Germany To Legalize Cannabis: ಯುವಕರಿಗೆ ಗಾಂಜಾ ಸೇವನೆ ಕಾನೂನುಬದ್ಧಗೊಳಿಸಿದ ಜರ್ಮನಿ! 5 ದೇಶದಲ್ಲಿ ಗಾಂಜಾ ಕಾನೂನುಬದ್ಧ – Germany To Legalize Cannabis: Germany has legalized marijuana consumption for young people! Cannabis is legal in 5 countries


ಜರ್ಮನಿ ಸರ್ಕಾರವು ಯುವಕರು ಮನರಂಜನೆಗಾಗಿ ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸುವ ಯೋಜನೆಯನ್ನು ಒಪ್ಪಿಕೊಂಡಿದೆ.ಯೋಜನೆಯು ಜರ್ಮನಿ ಸಂಸತ್ತಿನಲ್ಲಿ ಇನ್ನೂ ಅನುಮೋದನೆ ಪಡೆಯಬೇಕಾಗಿದೆ. ಆದರೆ ಯುರೋಪಿಯನ್ ಕಮಿಷನ್ ಗ್ರೀನ್ ಸಿಗ್ನಲ್ ನೀಡಿದೆ.

Germany To Legalize Cannabis: ಯುವಕರಿಗೆ ಗಾಂಜಾ ಸೇವನೆ ಕಾನೂನುಬದ್ಧಗೊಳಿಸಿದ ಜರ್ಮನಿ! 5 ದೇಶದಲ್ಲಿ ಗಾಂಜಾ ಕಾನೂನುಬದ್ಧ

Germany To Legalize Cannabis

Image Credit source: ANI

ಜರ್ಮನಿ ಸರ್ಕಾರವು ಯುವಕರು ಮನರಂಜನೆಗಾಗಿ ಗಾಂಜಾ ಬಳಕೆಯನ್ನು ಕಾನೂನುಬದ್ಧಗೊಳಿಸುವ ಯೋಜನೆಯನ್ನು ಒಪ್ಪಿಕೊಂಡಿದೆ. ವೈಯಕ್ತಿಕ ಬಳಕೆಗಾಗಿ 30g (1oz) ವರೆಗೆ ಉಪಯೋಗ ಮಾಡಲು ಅನುಮತಿ ನೀಡಲಾಗಿದೆ. ಪರವಾನಗಿ ಪಡೆದ ಅಂಗಡಿಗಳು ಮತ್ತು ಔಷಧಾಲಯಗಳು ಇದನ್ನು ಮಾರಾಟ ಮಾಡಬಹುದು. ಯೋಜನೆಯು ಜರ್ಮನಿ ಸಂಸತ್ತಿನಲ್ಲಿ ಇನ್ನೂ ಅನುಮೋದನೆ ಪಡೆಯಬೇಕಾಗಿದೆ. ಆದರೆ ಯುರೋಪಿಯನ್ ಕಮಿಷನ್ ಗ್ರೀನ್ ಸಿಗ್ನಲ್ ನೀಡಿದೆ. ಈ ಯೋಜನೆಯು 2024 ರಲ್ಲಿ ಕಾನೂನಾಗಬಹುದು ಎಂದು ಆರೋಗ್ಯ ಸಚಿವ ಕಾರ್ಲ್ ಲಾಟರ್‌ಬಾಚ್ ಹೇಳಿದ್ದಾರೆ.

EU ನಲ್ಲಿ ಮಾಲ್ಟಾ ಮಾತ್ರ ಮನರಂಜನಾ ಗಾಂಜಾವನ್ನು ಕಾನೂನುಬದ್ಧಗೊಳಿಸಿದೆ. ನೆದರ್ಲ್ಯಾಂಡ್ಸ್ ಜರ್ಮನ್ ಈ ವಿಚಾರದ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಡಚ್ ಕಾನೂನಿನ ಅಡಿಯಲ್ಲಿ, ಕಾಫಿ ಅಂಗಡಿಗಳಲ್ಲಿ ಸಣ್ಣ ಪ್ರಮಾಣದ ಗಾಂಜಾ ಮಾರಾಟವನ್ನು ಮಾಡಬಹುದಾಗಿದೆ.ಜರ್ಮನ್ ಈ ಯೋಜನೆಯ ಅನುಸರವಾಗಿ ವಯಸ್ಕರಿಗೆ ಮೂರು ಗಾಂಜಾ ಸಸ್ಯಗಳನ್ನು ಮನೆಯಲ್ಲಿ ಬೆಳೆಸಲು ಸಹ ಅನುಮತಿ ನೀಡಿದೆ. ಕಳೆದ ವರ್ಷ ಘೋಷಿಸಿದ ಸಮ್ಮಿಶ್ರ ಸರ್ಕಾರದ ಪ್ರಣಾಳಿಕೆಯಲ್ಲಿ ಈ ಕ್ರಮವನ್ನು ಪ್ರಸ್ತಾಪಿಸಲಾಗಿತ್ತು. ಸಾಮಾಜಿಕ ಪ್ರಜಾಪ್ರಭುತ್ವವಾದಿಗಳು (SPD) ಒಕ್ಕೂಟವನ್ನು ಮತ್ತು ಗ್ರೀನ್ಸ್ ಮತ್ತು ಲಿಬರಲ್ ಫ್ರೀ ಡೆಮೋಕ್ರಾಟ್‌ ಬಣಗಳು ಇದನ್ನು ವಿರೋಧಿಸಿದೆ.

