Fast Charging: ಫಾಸ್ಟ್​ ಚಾರ್ಜರ್​ಗಿಂತ ಫಾಸ್ಟ್ ಆಗಿ ನಿಮ್ಮ ಮೊಬೈಲ್ ಚಾರ್ಜ್ ಆಗಬೇಕೆ?: ಇಲ್ಲಿದೆ ನೋಡಿ ಟ್ರಿಕ್ | Fast charging tricks Here is the best tricks to make your phone charge faster


Fast Charging: ಫಾಸ್ಟ್​ ಚಾರ್ಜರ್​ಗಿಂತ ಫಾಸ್ಟ್ ಆಗಿ ನಿಮ್ಮ ಮೊಬೈಲ್ ಚಾರ್ಜ್ ಆಗಬೇಕೆ?: ಇಲ್ಲಿದೆ ನೋಡಿ ಟ್ರಿಕ್

Fast Charging

ಭಾರತದಲ್ಲಿ ಈಗ ಬರೋಬ್ಬರಿ 7000mAh ಬಿಗ್ ಬ್ಯಾಟರಿ ಸಾಮರ್ಥ್ಯವುಳ್ಳ ಸ್ಮಾರ್ಟ್​ಫೋನ್ (7000,Ah Battery Smartphone) ಕೂಡ ಇದೆ. ಇದರಿಂದ ಮೊಬೈಲ್ ಡೇಟಾ 24 ಗಂಟೆ ಆನ್, ಇದರ ನಡುವೆ ಗೇಮ್, ಹೀಗೆ ಮೊಬೈಲ್ (Mobile) ಅನ್ನು ಉಪಯೋಗಿಸಿಕೊಂಡೇ ಇದ್ದರುಕೂಡ ಕಡಿಮೆ ಎಂದರು ಒಂದುವರೆ ದಿನ ಚಾರ್ಜ್ ಬರಬಹುದು. ದೊಡ್ಡ ಬ್ಯಾಟರಿ (Big Battery Smartphone) ಇರುವ ಸ್ಮಾರ್ಟ್​ಫೋನ್​​ಗಳಿಗೇನು ಈಗ ಕೊರತೆಯಿಲ್ಲ. ಆದರೆ, ಇದಕ್ಕೆ ಚಾರ್ಜ್ ಮಾಡಬೇಕಲ್ಲ, ಅದೇ ತೊಂದರೆ. ಈಗ ಫಾಸ್ಟ್ ಚಾರ್ಜ್ (Fast Charging) ಟೆಕ್ನಾಲಜಿ ಇದೆಯಾದರೂ ಅದರಲ್ಲೂ ಜಾರ್ಜ್ ಆಗಲು ಸಮಯವಂತು ಬೇಕೇ ಬೇಕು. ಆದರೆ, ಫಾಸ್ಟ್ ಚಾರ್ಜರ್​ಗಿಂತ (Fast Charger) ಫಾಸ್ಟ್​ ಆಗಿ ನಿಮ್ಮ ಮೊಬೈಲ್ ಅನ್ನು ಆದಷ್ಟು ಬೇಗನೆ ಚಾರ್ಜ್ ಮಾಡಬಹುದು. ಇದಕ್ಕಾಗಿ ಕೆಲವೊಂದು ಟೆಕ್ನಿಕ್​ಗಳಿವೆ. ಅದು ಏನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿಯೋಣ.

ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಬ್ಯಾಟರಿ ನಮಗೆ ತೀರಾ ಅವಶ್ಯವಾಗಿರುವಾಗಲೇ ಖಾಲಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಮೊಬೈಲ್‌ ಫೋನ್‌ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳುವ ಅಗತ್ಯತೆ ಇರುತ್ತದೆ. ಈ ಸಂದರ್ಭ ನೀವು ನಿಮ್ಮ ಫೋನ್‌ ಅನ್ನು ವೇಗವಾಗಿ ಚಾರ್ಜ್ ಮಾಡಿಕೊಳ್ಳಲು ಯಾವುದೇ ಹೆಚ್ಚಿನ ಶ್ರಮವನ್ನು ವಹಿಸುವ ಅಗತ್ಯವೂ ಇಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಸಾಮಾನ್ಯಕ್ಕಿಂತ ವೇಗವಾಗಿ ಚಾರ್ಜ್ ಆಗಬೇಕಾದ ಸಂದರ್ಭದಲ್ಲಿ ನಿಮ್ಮ ಫೋನಿನಲ್ಲಿ ಫ್ಲೈಟ್ ಮೋಡ್ ಆನ್‌ ಮಾಡಿ. ಇದರಿಂದಾಗಿ ನಿಮ್ಮ ಫೋನ್ ಅತೀ ವೇಗವಾಗಿ ಚಾರ್ಜ್ ಆಗಲು ಶುರುವಾಗುತ್ತದೆ. ಕಡಿಮೆ ಅವಧಿಯಲ್ಲಿ ಫೋನ್ ಚಾರ್ಜ್ ಆಗಲಿದೆ. ತುರ್ತು ಸಂದರ್ಭದಲ್ಲಿ ಹೆಚ್ಚಿನ ವೇಗವಾಗಿ ಮೊಬೈಲ್ ಫೋನ್ ಚಾರ್ಜ್ ಆಗಬೇಕು ಎಂದು ಬಯಸಿದರೆ ನೀವು ಈ ಮಾದರಿಯಲ್ಲಿ ಮೊಬೈಲ್‌ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಆದರೆ ಈ ರೀತಿಯಲ್ಲಿ ಮಾಡುವುದರಿಂದ ನಿಮ್ಮ ಫೋನಿಗೆ ಯಾವುದೇ ಕರೆಗಳು, ಮೇಸೆಜ್‌ಗಳು ಬರುವುದಿಲ್ಲ ಎಂಬುದು ನೆನಪಿರಲಿ.

