
ಇಗಾ ಸ್ವಿಟೆಕ್
French Open 2022: ಪೋಲೆಂಡ್ನ ಸೂಪರ್ಸ್ಟಾರ್ ಇಗಾ ಸ್ವಿಟೆಕ್ ಫ್ರೆಂಚ್ ಓಪನ್ 2022 ರ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವ ನಂಬರ್ ಒನ್ ಮಹಿಳಾ ಸಿಂಗಲ್ಸ್ ಆಟಗಾರ್ತಿ ಇಗಾ ಸ್ವಿಟೆಕ್ ಶನಿವಾರ ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು.
ಪೋಲೆಂಡ್ನ ಸೂಪರ್ಸ್ಟಾರ್ ಇಗಾ ಸ್ವಿಟೆಕ್ ಫ್ರೆಂಚ್ ಓಪನ್ 2022 ರ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವ ನಂಬರ್ ಒನ್ ಮಹಿಳಾ ಸಿಂಗಲ್ಸ್ ಆಟಗಾರ್ತಿ ಇಗಾ ಸ್ವಿಟೆಕ್ ಶನಿವಾರ ತಮ್ಮ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದರು. ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್ ಅವರನ್ನು ಫೈನಲ್ನಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಕಿರೀಟ ತೊಟ್ಟರು. ಇಗಾ ಸ್ವಿಟೆಕ್ ಸುಮಾರು ಒಂದು ಗಂಟೆಯಲ್ಲಿ ಗೋಫ್ ಅವರನ್ನು 6-1 6-3 ನೇರ ಸೆಟ್ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದರು. ಇಗಾ ಸ್ವಿಟೆಕ್ ಪಂದ್ಯಾವಳಿಯ ಉದ್ದಕ್ಕೂ ಕೇವಲ ಒಂದು ಸೆಟ್ ಅನ್ನು ಸೋತು, 6-2 ರ ಸರಾಸರಿ ಸ್ಕೋರ್ಲೈನ್ನೊಂದಿಗೆ ಹೆಚ್ಚಿನ ಸಂದರ್ಭಗಳಲ್ಲಿ ಸೆಟ್ಗಳನ್ನು ಗೆದ್ದರು. ಇಂಗಾ ಎರಡು ವರ್ಷಗಳ ಹಿಂದೆ ಮೊದಲ ಪ್ರಶಸ್ತಿಯನ್ನು ಫ್ರೆಂಚ್ ಓಪನ್ನಲ್ಲಿ ಗೆದ್ದಿದ್ದರು. ಈಗ ಕಾಕತಾಳೀಯವಾಗಿ ಅವರು ಫ್ರೆಂಚ್ ಓಪನ್ನಲ್ಲಿ ಎರಡನೇ ಪ್ರಶಸ್ತಿ ಗೆದ್ದಿದ್ದಾರೆ.