ಇದೀಗ ಮತ್ತೊಂದು ಬೊಂಬಾಟ್ ಫೋನನ್ನು ಸ್ಯಾಮ್ಸಂಗ್ ಬಿಡುಗಡೆ ಮಾಡಿದೆ. ಅದುವೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್13 (Galaxy M13). ಯಾವುದೇ ಪ್ರಚಾವಿಲ್ಲದೆ ಈ ಸ್ಮಾರ್ಟ್ಫೋನ್ (Smartphone) ಅನ್ನು ಸ್ಯಾಮ್ಸಂಗ್ ಅನಾವರಣ ಮಾಡಿದೆ.
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ (Samsung) ಕಂಪನಿಯ ಗ್ಯಾಲಕ್ಸಿ M ಸರಣಿಯ ಫೋನ್ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಈಗಾಗಲೇ ಈ ಸರಣಿಯಡಿಯಲ್ಲಿ ಕಂಪನಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ. ಇದೀಗ ಮತ್ತೊಂದು ಬೊಂಬಾಟ್ ಫೋನನ್ನು ಸ್ಯಾಮ್ಸಂಗ್ ಬಿಡುಗಡೆ ಮಾಡಿದೆ. ಅದುವೇ ಸ್ಯಾಮ್ಸಂಗ್ ಗ್ಯಾಲಕ್ಸಿ ಎಮ್13 (Galaxy M13). ಯಾವುದೇ ಪ್ರಚಾವಿಲ್ಲದೆ ಈ ಸ್ಮಾರ್ಟ್ಫೋನ್ (Smartphone) ಅನ್ನು ಸ್ಯಾಮ್ಸಂಗ್ ಅನಾವರಣ ಮಾಡಿದೆ. ಇದರಲ್ಲಿ ಆಕ್ಟಾ ಕೋರ್ ಎಕ್ಸಿನೋಸ್ 850SoC ಪ್ರೊಸೆಸರ್ ಅಳವಡಿಸಲಾಗಿದ್ದು, ದೀರ್ಘ ಸಮಯ ಬಾಳಕೆ ಬರಲು 5,000mAh ಬ್ಯಾಟರಿ ಸಾಮರ್ಥ್ಯವನ್ನು ನೀಡಲಾಗಿದೆ. ಹಾಗಾದ್ರೆ ಇದರ ಬೆಲೆ ಎಷ್ಟು? ಏನೆಲ್ಲ ಫೀಚರ್ಗಳಿವೆ ಎಂಬುದನ್ನು ನೋಡೋಣ.