Genelia D’Souza: ಸಿಇಒ ಪಾತ್ರದಲ್ಲಿ ನಟಿ ಜೆನಿಲಿಯಾ ಡಿಸೋಜಾ​; ಕಿರೀಟಿ ಸಿನಿಮಾ ಬಗ್ಗೆ ಕೇಳಿಬಂತು ಸ್ಪೆಷಲ್​ ನ್ಯೂಸ್​ | Genelia DSouza is reportedly paying company CEO role in Kireeti Reddy debut movie


Genelia D'Souza: ಸಿಇಒ ಪಾತ್ರದಲ್ಲಿ ನಟಿ ಜೆನಿಲಿಯಾ ಡಿಸೋಜಾ​; ಕಿರೀಟಿ ಸಿನಿಮಾ ಬಗ್ಗೆ ಕೇಳಿಬಂತು ಸ್ಪೆಷಲ್​ ನ್ಯೂಸ್​

ಜೆನಿಲಿಯಾ ಡಿಸೋಜಾ

Genelia Deshmukh: ಜೆನಿಲಿಯಾ ಡಿಸೋಜಾ ಅವರಿಗೆ ಇದು ಕಮ್​ಬ್ಯಾಕ್​ ಸಿನಿಮಾ. ಹಾಗಾಗಿ ಅವರ ಪಾತ್ರದ ಬಗ್ಗೆ ಅಭಿಮಾನಿಗಳು ಕುತೂಹಲ ಇಟ್ಟುಕೊಂಡಿದ್ದಾರೆ.

ಒಂದು ಕಾಲದಲ್ಲಿ ಸಿಕ್ಕಾಪ ಟ್ಟೆ ಬ್ಯುಸಿ ಆಗಿದ್ದ ನಟಿ ಜೆನಿಲಿಯಾ ಡಿಸೋಜಾ​ ಅವರು ಮದುವೆ ನಂತರ ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡರು. ಈಗ ಅವರು ಪತಿ ರಿತೇಶ್​ ದೇಶಮುಖ್​ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಬಹಳ ವರ್ಷಗಳ ಬಳಿಕ ಅವರು ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ವಿಶೇಷ. ಈಗಾಗಲೇ ತಿಳಿದಿರುವಂತೆ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ (Kireeti Reddy) ನಟನೆಯ ಚೊಚ್ಚಲ ಚಿತ್ರದಲ್ಲಿ ಜೆನಿಲಿಯಾ ಡಿಸೋಜಾ (Genelia D’Souza) ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿ ಆಗಿರುವುದಂತೂ ನಿಜ. ಈ ಸಿನಿಮಾ ಏಕಕಾಲಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ಸಿದ್ಧವಾಗುತ್ತಿದೆ. ಈ ಚಿತ್ರದಲ್ಲಿ ಜೆನಿಲಿಯಾ (Genelia Deshmukh) ಅವರ ಪಾತ್ರ ಏನು ಎಂಬ ಬಗ್ಗೆಯೂ ಮಾಹಿತಿ ಕೇಳಿಬಂದಿದೆ. ಕಂಪನಿಯೊಂದರ ಸಿಇಒ ಪಾತ್ರವನ್ನು ಅವರು ನಿಭಾಯಿಸುತ್ತಿದ್ದಾರೆ ಎನ್ನಲಾಗಿದೆ.

ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದ ಸಿನಿಮಾಗಳಲ್ಲಿ ನಟಿಸಿರುವ ಜೆನಿಲಿಯಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಮೊದಲಿನಂತೆಯೇ ಅವರು ಮತ್ತೆ ನಟನೆಯಲ್ಲಿ ಸಕ್ರಿಯರಾಗಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಬಹುವರ್ಷಗಳ ಬಳಿಕ ಅವರು ಕಿರೀಟಿ ನಟನೆಯ ಸಿನಿಮಾ ಮೂಲಕ ತೆಲುಗು ಮತ್ತು ಕನ್ನಡದ ಪ್ರೇಕ್ಷಕರನ್ನು ರಂಜಿಸಲಿರುವುದರಿಂದ ಈ ಚಿತ್ರದ ಬಗ್ಗೆ ಸಹಜವಾಗಿಯೇ ಅಭಿಮಾನಿಗಳ ವಲಯದಲ್ಲಿ ನಿರೀಕ್ಷೆ ಹೆಚ್ಚಿದೆ.

TV9 Kannada


Leave a Reply

Your email address will not be published.