Fire Mishap in Uttar Pradesh Mau 5 members of family die National News in Kannada – Fire Mishap: ಉತ್ತರ ಪ್ರದೇಶದಲ್ಲಿ ಅಗ್ನಿ ದುರಂತ; ಒಂದೇ ಕುಟುಂಬದ ಐವರು ಸಜೀವ ದಹನ


ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಮೂವರು ಸಣ್ಣಮಕ್ಕಳಿದ್ದಾರೆ.

Fire Mishap: ಉತ್ತರ ಪ್ರದೇಶದಲ್ಲಿ ಅಗ್ನಿ ದುರಂತ; ಒಂದೇ ಕುಟುಂಬದ ಐವರು ಸಜೀವ ದಹನ

ಉತ್ತರ ಪ್ರದೇಶದ ಮೌ ಪಟ್ಟಣದ ಸಮೀಪ ಅಗ್ನಿ ಅನಾಹುತದಿಂದ ಮನೆ ಭಸ್ಮವಾಗಿದೆ.

Image Credit source: Tv9Kannada

ಲಖನೌ: ಉತ್ತರ ಪ್ರದೇಶದ ಮೌ (Uttar Pradesh Mau Town) ಪಟ್ಟಣದ ಸಮೀಪದ ಗ್ರಾಮವೊಂದರಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ ಮನೆಯೊಂದಕ್ಕೆ ಬೆಂಕಿ ಬಿದ್ದಿದ್ದು, ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿರುವ (Fire Accident) ಘಟನೆ ಮಂಗಳವಾರ ನಡೆದಿದೆ. ಶಹಪುರ್ ಗ್ರಾಮದಲ್ಲಿ ದುರಂತ ಸಂಭವಿಸಿದ ಮಾಹಿತಿ ಲಭ್ಯವಾದ ತಕ್ಷಣ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಜೀವ ಉಳಿಸಲು ಪ್ರಯತ್ನಿಸಿದರು. ಮೃತರ ಪಾರ್ಥಿವ ಶರೀರಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಮೌ ಜಿಲ್ಲಾಧಿಕಾರಿ ಅರುಣ್​ ಕುಮಾರ್, ‘ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರ ಪೈಕಿ ಮೂವರು ಸಣ್ಣಮಕ್ಕಳಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಕೊಪಗಂಜ್ ಪೊಲೀಸರು ಧಾವಿಸಿದರು. ಅಗ್ನಿಶಾಮಕ ದಳ, ವೈದ್ಯಕೀಯ ಮತ್ತು ಪರಿಹಾರ ಸಿಬ್ಬಂದಿಯ ತಂಡಗಳು ಸ್ಥಳಕ್ಕೆ ಧಾವಿಸಿದವು’ ಎಂದು ಹೇಳಿದ್ದಾರೆ. ‘ಒಲೆಯೊಂದರಿಂದ ಹಾರಿದ ಕಿಡಿಯಿಂದ ಅಗ್ನಿಅನಾಹುತ ಸಂಭವಿಸಿರಬಹುದು’ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ತುರ್ತು ಪರಿಹಾರವಾಗಿ ಉತ್ತರ ಪ್ರದೇಶ ಸರ್ಕಾರವು ಸಂತ್ರಸ್ತರ ಕುಟುಂಬಕ್ಕೆ ₹ 4 ಲಕ್ಷ ಬಿಡುಗಡೆ ಮಾಡಿದೆ.

TV9 Kannada


Leave a Reply

Your email address will not be published. Required fields are marked *