ಇನ್ನೂ ಚಾರ್ಜರ್‌ ವಾಲ್‌ ಮತ್ತು ಕಾರ್‌ ಚಾರ್ಜರ್‌ನಂತೆ ಪೊರ್ಟೆಬಲ್‌ ಚಾರ್ಜರ್‌ಗಳು ಕ್ವಿಕ್‌ ಚಾರ್ಜ್‌ ಸಾಮರ್ಥ್ಯ ಹೊಂದಿದ್ದು, ವೈಯರ್‌ ಅಥವಾ ವೈಯರ್‌ಲೆಸ್‌ ಸಾಧನಗಳಿಗೆ ವೇಗದ ಚಾರ್ಜಿಂಗ್‌ ಅವಕಾಶ ನೀಡುತ್ತವೆ. ಕ್ವಿಕ್ ಚಾರ್ಜ್‌ 3.0 ಮತ್ತು Qi 7.5 ವ್ಯಾಟ್‌ನಷ್ಟು ವೇಗದ ಚಾರ್ಜಿಂಗ್‌ ನೀಡುವ ಸಾಧನಗಳನ್ನು ಈ ಪ್ರಕಾರಗಳಲ್ಲಿ ಕಾಣಬಹುದು. ಗುಣಮಟ್ಟದ ಯುಎಸ್‌ವಿ 3.0 ಚಾರ್ಜರ್‌ಗಳು 1.5 ಆಂಪ್‌ಗಳಷ್ಟು ವಿದ್ಯುತ್ ಪ್ರವಹಿಸಲು ಸಹಾಯ ಮಾಡುತ್ತವೆ. ಯುಎಸ್‌ಬಿ 3.0 ಪೋರ್ಟ್‌ಗೆ ಯುಎಸ್‌ಬಿ 3.0 ಕೇಬಲ್‌ ಬಳಸಿದರೆ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜಿಂಗ್‌ ಆಗುತ್ತದೆ.

ನಿಮ್ಮ ಐಪೋನ್‌ 6 ಮತ್ತು ಇತ್ತೀಚಿನ ಐಫೋನ್‌ಗಳಿಗೆ ಐಪ್ಯಾಡ್‌ ಚಾರ್ಜರ್‌ ಬಳಸಿ. ಈ ಚಾರ್ಜರ್‌ಗಳು 1 ಆ್ಯಂಪ್ ಕ್ಕಿಂತ ಹೆಚ್ಚಿನ ವಿದ್ಯುತ್‌ ಪ್ರವಹಿಸುವುದರಿಂದ ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್‌ ಆಗುತ್ತದೆ. ಅಥವಾ ನಿಮ್ಮ ಮೊಬೈಲ್‌ ವೇಗವಾಗಿ ಚಾರ್ಜಿಂಗ್‌ ಆಗಬೇಕೆಂದರೆ ಚಾರ್ಜಿಂಗ್‌ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಸ್ವಿಚ್‌ ಆಫ್‌ ಮಾಡಿ. ಸ್ವಿಚ್‌ ಆಫ್‌ ಮಾಡುವುದರಿಂದ ಬ್ಯಾಕ್‌ಗ್ರೌಂಡ್‌ನಲ್ಲಿ ಆ್ಯಪ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ಮೂಲಕ ನಗದಿಗಿಂತ ಮೊದಲೇ ನಿಮ್ಮ ಮೊಬೈಲ್ ಚಾರ್ಜ್ ಫುಲ್ ಆಗುತ್ತದೆ.

Redmi Note 11T 5G: ಭಾರತದಲ್ಲಿ ಬಿಡುಗಡೆ ಆಯ್ತು ಮೊಬೈಲ್ ಪ್ರಿಯರ ನಿದ್ದೆ ಕದ್ದ ರೆಡ್ಮಿ ನೋಟ್ 11T 5G ಸ್ಮಾರ್ಟ್​ಫೋನ್: ಬೆಲೆ, ವಿಶೇಷತೆ ಇಲ್ಲಿದೆ

Google Play Best Apps 2021: ಈ ವರ್ಷದ ಬೆಸ್ಟ್​​ ಆ್ಯಪ್ಸ್​​​, ಗೇಮ್ಸ್​ ಯಾವುದು?; ಗೂಗಲ್ ಪ್ಲೇಯಿಂದ ಪಟ್ಟಿ ಬಿಡುಗಡೆ

(fast charging tricks Here is the best tricks to make your phone charge faster)

 

TV9 Kannada

,

Leave a Reply

Your email address will not be published. Required fields are marked *