Gandhi Statue: ಮೆಲ್ಬೋರ್ನ್​ನಲ್ಲಿ ಭಾರತದಿಂದ ಉಡುಗೊರೆಯಾಗಿ ನೀಡಲಾಗಿದ್ದ ಗಾಂಧಿ ಪ್ರತಿಮೆ ಧ್ವಂಸ | Mahatma Gandhi Statue Gifted by Indian Government Vandalised In Melbourne Australia PM Morrison Says Disgraceful


Gandhi Statue: ಮೆಲ್ಬೋರ್ನ್​ನಲ್ಲಿ ಭಾರತದಿಂದ ಉಡುಗೊರೆಯಾಗಿ ನೀಡಲಾಗಿದ್ದ ಗಾಂಧಿ ಪ್ರತಿಮೆ ಧ್ವಂಸ

ಮಹಾತ್ಮ ಗಾಂಧಿ ಪ್ರತಿಮೆ

ಮೆಲ್ಬೋರ್ನ್: ಭಾರತ ಸರ್ಕಾರವು ಆಸ್ಟ್ರೇಲಿಯಕ್ಕೆ ಉಡುಗೊರೆಯಾಗಿ ನೀಡಿದ್ದ ಮಹಾತ್ಮ ಗಾಂಧಿಯವರ ಬೃಹತ್ ಗಾತ್ರದ ಕಂಚಿನ ಪ್ರತಿಮೆಯನ್ನು ಮೆಲ್ಬೋರ್ನ್​ನಲ್ಲಿ ಧ್ವಂಸಗೊಳಿಸಲಾಗಿದೆ. ಈ ಘಟನೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಬೇಸರ ವ್ಯಕ್ತಪಡಿಸಿದ್ದು, ಇದು ತೀರಾ “ಅವಮಾನಕರ” ಎಂದು ಈ ಘಟನೆಯನ್ನು ಖಂಡಿಸಿದ್ದಾರೆ. ಇದರಿಂದ ಭಾರತ-ಆಸ್ಟ್ರೇಲಿಯನ್ ಸಮುದಾಯದಲ್ಲಿ ಆಘಾತ ಉಂಟಾಗಿದೆ. ಭಾರತದ 75 ವರ್ಷಗಳ ಸ್ವಾತಂತ್ರ್ಯದ ಆಚರಣೆಯ ಅಂಗವಾಗಿ ಪ್ರಧಾನ ಮಂತ್ರಿ ಮಾರಿಸನ್ ಅವರು ಭಾರತದ ಕಾನ್ಸುಲ್ ಜನರಲ್ ರಾಜ್ ಕುಮಾರ್ ಮತ್ತು ಇತರ ಆಸ್ಟ್ರೇಲಿಯಾದ ನಾಯಕರೊಂದಿಗೆ ಶುಕ್ರವಾರ ರೌವಿಲ್ಲೆಯಲ್ಲಿರುವ ಆಸ್ಟ್ರೇಲಿಯಾದ ಭಾರತೀಯ ಸಮುದಾಯ ಕೇಂದ್ರದಲ್ಲಿ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಗಾಂಧೀಜಿಗೆ ಈ ರೀತಿಯ ಅಗೌರವ ತೋರಿರುವವರು ಬಹಳ ಅವಮಾನಕರ ಮತ್ತು ಅತ್ಯಂತ ನಿರಾಶಾದಾಯಕವಾಗಿದೆ ಎಂದು ಮಾರಿಸನ್ ಬೇಸರ ವ್ಯಕ್ತಪಡಿಸಿದ್ದಾರೆ. ವಿಶ್ವದಲ್ಲೇ ಅತ್ಯಂತ ಬಹುಸಂಸ್ಕೃತಿ ಮತ್ತು ವಲಸಿಗರು ಹೆಚ್ಚಾಗಿರುವ ರಾಷ್ಟ್ರವಾಗಿರುವ ಆಸ್ಟ್ರೇಲಿಯಾದಲ್ಲಿ ಸಾಂಸ್ಕೃತಿಕ ಸ್ಮಾರಕಗಳ ಮೇಲಿನ ದಾಳಿಯನ್ನು ಎಂದಿಗೂ ಸಹಿಸಲಾಗದು ಎಂದು ಅವರು ಹೇಳಿದ್ದಾರೆ. ಹಾಗೇ, ಈ ಘಟನೆಗೆ ಕಾರಣರಾದವರು ಆಸ್ಟ್ರೇಲಿಯನ್ ಭಾರತೀಯ ಸಮುದಾಯಕ್ಕೆ ಅಗೌರವ ತೋರಿದ್ದಾರೆ. ಇದರಿಂದ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಈ ಪ್ರತಿಮೆಯನ್ನು ಭಾರತ ಸರ್ಕಾರ ಉಡುಗೊರೆಯಾಗಿ ನೀಡಿತ್ತು. ಈ ಘಟನೆಯಿಂದ ಭಾರತೀಯ ಸಮುದಾಯವು ತುಂಬಾ ಆಘಾತಕ್ಕೊಳಗಾಗಿದೆ ಮತ್ತು ದುಃಖಕ್ಕೊಳಗಾಗಿದೆ. ಜನರು ಇಂತಹ ಕೀಳು ವಿಧ್ವಂಸಕ ಕೃತ್ಯವನ್ನು ಏಕೆ ಮಾಡುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ವಿಕ್ಟೋರಿಯಾದ ಭಾರತೀಯ ಸಂಘಗಳ ಒಕ್ಕೂಟದ ಅಧ್ಯಕ್ಷ ಸೂರ್ಯ ಪ್ರಕಾಶ್ ಸೋನಿ ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಆಸ್ಟ್ರೇಲಿಯಾ ಇಂಡಿಯಾ ಕಮ್ಯುನಿಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಾಸನ್ ಶ್ರೀನಿವಾಸನ್ ಮಾತನಾಡಿ, ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿದ 24 ಗಂಟೆಗಳಲ್ಲಿ ಯಾರೋ ಒಬ್ಬರು ಅದನ್ನು ಧ್ವಂಸಗೊಳಿಸಲು ಪ್ರಯತ್ನಿಸಿರುವುದು ನನಗೆ ಬೇಸರ ತಂದಿದೆ. ಅವರು ಗಾಂಧೀಜಿ ಪ್ರತಿಮೆಯ ತಲೆ ಕತ್ತರಿಸಲು ಪ್ರಯತ್ನಿಸಿದ್ದರು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ‘ಬೋಸ್‌ರನ್ನು ಹಿಡಿದುಕೊಡ್ತೇನೆ ಎಂದಿದ್ದ ಗಾಂಧೀಜಿಯನ್ನ ದೇಶದ್ರೋಹಿ ಅನ್ನೋಕಾಗುತ್ತಾ!?’

1947ರಲ್ಲಿ ಭಾರತಕ್ಕೆ ಲಭಿಸಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ ಎಂದ ಕಂಗನಾ ವಿರುದ್ಧ ತಿರುಗಿಬಿದ್ದ ಬಿಜೆಪಿ; ಪದ್ಮ ಪ್ರಶಸ್ತಿ ಹಿಂಪಡೆಯಲು ಆಗ್ರಹಿಸಿದ ಕಾಂಗ್ರೆಸ್

TV9 Kannada


Leave a Reply

Your email address will not be published. Required fields are marked *