Ganesh Chaturthi: ಹರಿಯಾಣದಲ್ಲಿ ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 6 ಜನ ಸಾವು | Ganesh Chaturthi: 6 drown in Haryana during Ganesh idol immersion CM Manohar Lal Khattar expresses grief


ಮಹೇಂದರ್‌ಗಢದಲ್ಲಿ ನಾಲ್ವರು ಯುವಕರು ಕಾಲುವೆಯಲ್ಲಿ ಮುಳುಗಿದ್ದು, ಇಬ್ಬರು ಸೋನಿಪತ್‌ನ ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Ganesh Chaturthi: ಹರಿಯಾಣದಲ್ಲಿ ಗಣಪತಿ ವಿಸರ್ಜನೆ ವೇಳೆ ನೀರಿನಲ್ಲಿ ಮುಳುಗಿ 6 ಜನ ಸಾವು

ಗಣೇಶನ ವಿಗ್ರಹ (ಸಂಗ್ರಹ ಚಿತ್ರ)

ನವದೆಹಲಿ: ಗಣೇಶನ ವಿಗ್ರಹಗಳನ್ನು (Ganesha Idols) ಮುಳುಗಿಸುವಾಗ 6 ಜನರು ನೀರಿನಲ್ಲಿ ಮುಳುಗಿರುವ ದುರಂತ ಘಟನೆ ಶುಕ್ರವಾರ ಸಂಜೆ ಹರಿಯಾಣದ (Haryana) ಮಹೇಂದರ್‌ಗಢ್ ಮತ್ತು ಸೋನಿಪತ್ ಜಿಲ್ಲೆಗಳಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹೇಂದರ್‌ಗಢದಲ್ಲಿ ನಾಲ್ವರು ಯುವಕರು ಕಾಲುವೆಯಲ್ಲಿ ಮುಳುಗಿದ್ದು, ಇಬ್ಬರು ಸೋನಿಪತ್‌ನ ಯಮುನಾ ನದಿಯಲ್ಲಿ (Yamuna River) ಮುಳುಗಿ ಸಾವನ್ನಪ್ಪಿದ್ದಾರೆ.

ಮಹೇಂದರ್‌ಗಢ್ ಘಟನೆಯ ಬಗ್ಗೆ ಸಿವಿಲ್ ಸರ್ಜನ್ ಡಾ. ಅಶೋಕ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನೀರಿನಲ್ಲಿ ಮುಳುಗಿದ್ದ ನಾಲ್ಕು ಜನರನ್ನು ಆಸ್ಪತ್ರೆಗೆ ಕರೆತರಲಾಯಿತು. ಸುಮಾರು 7 ಅಡಿಯ ಗಣಪತಿಯ ವಿಗ್ರಹವನ್ನು ನೀರಿನಲ್ಲಿ ಬಿಡಲು ಕೊಂಡೊಯ್ಯುತ್ತಿದ್ದಾಗ ಮಹೇಂದರ್‌ಗಢದಲ್ಲಿ ಕಾಲುವೆಯಲ್ಲಿ 9 ಯುವಕರು ನೀರಿನ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಎನ್‌ಡಿಆರ್‌ಎಫ್ ನೆರವಿನೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ನಾಲ್ವರು ಮೃತಪಟ್ಟಿದ್ದು, ಇತರರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

TV9 Kannada


Leave a Reply

Your email address will not be published.