Faf du Plessis: ಫಾಪ್ ಡುಪ್ಲೆಸಿಸ್ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಏನು ಹೇಳಿದ್ರು ಗೊತ್ತೇ? | Faf du Plessis at the post match presentation ceremony takling about Virat Kohli Here is what he said


Faf du Plessis: ಫಾಪ್ ಡುಪ್ಲೆಸಿಸ್ ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಏನು ಹೇಳಿದ್ರು ಗೊತ್ತೇ?

Virat Kohli and Faf Duplessis

RCB vs GT: ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ ಆರ್​ಸಿಬಿ ತಂಡ ಗುಜರಾತ್ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದು ಬೀಗಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಡುಪ್ಲೆಸಿಸ್ (Faf du Plessis) ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

ಐಪಿಎಲ್ 2022 ಟೂರ್ನಿಯಿಂದ ಹೊರ ಬೀಳುವ ಭೀತಿಯಲ್ಲಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (RCB vs GT) ಅನ್ನು ಸೋಲಿಸಿ ಪ್ಲೇ ಆಫ್ ಆಸೆಯನ್ನ ಇನ್ನೂ ಜೀವಂತವಾಗಿರಿಸಿದೆ. ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿಸ್ ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ ಆರ್​ಸಿಬಿ ತಂಡ 8 ವಿಕೆಟ್‌ಗಳಿಂದ ಗೆದ್ದು ಬೀಗಿತು. ಜಿಟಿ ಬೌಲರ್​​ಗಳನ್ನು ಬೆಂಡೆತ್ತಿದ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಫಾರ್ಮ್​​ಗೆ ಮರಳಿಸಿದರು. ಗ್ಲೆನ್ ಮ್ಯಾಕ್ಸ್​ವೆಲ್ (Glenn Maxwell) ಕೂಡ ಅಂತಿಮ ಹಂತದಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲು ಬ್ಯಾಟಿಂಗ್ ಗುಜರಾತ್ ತಂಡ ಹಾರ್ದಿಕ್ ಪಾಂಡ್ಯ (62* ರನ್) ಬಿರುಸಿನ ಬ್ಯಾಟಿಂಗ್ ಫಲವಾಗಿ 5 ವಿಕೆಟ್‌ಗೆ 168 ರನ್ ಪೇರಿಸಿತು. ಪ್ರತಿಯಾಗಿ ಆರ್‌ಸಿಬಿ 18.4 ಓವರ್‌ಗಳಲ್ಲಿ 2 ವಿಕೆಟ್‌ಗೆ 170 ರನ್‌ಗಳಿಸಿ ಗೆಲುವಿನ ನಗೆ ಬೀರಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಪ್ ಡುಪ್ಲೆಸಿಸ್ (Faf du Plessis) ವಿಶೇಷ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

“ಈ ಇಡೀ ಟೂರ್ನಿಯಲ್ಲಿ ನಾವು ಅಂದುಕೊಂಡಂತೆ ಹೆಚ್ಚಿನ ಸಂಗತಿಗಳು ನಡೆದಿಲ್ಲ. ಆದರೂ ನೀವು ಈ ಸ್ಟಾರ್ ಆಟಗಾರರನ್ನು ಬೆಂಬಲಿಸಲೇಬೇಕು. ವಿರಾಟ್ ಕೊಹ್ಲಿ ನೆಟ್ಸ್​​ನಲ್ಲಿ ತುಂಬಾ ಸಮಯ ಅಭ್ಯಾಸ ನಡೆಸಿದ್ದಾರೆ. ನನ್ನದು ಅವರ ಜೊತೆ ನಿಂತು ಕೊಳ್ಳುವ ಪಾತ್ರ ಮತ್ತು ಕೊಹ್ಲಿ ಬಿರುಸಿನ ಆಟವಾಡುತ್ತಾರೆ. ಕೊಹ್ಲಿ ಪಂದ್ಯದ ಸಂದರ್ಭ ಹೆಚ್ಚು ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ ಜೊತೆಗೆ ಅದರಲ್ಲಿ ನಮ್ಮನ್ನೂ ಸೇರ್ಪಡೆಗೊಳಿಸುತ್ತಾರೆ,” ಎಂದು ಹೇಳಿದ್ದಾರೆ.

