Former CM Siddaramaiah sparks out BJP govt in udupi | ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಯುವಕರು ಬಲಿ? RSS​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಸಿದ್ದು ಪ್ರಶ್ನೆ


ಯುವಕರು ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಯಾಗ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಬಿಜೆಪಿಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಯುವಕರು ಬಲಿ? RSS​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಸಿದ್ದು ಪ್ರಶ್ನೆ

ಸಿದ್ದರಾಮಯ್ಯ


ಉಡುಪಿ: ಯುವಕರು ಬಿಜೆಪಿ (BJP) ಯ ದುರುದ್ದೇಶಪೂರಿತ ಹಿಂದುತ್ವಕ್ಕೆ ಬಲಿಯಾಗ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಉಡುಪಿಯಲ್ಲಿ ಇಂದು (ಜ.22) ನಡೆದ ಕಾಂಗ್ರೆಸ್​ ಸಮಾವೇಶದಲ್ಲಿ ಅವರು ಮಾತನಾಡಿ,  ಬಿಜೆಪಿಯವರು ಹಿಂದೂ ಪರ ಇಲ್ಲ, ಹಿಂದುತ್ವದ ಪರವಾಗಿರುವವರು. ನಾನು, ಡಿಕೆಶಿ, ಹರಿಪ್ರಸಾದ್, ವೀರಪ್ಪ ಮೊಯ್ಲಿ​ ಹಿಂದುತ್ವವಾದಿಗಳಲ್ವಾ ಎಂದು ಪ್ರಶ್ನಿಸಿದರು. ಹಿಂದೂಗಳ ಪರವಾಗಿರುವವರು‌ ಅಂದ್ರೆ ಮನುಷ್ಯತ್ವದ ಪರ ಇರುವವರು. ಕರಾವಳಿ ಭಾಗದಲ್ಲಿ ಕೊಲೆಯಾದವರು ಹಿಂದುಳಿದ ಜಾತಿಯವರು. ಆರ್​ಎಸ್​ಎಸ್​​, ಶಾಸಕರ ಮಗ ಕೊಲೆಯಾದ ನಿದರ್ಶನ ಇದೆಯಾ? ಕೊಲೆಯಾದರೆ ಹೆಣಗಳ ಮೇಲೆ ರಾಜಕೀಯ ಮಾಡ್ತಾರೆ ಎಂದು ಕಿಡಿಕಾರಿದರು.

ನಳಿನ್ ಕುಮಾರ್ ಕಟೀಲು ನಾಲಾಯಕ್ 

ನಳಿನ್ ಕುಮಾರ್ ಕಟೀಲು​ ಬಿಜೆಪಿ ಅಧ್ಯಕ್ಷನಾಗಲು ನಾಲಾಯಕ್. ರಸ್ತೆ, ಚರಂಡಿ ಸಮಸ್ಯೆ ಬಗ್ಗೆ ಮಾತಾಡಬೇಡಿ ಎಂದು ಕಟೀಲು ಹೇಳ್ತಾರೆ. ದಯವಿಟ್ಟು ಬಿಜೆಪಿಯವರ ಮಾತಿಗೆ ಮರುಳಾಗಬೇಡಿ. ನರೇಂದ್ರ ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಸಾವರ್ಕರ್ ಮಾಸಾಶನ ಪಡೆದಿದ್ದರು.​ ಕರಾವಳಿಯನ್ನು ಹಿಂದುತ್ವದ ಪ್ರಯೋಗಾಲಯ ಮಾಡಲು ಹೊರಟಿದ್ದಾರೆ. ನಮ್ಮ ವಿರೋಧ ಮನುವಾದಿಗಳಿಗೆ ಹೊರತು ಹಿಂದೂವಾದಿಗೆ ಅಲ್ಲ. ವಿಧಾನಸೌಧದ ಗೋಡೆಗಳು ಲಂಚ ಲಂಚ ಎಂದು ಪಿಸುಗುಡುತ್ತಿವೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ಮಾಡಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *