Flipkart: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಸ್ಮಾರ್ಟ್​ಫೋನ್ ಮೇಲಂತು ಬಂಪರ್ ಡಿಸ್ಕೌಂಟ್ | Flipkart site is hosting a Mobiles Bonanza sale and giving discounts on popular smartphones


Flipkart: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಹೊಸ ಮೇಳ: ಸ್ಮಾರ್ಟ್​ಫೋನ್ ಮೇಲಂತು ಬಂಪರ್ ಡಿಸ್ಕೌಂಟ್

Flipkart Mobiles Bonanza sale

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಸ್ಮಾರ್ಟ್‌ಫೋನ್‌ಗಳಿಗೆ (Smartphone) ಭಾರಿ ಡಿಸ್ಕೌಂಟ್ ಮೇಳ ಹಮ್ಮಿಕೊಳ್ಳಲಾಗಿದೆ. ಅದುವೇ ಫ್ಲಿಪ್‌ಕಾರ್ಟ್ ಮೊಬೈಲ್ಸ್ ಬೊನಾಂಜಾ ಸೇಲ್ (Mobiles Bonanza sale). ನವೆಂಬರ್ 18ಕ್ಕೆ ಆರಂಭವಾಗಿರುವ ಆಫರ್‌ಗಳ ಮೇಳವು ನವೆಂಬರ್ 21ರ ವರೆಗೆ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಭಾರಿ ಡಿಸ್ಕೌಂಟ್, ಎಕ್ಸ್‌ಚೇಂಜ್ ಆಫರ್, ನೊ-ಕಾಸ್ಟ್ ಇಎಂಐ ಮುಂತಾದ ಸೌಲಭ್ಯಗಳು ದೊರೆಯುತ್ತಿದೆ. ಈ ಸೇಲ್‌ನಲ್ಲಿ ಆ್ಯಪಲ್‌ (Apple), ರಿಯಲ್‌ ಮಿ (Realme), ಮೋಟೋರೊಲಾ (Motorola) ಮತ್ತು ವಿವೋ (Vivo) ಸಂಸ್ಥೆಯ ಜನಪ್ರಿಯ ಫೋನ್‌ಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್ ಮೊಬೈಲ್‌ ಬೊನಾನ್ಜಾ ಸೇಲ್‌ನಲ್ಲಿ ಭರ್ಜರಿ ರಿಯಾಯಿತಿಗೆ ದೊರಕುತ್ತಿರುವ ಆಕರ್ಷಕ ಸ್ಮಾರ್ಟ್‌ಫೋನ್‌ಗಳು ಯಾವುವು?, ಇಲ್ಲಿದೆ ನೋಡಿ.

ಫ್ಲಿಪ್‌ಕಾರ್ಟ್‌ನ ಮೊಬೈಲ್ಸ್‌ ಬೊನಾಂಜಾ ಸೇಲ್‌ನಲ್ಲಿ ಮೋಟೋ ಜಿ 40 ಫ್ಯೂಷನ್ 13,499 ರೂ. ಬೆಲೆಗೆ ದೊರೆಯುತ್ತಿದೆ. ನಿಮ್ಮ ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಮೂಲಕ 12,800 ರೂ. ವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ 6.80 ಇಂಚಿನ ಮ್ಯಾಕ್ಸ್ ವಿಷನ್ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732ಜಿ ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64MP ಸೆನ್ಸಾರ್‌ ಹೊಂದಿದೆ. ಜೊತೆಗೆ ಇದು ಬೃಹತ್ 6000 mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ.

ಇನ್ನು 31,999 ರೂ ಮೂಲಬೆಲೆಯ ರಿಯಲ್‌ಮಿ GT Neo 2 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 27,999 ರೂ. ಗೆ ಲಭ್ಯವಾಗಲಿದೆ. ಜೊತೆಗೆ ಫೋನ್‌ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 19,000 ರೂ. ವರೆಗೆ ಡಿಸ್ಕೌಂಟ್‌ ದೊರೆಯಲಿದೆ. ರಿಯಲ್‌ಮಿ ಜಿಟಿ ನಿಯೋ 2 ಸ್ಮಾರ್ಟ್‌ಫೋನ್‌ 6.62-ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ರಿಯಲ್‌ಮಿ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಜೊತೆಗೆ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 65W ಸೂಪರ್ ಡಾರ್ಟ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಮೋಟೋರೊಲಾ ಎಡ್ಜ್‌ 20 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಮೊಬೈಲ್‌ ಬೊನಾಂಜಾ ಸೇಲ್‌ನಲ್ಲಿ ತಾತ್ಕಾಲಿಕ ರಿಯಾಯಿತಿಯನ್ನು ಪಡೆದುಕೊಂಡಿದೆ. 36,999 ರೂ.ಬೆಲೆಯ ಈ ಸ್ಮಾರ್ಟ್‌ಫೋನ್‌ ಪ್ರಸ್ತುತ 34,999 ರೂ.ಬೆಲೆಗೆ ಮಾರಾಟವಾಗುತ್ತಿದೆ. ಹಾಗೆಯೇ ನಿಮ್ಮ ಹಳೆಯ ಫೋನ್‌ನ ಎಕ್ಸ್‌ಚೇಂಜ್‌ನಲ್ಲಿ 14,250 ರೂ. ವರೆಗಿನ ರಿಯಾಯಿತಿ ಕೂಡ ದೊರೆಯಲಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್-HD+ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಮೈ UX ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

ವಿವೋ X70 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 46,990 ಗೆ ಲಭ್ಯವಿದೆ. ಅಂತೆಯೆ ಐಫೋನ್‌ 12 ಕೂಡ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಸ್ತುತ 54,999 ರೂ. ಗಳಿಗೆ ಖರೀದಿಸಬಹುದಾಗಿದೆ. ಇದು ಪ್ರಸ್ತುತ ಸೈಟ್‌ನಲ್ಲಿ 56,999 ರೂ. ಗೆ ಪಟ್ಟಿಮಾಡಲಾಗಿದೆ. ತಮ್ಮ ಹಳೆಯ ಫೋನ್ ಅನ್ನು ಎಕ್ಸಚೇಂಜ್‌ ಮಾಡಿದರೆ 14,250 ವರೆಗೆ ಡಿಸ್ಕೌಂಟ್‌ ದೊರೆಯಲಿದೆ.

Budget Smartphone: ಅತಿ ಕಡಿಮೆ ಬೆಲೆಗೆ ಸಿಗುತ್ತಿರುವ ಅತ್ಯುತ್ತಮ ಸ್ಮಾರ್ಟ್​ಫೋನ್​ಗಳು ಇಲ್ಲಿವೆ ನೋಡಿ

(Flipkart site is hosting a Mobiles Bonanza sale and giving discounts on popular smartphones)

TV9 Kannada


Leave a Reply

Your email address will not be published. Required fields are marked *