ಬೆಳಗಿನ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟದ ಸಮಯ ಯಾವಾಗಲೂ ಒಂದೇ ಆಗಿರಬೇಕು. ಆಗಾಗ್ಗೆ ಸಮಯವನ್ನು ಬದಲಾಯಿಸುವುದರಿಂದ ತೊಂದರೆ ಉಂಟಾಗುತ್ತದೆ.

ಪ್ರಾತಿನಿಧಿಕ ಚಿತ್ರ
ಸಾಮಾನ್ಯವಾಗಿ ನಾವು ದಿನಕ್ಕೆ ಕನಿಷ್ಠ ಮೂರು ಬಾರಿ ಆಹಾರ (Food) ಸೇವಿಸುತ್ತೇವೆ. ಆದ್ದರಿಂದ ನಾವು ಆರೋಗ್ಯವಾಗಿರುತ್ತೇವೆ. ಆಹಾರ ಸೇವನೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ. ದೇಹದ ಆಂತರಿಕ ಕಾರ್ಯಗಳಿಗೆ ಆಹಾರವೂ ಅಗತ್ಯ. ಆದರೆ, ಆಹಾರ ಸೇವಿಸುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಆರೋಗ್ಯ ತಜ್ಞರು. ಹೀಗೆ ಮಾಡುವುದರಿಂದ ಲಾಭದ ಬದಲು ಹಾನಿಯಾಗುವ ಸಾಧ್ಯತೆ ಇದೆ. ಬೆಳಗಿನ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟದ ಸಮಯ ಯಾವಾಗಲೂ ಒಂದೇ ಆಗಿರಬೇಕು. ಆಗಾಗ್ಗೆ ಸಮಯವನ್ನು ಬದಲಾಯಿಸುವುದರಿಂದ ತೊಂದರೆ ಉಂಟಾಗುತ್ತದೆ. ಮತ್ತು ಆಹಾರ ಸೇವಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು. ಹಾಗಾದರೆ ಆ ತಪ್ಪುಗಳು ಯಾವವು ಎಂದು ಈ ಲೇಖನದಲ್ಲಿ ತಿಳಿಯೋಣ.