ತಂಪಾದ ಸಂಜೆಗೆ ಮನೆಲಿ ಮಾಡಿ ಬೇಲ್ ಪುರಿ

 

ಕ್ಕಳು ಬೇಲ್ ಪುರಿ ಎಂದರೆ ತುಂಬಾ ಇಷ್ಟಪಡುತ್ತಾರೆ. ಸಂಜೆ ವೇಳೆಗೆ ಅಮ್ಮ ತಿಂಡಿ ಕೊಡುತ್ತಾಳೆ ಎಂದು ಮಕ್ಕಳು ನೋಡುತ್ತಿರುತ್ತಾರೆ. ಸದಾ ಕೆಲಸದಲ್ಲಿರುವ ಅಮ್ಮ ಇಂದು ಮಕ್ಕಳಿಗಾಗಿ ಏನು ಮಾಡಬೇಕು ಎಂದು ಯೋಚಿಸುವಾಗ ಮನೆಯಲ್ಲಿ ಸರಳವಾಗಿ ಈ ತಿಂಡಿಯನ್ನು ಮಾಡಬಹುದು. ಇದನ್ನು ಮಕ್ಕಳು ಖಂಡಿತ ಇಷ್ಟಪಡುತ್ತಾರೆ ಮತ್ತು ನಿಮ್ಮನ್ನು ಇನ್ನಷ್ಟು ಪ್ರೀತಿಸುತ್ತಾರೆ. ಹಾಗಿದ್ದರೆ ಬೇಲ್ ರೆಸಿಪಿ ತಯಾರಿಸುವ  ಸುಲಭ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:
* ಮಂಡಕ್ಕಿ – 1 ಬೌಲ್
*ಸೇವ್ – 1 ಬೌಲ್
*ಈರುಳ್ಳಿ – 1
*ಕೊತ್ತಂಬರಿ ಸೊಪ್ಪು –
*ಚಿಲ್ಲಿ ಟೊಮೆಟೊ ಸಾಸ್ – 1 ಸ್ಪೂನ್
*ಚಾಟ್ ಮಸಾಲಾ – 1 ಸ್ಪೂನ್
*ಟೊಮೇಟೋ – 1/2
* ರುಚಿಗೆ ತಕ್ಕಷ್ಟು ಉಪ್ಪು ಇದನ್ನೂ ಓದಿ: ರುಚಿಯಾದ ಹಂಚಿನ ದೋಸೆ ಮಾಡುವ ಸುಲಭ ವಿಧಾನ

ಮಾಡುವ ವಿಧಾನ:
* ಒಂದು ಪಾತೆಯಲ್ಲಿ ಈರುಳ್ಳಿ, ಟೊಮೆಟೊ ಮತ್ತು ಕೊತ್ತಂಬರಿ ಸೊಪ್ಪು, ಸೇವ್ ಹಾಗೂ ಮಂಡಕ್ಕಿಯನ್ನು ಸೇರಿಸಿ ಮಿಶ್ರಮಾಡಿ.

* ನಂತರ ಚಾಟ್ ಮಸಾಲಾ ಮತ್ತು ಉಪ್ಪನ್ನು ಈ ಮಿಶ್ರಣಕ್ಕೆ ಹಾಕಿ.

blank

* ಒಂದು ಬಾಕ್ಸ್‍ಗೆ ಟೊಮೇಟೋ ಕೆಚಪ್, ಹಸಿಮೆಣಸು ಮತ್ತು ಈ ಮೊದಲೇ ತಯಾರಿಸಿದ ಮಂಡಕ್ಕಿ ಮಿಶ್ರಣವನ್ನು ಹಾಕಿ ಬಾಕ್ಸ್‍ನ ಮುಚ್ಚಳವನ್ನು ಗಟ್ಟಿಯಾಗಿ ಹಾಕಿ ಮತ್ತು ಚೆನ್ನಾಗಿ ಕುಲುಕಿಸಿದರೆ ರುಚಿಯಾದ ಬೇಲ್ ಪುರಿ ಸವಿಯಲು ಸಿದ್ಧವಾಗುತ್ತದೆ.

Source: publictv.in Source link