“ಐಡಿಎಫ್ (ಇಸ್ರೇಲಿ ಮಿಲಿಟರಿ) ಪ್ರಸ್ತುತ ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುತ್ತಿದೆ. ಇಸ್ರೇಲಿ ಸೇನಾಪಡೆ ನೆಲೆಸಿರುವಲ್ಲಿ ವಿಶೇಷ ಪರಿಸ್ಥಿತಿಯನ್ನು ಘೋಷಿಸಲಾಗಿದೆ”

ಗಾಜಾ: ಇಸ್ರೇಲಿ ಮಿಲಿಟರಿ ಶುಕ್ರವಾರ ಗಾಜಾದ ಮೇಲೆ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ. ಸೆಂಟ್ರಲ್ ಗಾಜಾ ನಗರದಲ್ಲಿ ಪ್ಯಾಲೆಸ್ಟೀನಿಯಾದವರು ಇದನ್ನು ನೋಡಿದ್ದಾರೆ. “ಐಡಿಎಫ್ (ಇಸ್ರೇಲಿ ಮಿಲಿಟರಿ) ಪ್ರಸ್ತುತ ಗಾಜಾ ಪಟ್ಟಿಯಲ್ಲಿ ದಾಳಿ ನಡೆಸುತ್ತಿದೆ. ಇಸ್ರೇಲಿ ಸೇನಾಪಡೆ ನೆಲೆಸಿರುವಲ್ಲಿ ವಿಶೇಷ ಪರಿಸ್ಥಿತಿಯನ್ನು ಘೋಷಿಸಲಾಗಿದೆ” ಎಂದು ಹೇಳಿಕೆ ತಿಳಿಸಿದೆ. ಕೇಂದ್ರ ರಿಮಲ್ ನೆರೆಹೊರೆಯ ಅಪಾರ್ಟ್ಮೆಂಟ್ ಮೇಲೆ ವಾಯುದಾಳಿ ನಡೆದಿದೆ ಎಂದು ಗಾಜಾ ನಗರದಲ್ಲಿನ ಪ್ಯಾಲೆಸ್ಟೀನಿಯಾದವರು ಸುದ್ದಿಸಂಸ್ಥೆ ಎಎಫ್ ಪಿಗೆ ತಿಳಿಸಿದ್ದಾರೆ. ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್‌ನ ಭದ್ರತಾ ಮೂಲಗಳು ಭೂಪ್ರದೇಶದ ಹಲವಾರು ಭಾಗಗಳಲ್ಲಿ ವಾಯುದಾಳಿ ನಡೆದಿದೆ ಎಂದು ತಿಳಿಸಿವೆ