ಸವರ್ಣಿಯರು ದಲಿತ ಕುಟುಂಬಗಳನ್ನು ಬಹಿಷ್ಕಾರ ಹಾಕಿರುವಂತಹ ಘಟನೆ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಕಂಡುಬಂದಿದೆ.

ವೈರಲ್ ಆದ ವಿಡಿಯೋ
ಗದಗ: ಸವರ್ಣಿಯರು ದಲಿತ ಕುಟುಂಬಗಳನ್ನು ಬಹಿಷ್ಕಾರ ಹಾಕಿರುವಂತಹ ಘಟನೆ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ಕಂಡುಬಂದಿದೆ. ಅಲ್ಲಿಗೆ ಜಿಲ್ಲೆಯಲ್ಲಿ ಅನಿಷ್ಠ ಪದ್ಧತಿ (Untouchability) ಇನ್ನೂ ಜೀವಂತವಾಗಿದೆ. ದೇವಸ್ಥಾನ, ಕಿರಾಣಿ ಶಾಪ್, ಹೊಟೇಲ್ಗಳಿಗೆ ನೋ ಎಂಟ್ರಿ. ಕಿರಾಣಿ ಅಂಗಡಿಗೆ ಹೋದ್ರು ಮಾಲೀಕರು ಯಾವುದೇ ವಸ್ತು ನೀಡುತ್ತಿಲ್ಲ. ಯಾಕೆ ಕೊಡಲ್ಲ ಅಂತ ಪ್ರಶ್ನೆ ಮಾಡಿದಕ್ಕೆ ವಾಗ್ವಾದ ನಡೆದಿದೆ. ನಿಮಗೆ ಏನಾದ್ರೂ ಕೊಟ್ರೆ ದಂಡ ಹಾಕ್ತಾರೆ ಎಂದು ಅಂಗಡಿಕಾರರು ಹೇಳುತ್ತಿದ್ದಾರೆ. ಸದ್ಯ ದಲಿತರಿಗೆ ಅಂಗಡಿಕಾರರು ವಸ್ತುಗಳನ್ನು ನೀಡಲು ನಿರಾಕರಿಸಿರುವಂತಹ ಒಂದು ವಿಡಿಯೋ ವೈರಲ್ ಆಗಿದೆ.