Farm Laws Repeal ಮೂರು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಂಪುಟ ಅಸ್ತು | A bill to withdraw the three controversial farm laws cleared by the Narendra Modi cabinet

Farm Laws Repeal ಮೂರು ಕೃಷಿ ಕಾಯ್ದೆ ರದ್ದುಗೊಳಿಸುವ ಮಸೂದೆಗೆ ಕೇಂದ್ರ ಸಂಪುಟ ಅಸ್ತು

ನರೇಂದ್ರ ಮೋದಿ

ದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು(farm laws) ಹಿಂಪಡೆಯುವ ಮಸೂದೆಯನ್ನು ನರೇಂದ್ರ ಮೋದಿ(Narendra Modi) ಸಂಪುಟವು ಅಂಗೀಕರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಪ್ರಧಾನಿ  ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದು ಪ್ರತಿಭಟನಾನಿರತ ರೈತರನ್ನು ತಮ್ಮ ಮನೆಗಳಿಗೆ ಮರಳುವಂತೆ ಒತ್ತಾಯಿಸಿದರು. ಸುಮಾರು ಒಂದು ವರ್ಷದಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸತ್ತಿನಲ್ಲಿ ಕಾನೂನುಗಳನ್ನು ಔಪಚಾರಿಕವಾಗಿ ರದ್ದುಪಡಿಸುವವರೆಗೂ ಅವರು ಪ್ರತಿಭಟನಾ ಸ್ಥಳಗಳನ್ನು ಖಾಲಿ ಮಾಡುವುದಿಲ್ಲ ಎಂದು ಅವರು ಪಟ್ಟುಹಿಡಿದಿದ್ದರು. ಕೃಷಿ ಕಾನೂನುಗಳ ರದ್ದತಿ ಮಸೂದೆ, 2021 ಜತೆ 26 ಹೊಸ ಮಸೂದೆಗಳನ್ನು ಅನುಮೋದಿಸಲಾಗಿದೆ. ಸರ್ಕಾರವು ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಒಪ್ಪಂದ, ಕೃಷಿ ಸೇವೆಗಳ ಕಾಯಿದೆ 2020ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020 ಅನ್ನು ರದ್ದುಗೊಳಿಸಲಾಗಿದೆ. ಈ 27 ಹೊಸ ಮಸೂದೆಗಳನ್ನು ಈಗ ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪರಿಚಯಿಸಲಾಗುವುದು.

(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)

TV9 Kannada

Leave a comment

Your email address will not be published. Required fields are marked *