ ಪ್ರಕಾರ 50 ಕ್ಕೂ ಹೆಚ್ಚು ಮಹಿಳೆಯರು ಶಾಜಿ ಅವರ ಕಾರನ್ನು ತಡೆದು ಶಾಜಿ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.