“ಗ್ಲೆನ್ ಮ್ಯಾಕ್ಸ್​ವೆಲ್ ಹಿಡಿದ ಕ್ಯಾಚ್ ಅಂತು ಅದ್ಭುತವಾಗಿತ್ತು. ನಾವು ಪವರ್ ಪ್ಲೇನಲ್ಲಿ ವಿಕೆಟ್ ಪಡೆಯಲು ಶ್ರಮ ವಹಿಸುತ್ತಿದ್ದೆವು. ಆ ರನೌಟ್ ಕೂಡ ನಮ್ಮ ತಂಡಕ್ಕೆ ಅತ್ಯುತ್ತಮವಾಯಿತು. ಇಂದಿನ ಪಂದ್ಯ ನಮಗೆ ಮುಖ್ಯವಾಗಿತ್ತು. ಪ್ರತಿ ತಂಡ ಕೂಡ ಒಂದು ಪಂದ್ಯವನ್ನು ಸ್ಟ್ರಾಂಗ್ ಆಗಿ ಫಿನಿಶ್ ಮಾಡಲು ನೋಡುತ್ತಿರುತ್ತದೆ. ಕೆಲವು ಕೆಟ್ಟ ಪ್ರದರ್ಶನದಿಂದ ನಾವು ಇಂದು ಈ ಸ್ಥಿತಿಯಲ್ಲಿದ್ದೇವೆ. ರೋಹಿತ್ ಅವರಿಗೆ ಮುಂದಿನ ಪಂದ್ಯದಲ್ಲಿ ಒಳ್ಳೆಯದಾಗಲೆಂದು ಹಾರೈಸುತ್ತೇನೆ,” ಎಂಬುದು ಫಾಪ್ ಡುಪ್ಲೆಸಿಸ್ ಮಾತಾಗಿತ್ತು.

Virat Kohli: ಪಂದ್ಯಶ್ರೇಷ್ಠ ಸ್ವೀಕರಿಸುವ ವೇಳೆ ವಿರಾಟ್ ಕೊಹ್ಲಿಯಿಂದ ಅಚ್ಚರಿ ಹೇಳಿಕೆ: ಏನಂದ್ರು ಕೇಳಿ

ಇನ್ನು ಸೋತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, “ಈ ಪಂದ್ಯದಲ್ಲಿ ಚೆಂಡು ನಿಂತು ಬರುತ್ತಿತ್ತು. ಹೀಗಾಗಿ 168 ರನ್​ ನಮಗೆ ಸಮಾಧಾನ ತಂದಿದೆ. ಲೂಕಿ ಫರ್ಗುಸನ್​ಗೆ ಹೆಚ್ಚಿನ ಓವರ್ ಬೌಲಿಂಗ್ ನೀಡದಿರಲು ಕಾರಣವಿದೆ. ವಿಕೆಟ್​ಗೆ ಚೆಂಡು ನಿಂತು ಬರುತ್ತಿದ್ದ ಕಾರಣ ಸ್ಲೋ ಆಗಿ ಚೆಂಡನ್ನು ಹಾಕುವವರಿಗೆ ಅವಕಾಶ ನೀಡಿದೆ. ಈ ಪಿಚ್ ವೇಗಿಗಳಿಗೆ ಸಹಾಯ ಮಾಡಲಿಲ್ಲ. ನಾವು ಮಧ್ಯಮ ಓವರ್​ನಲ್ಲಿ ಹಿಡಿತ ಸಾಧಿಸಿದ್ದೆವು. ಆದರೆ, ಕೊನೆಯಲ್ಲಿ ಮ್ಯಾಕ್ಸ್​ವೆಲ್ ಆಡಿದ್ದರಿಂದ ನಾವು 10 ರನ್ ಕಡಿಮೆ ಹೊಡೆದೆವು ಅನಿಸಿತು. ನಾವು ಉತ್ತಮ ದಾರಿಯಲ್ಲೇ ಇದ್ದೇವೆ, ಕೆಲ ತಪ್ಪುಗಳನ್ನು ಸರಿಪಡಿಸಬೇಕಿದೆ,” ಎಂದು ಹೇಳಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡ ವಿರಾಟ್ ಕೊಹ್ಲಿ ಕೂಡ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ. “ನನ್ನ ತಂಡಕ್ಕೆ ನನ್ನಿಂದ ಏನೂ ಕೊಡುಗೆ ನೀಡಲು ಸಾಧ್ಯ ಆಗುತ್ತಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ಇದರಿಂದ ತುಂಬಾ ದುಃಖಿತನಾಗಿದ್ದೆ. ಈ ಪಂದ್ಯ ನಮಗೆ ತುಂಬಾ ಮುಖ್ಯವಾಗಿತ್ತು. ನಾನಂತು ಆಡಲೇಬೇಕಿತ್ತು. ಏನಾದರು ತಂಡಕ್ಕೆ ಕೊಡುಗೆ ಸಲ್ಲಿಸಬೇಕು ಎಂದಿದ್ದರೆ ಅದು ಇಂದಿನ ಪಂದ್ಯದಲ್ಲೇ ಆಗಬೇಕು ಎಂಬ ನಂಬಿಕೆಯಿಟ್ಟಿದ್ದೆ. ಇದಕ್ಕಾಗಿ ಸಾಕಷ್ಟು ಕಠಿಣ ಪರಿಶ್ರಮ ನಡೆಸಿ ಬಂದಿದ್ದೇನೆ. ಬ್ಯಾಟಿಂಗ್ ವೇಳೆ ತನ್ನ ಮೇಲೆ ತನಗೇ ಅನುಮಾನ ಬಾರದಂತೆ ನೋಡಿಕೊಂಡಿದ್ದೇನೆ. ಈ ಪಂದ್ಯದಲ್ಲಿ ನಾನು ಉತ್ತಮ ಪ್ರದರ್ಶನ ನೀಡುತ್ತೇನೆಂದು ನನಗೆ ಗೊತ್ತಿತ್ತು,” ಎಂದು ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *