FD Rates: ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ; ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಹೆಚ್ಚು ಬಡ್ಡಿ? – Fixed Deposit Interest Rates 2022 Which bank has highest FD interest rate for senior citizens SBI vs HDFC vs ICICI Latest personal finance and business news in Kannada


ಆರ್​ಬಿಐ ರೆಪೊ ದರ ಹೆಚ್ಚಿಸಿದ ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳು ಹಿರಿಯ ನಾಗರಿಕರ ಎಫ್​ಡಿಗೆ ನೀಡುತ್ತಿರುವ ಬಡ್ಡಿ ವಿವರ ಇಲ್ಲಿದೆ.

FD Rates: ಎಸ್​ಬಿಐ, ಎಚ್​ಡಿಎಫ್​ಸಿ, ಐಸಿಐಸಿಐ; ಯಾವ ಬ್ಯಾಂಕಲ್ಲಿ ಹಿರಿಯ ನಾಗರಿಕರ ಎಫ್​ಡಿಗೆ ಹೆಚ್ಚು ಬಡ್ಡಿ?

ಸಾಂದರ್ಭಿಕ ಚಿತ್ರ

ಹಿರಿಯ ನಾಗರಿಕರ ಹೂಡಿಕೆಗೆ ಸ್ಥಿರ ಠೇವಣಿ (FD) ಕೂಡ ಒಂದು ಉತ್ತಮ ಆಯ್ಕೆಯಾಗಿದೆ. ಎಸ್​ಬಿಐ (SBI), ಎಚ್​ಡಿಎಫ್​ಸಿ (HDFC), ಐಸಿಐಸಿಐ ಬ್ಯಾಂಕ್​ (ICICI Bank) ಹಾಗೂ ಇತರ ಕೆಲವು ಬ್ಯಾಂಕ್​ಗಳು ಕಳೆದ ಕೆಲವು ತಿಂಗಳುಗಳಲ್ಲಿ ಹಿರಿಯ ನಾಗರಿಕರ ಮತ್ತು ಜನಸಾಮಾನ್ಯರ ಎಫ್​ಡಿ ಬಡ್ಡಿ ದರವನ್ನು (FD Rates) ಹೆಚ್ಚಿಸಿವೆ. ಆರ್​ಬಿಐ ಮೇ ತಿಂಗಳ ಬಳಿಕ ಈವರೆಗೆ ಒಟ್ಟಾರೆಯಾಗಿ ರೆಪೊ ದರವನ್ನು 225 ಮೂಲಾಂಶ ಹೆಚ್ಚಳ ಮಾಡಿದೆ. ಪರಿಣಾಮವಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸಾಲದ ಮೇಲಿನ ಹಾಗೂ ಠೇವಣಿಗಳ ಮೇಲಿನ ಬಡ್ಡಿ ದರವೂ ತುಸು ಹೆಚ್ಚಾಗಿದೆ. ಎಸ್​ಬಿಐ, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್​ಗಳು ಹಿರಿಯ ನಾಗರಿಕರ ಎಫ್​ಡಿಗೆ ನೀಡುತ್ತಿರುವ ಬಡ್ಡಿ ವಿವರ ಇಲ್ಲಿದೆ.

ಎಸ್​ಬಿಐ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ

ಎಸ್​​ಬಿಐ ಬ್ಯಾಂಕ್ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 7.25ರ ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರ ಎಲ್ಲ ಅವಧಿಯ ಎಫ್​ಡಿಗೆ ಎಸ್​ಬಿಐ ಬ್ಯಾಂಕ್ 50 ಮೂಲಾಂಶದಷ್ಟು ಹೆಚ್ಚು ಹೆಚ್ಚುವರಿ ಬಡ್ಡಿ ನೀಡುತ್ತಿದೆ. ಇತ್ತೀಚೆಗೆ ಬಡ್ಡಿ ದರವನ್ನು ಪರಿಷ್ಕರಿಸಿದ ಬಳಿಕ, 7 ದಿನಗಳಿಂದ ಆರಂಭವಾಗಿ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಎಸ್​ಬಿಐ ಶೇಕಡಾ 3.5ರಿಂದ 7.25ರ ವರೆಗೆ ಬಡ್ಡಿ ನೀಡುತ್ತಿದೆ. ಡಿಸೆಂಬರ್ 13ರಿಂದ ಈ ಬಡ್ಡಿ ದರಗಳು ಜಾರಿಯಲ್ಲಿವೆ.

  • 1 ವರ್ಷ ಮೇಲ್ಪಟ್ಟ, 2 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿ ಬಡ್ಡಿ ದರ – 7.25%
  • 2 ವರ್ಷ ಮೇಲ್ಪಟ್ಟು 3 ವರ್ಷಗಳಿಂದ ಕಡಿಮೆ ಅವಧಿಯ ಎಫ್​ಡಿ ಬಡ್ಡಿ ದರ – 7.25%
  • 5 ವರ್ಷಗಳಿಂದ 10 ವರ್ಷಗಳ ವರೆಗಿನ ಎಫ್​ಡಿ ಬಡ್ಡಿ ದರ – 7.25%

ಎಚ್​ಡಿಎಫ್​ಸಿ ಬ್ಯಾಂಕ್​ ಹಿರಿಯ ನಾಗರಿಕರ ಎಫ್​ಡಿ ಬಡ್ಡಿ ದರ

ಎಚ್​​ಡಿಎಫ್​ಸಿ ಬ್ಯಾಂಕ್​ 7 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಅವಧಿಯ ಹಿರಿಯ ನಾಗರಿಕರ ಎಫ್​ಡಿಗೆ ಶೇಕಡಾ 3.5ರಿಂದ 7.75ರ ವರೆಗೆ ಬಡ್ಡಿ ನೀಡುತ್ತಿದೆ. ಪರಿಷ್ಕೃತ ಬಡ್ಡಿ ದರ ಡಿಸೆಂಬರ್ 14ರಿಂದ ಜಾರಿಯಲ್ಲಿದೆ.

  • 1 ವರ್ಷದಿಂದ 15 ತಿಂಗಳವರೆಗಿನ ಎಫ್​ಡಿ ಬಡ್ಡಿ – 7.00%
  • 15 ತಿಂಗಳುಗಳಿಂದ 18 ತಿಂಗಳ ವರೆಗಿನ ಎಫ್​ಡಿ ಬಡ್ಡಿ – 7.50%
  • 18 ತಿಂಗಳುಗಳಿಂದ 21 ತಿಂಗಳ ವರೆಗಿನ ಎಫ್​ಡಿ ಬಡ್ಡಿ – 7.00%
  • 21 ತಿಂಗಳುಗಳಿಂದ 2 ವರ್ಷ ಅವಧಿಯ ಎಫ್​ಡಿ ಬಡ್ಡಿ – 7.50%
  • 2 ವರ್ಷ 1 ದಿನದಿಂದ 3 ವರ್ಷ ಅವಧಿಯ ಎಫ್​ಡಿ ಬಡ್ಡಿ – 7.50%
  • 3 ವರ್ಷ 1 ದಿನದಿಂದ ಆರಂಭವಾಗಿ 5 ವರ್ಷಗಳ ವರೆಗಿನ ಎಫ್​ಡಿ ಬಡ್ಡಿ – 7.50%
  • 5 ವರ್ಷ 1 ದಿನದಿಂದ ಆರಂಭವಾಗಿ 10 ವರ್ಷಗಳ ವರೆಗಿನ ಎಫ್​​ಡಿ ಬಡ್ಡಿ – 7.75%

TV9 Kannada


Leave a Reply

Your email address will not be published. Required fields are marked *