Galaxy A13 5G: ಭರ್ಜರಿ ಸೇಲ್ ಆಗುತ್ತಿರುವ ಗ್ಯಾಲಕ್ಸಿ A ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಹೊಸ ಸ್ಮಾರ್ಟ್​ಫೋನ್ | Samsung Galaxy A13 5G is reportedly in the works its coming from 50 megapixel main camera sensor


Galaxy A13 5G: ಭರ್ಜರಿ ಸೇಲ್ ಆಗುತ್ತಿರುವ ಗ್ಯಾಲಕ್ಸಿ A ಸರಣಿಯಲ್ಲಿ ಬರುತ್ತಿದೆ ಮತ್ತೊಂದು ಹೊಸ ಸ್ಮಾರ್ಟ್​ಫೋನ್

Samsung Galaxy A13 5G

ಸ್ಯಾಮ್‌ಸಂಗ್‌ (Samsung) ಕಂಪನಿಯ ಗ್ಯಾಲಕ್ಸಿ M (Galaxy M Series) ಮತ್ತು ಗ್ಯಾಲಕ್ಸಿ A ಸರಣಿಯ (Galaxy A Series) ಸ್ಮಾರ್ಟ್​ಫೋನ್​ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ಸರಣಿಯಲ್ಲಿನ ಸ್ಮಾರ್ಟ್​ಫೋನ್​ಗಳು (Smartphone) ಅತಿ ಹೆಚ್ಚು ಮಾರಾಟ ಕಾಣುತ್ತಿದೆ. ಇದನ್ನೆ ಗುರಿಯಾಗಿಸಿಕೊಂಡು ಇದೀಗ ಸ್ಯಾಮ್​ಸಂಗ್ ಸಂಸ್ಥೆ ತನ್ನ ಹೊಸ ಗ್ಯಾಲಕ್ಸಿ ಎ13 5ಜಿ (Samsung Galaxy A13 5G) ಸ್ಮಾರ್ಟ್​ಫೋನನ್ನು ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌, 5,000mAh ಸಾಮರ್ಥ್ಯದ ಬಲಿಷ್ಠ ಬ್ಯಾಟರಿ ಸೇರಿದಂತೆ ಇನ್ನೂ ಅನೇಕ ಅತ್ಯುತ್ತಮ ಫೀಚರ್​ಗಳನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಕಂಪೆನಿ ಗ್ಯಾಲಕ್ಸಿ A13 ಸ್ಮಾರ್ಟ್‌ಫೋನ್‌ ವಿಶೇಷತೆ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಹಾಕಿಲ್ಲ. ಆದರೆ, ಮೂಲಗಳ ಪ್ರಕಾರ ಈ ಫೋನ್ 1080×2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.48 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆಯಂತೆ. ಈ ಡಿಸ್‌ಪ್ಲೇ ಎಲ್‌ಸಿಡಿ ಡಿಸ್‌ಪ್ಲೇ ಆಗಿದ್ದು, ವಾಟರ್‌ ಡ್ರಾಪ್‌ ನಾಚ್‌ ಶೈಲಿಯಿಂದ ಇದೆ ಎನ್ನಲಾಗಿದೆ.

ಅಂತೆಯೆ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿರುವ ಸಾಧ್ಯತೆ ಇದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 4GB RAM + 64GB, 6GB RAM + 128GB ಮತ್ತು 8GB RAM + 128GB ಇಂಟರ್‌ ಸ್ಟೋರೇಜ್ ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗಿದೆ.

ಇನ್ನು ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿರಲಿದೆಯಂತೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಸೆನ್ಸರ್‌ಗಳನ್ನು ಒಳಗೊಂಡಿರುತ್ತದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ ಎನ್ನಲಾಗಿದೆ.

ಇನ್ನು ಕಳೆದ ಬಾರಿ ಪರಿಚಯಿಸಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್​ಗಿಂತ ಇದು ಹೆಚ್ಚಿನ ಆಯ್ಕೆಯನ್ನು ಹೊಂದಿದೆ. ಎ12 ಸ್ಮಾರ್ಟ್​ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿತ್ತು. ಮೀಡಿಯಾ ಟೆಕ್‌ ಹಿಲಿಯೊ P35 SoC ಪ್ರೊಸೆಸರ್‌ ಸಾಮರ್ಥ್ಯ, ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಬ್ಯಾಟರಿ ಪವರ್ ಎರಡೂ ಫೋನನಿದ್ದು ಒಂದೇರೀತಿಯಿದ್ದು 5,000mAh ಸಾಮರ್ಥ್ಯವನ್ನು ಹೊಂದಿದ್ದು, 15W ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇದರ ಬೆಲೆ 12,999 ರೂ. ಆಗಿತ್ತು.

WhatsApp Web: ದೀಪಾವಳಿಗೆ ವಾಟ್ಸ್​ಆ್ಯಪ್​ನಿಂದ ಹೊಸ ಫೀಚರ್: ವಾಟ್ಸ್​ಆ್ಯಪ್ ವೆಬ್ ಬಳಸುತ್ತಿರುವವರು ಫುಲ್ ಖುಷ್

Vodafone Idea: ವೊಡಾಫೋನ್-ಐಡಿಯಾದಿಂದ ಡಬಲ್ ಡೇಟಾ ಆಫರ್: 2GB ಜೊತೆ ಪುನಃ 2GB ಫ್ರೀ

(Samsung Galaxy A13 5G is reportedly in the works its coming from 50-megapixel main camera sensor)

TV9 Kannada


Leave a Reply

Your email address will not be published. Required fields are marked *