ಇದನ್ನು ಓದಿ: ಗಾಂಜಾ ಬೆಳೆಯುವುದನ್ನು ಕಾನೂನುಬದ್ಧಗೊಳಿಸಿದ ಏಷ್ಯಾದ ಮೊದಲ ದೇಶ ಥೈಲ್ಯಾಂಡ್

ಹಲವಾರು ದೇಶಗಳು ಔಷಧಿಗಳಲ್ಲಿ ಗಾಂಜಾವನ್ನು ಸೀಮಿತ ಬಳಕೆಗೆ ಕಾನೂನುಬದ್ಧಗೊಳಿಸಿವೆ. ಕೆನಡಾ ಮತ್ತು ಉರುಗ್ವೆ ಮನರಂಜನಾ ಗಾಂಜಾವನ್ನು ಕಾನೂನುಬದ್ಧಗೊಳಿಸಿವೆ ಎಂದು ಹೇಳಲಾಗಿದೆ.ಅಮೆರಿಕದ 37 ರಾಜ್ಯಗಳು ಮತ್ತು ವಾಷಿಂಗ್ಟನ್ DCಯ ವೈದ್ಯಕೀಯ ವಿಚಾರಕ್ಕೆ ಗಾಂಜಾವನ್ನು ಕಾನೂನುಬದ್ಧಗೊಳಿಸಿವೆ, ಆದರೆ 19 ರಾಜ್ಯಗಳು ಇದನ್ನು ಮನರಂಜನಾ ಬಳಕೆಗಾಗಿ ಅನುಮೋದಿಸಿವೆ.

ಯುರೋಪ್​ ರಾಷ್ಟ್ರಗಳಲ್ಲಿ ಗಾಂಜಾ ಬಳಕೆ

ನೆದರ್ಲ್ಯಾಂಡ್ಸ್: 1976 ರಿಂದ ಸರ್ಕಾರ ಕಾಫಿ ಅಂಗಡಿಗಳಲ್ಲಿ ಗಾಂಜಾ ಬಳಕೆ ಮಾಡಲು ಅವಕಾಶ ನೀಡಿದ್ದರೆ, ಆದರೆ ಇದು ಸಮಾಜದಲ್ಲಿ ಕಾನೂನುಬಾಹಿರವಾಗಿ ಉಳಿದಿದೆ. ಯುವಕರು ಕಾಫಿ ಶಾಪ್‌ಗಳಲ್ಲಿ ಮತ್ತು ಸ್ಮೋಕ್ ಜಾಯಿಂಟ್‌ಗಳಲ್ಲಿ ಪ್ರತಿದಿನ 5 ಗ್ರಾಂ ವರೆಗೆ ಖರೀದಿಸಬಹುದು. ಗಾಂಜಾವನ್ನು ವಾಣಿಜ್ಯಿಕವಾಗಿ ಬೆಳೆಸುವುದು ಅಥವಾ ಮಾರಾಟ ಮಾಡುವುದು ಕಾನೂನುಬಾಹಿರವಾಗಿದೆ.

ಸ್ವಿಟ್ಜರ್ಲೆಂಡ್: ವೈಯಕ್ತಿಕ ಬಳಕೆಗಾಗಿ ಸಣ್ಣ ಪ್ರಮಾಣದ (1% THC ಗಿಂತ ಕಡಿಮೆ) ಸೌಮ್ಯವಾದ ಗಾಂಜಾವನ್ನು ಹೊಂದಿರಬಹುದು ಎಂದು ಸರ್ಕಾರ ತಿಳಿಸಿದೆ. ಔಷಧೀಯ ಗಾಂಜಾ ಕಾನೂನುಬದ್ಧವಾಗಿದೆ ಮತ್ತು ವೈದ್ಯರು ಶಿಫಾರಸು ಮಾಡಬಹುದು.

ಇಟಲಿ: ವೈಯಕ್ತಿಕ ಬಳಕೆಗಾಗಿ 1.5 ಗ್ರಾಂ ಅಥವಾ ಅದಕ್ಕಿಂತ ಕಡಿಮೆ ಸ್ವಾಧೀನಕ್ಕೆ ಅನುಮತಿ ನೀಡಿದೆ ಮತ್ತು ಔಷಧಿಗೆ ಗಾಂಜಾ ಕಾನೂನುಬದ್ಧವಾಗಿದೆ, ಆದರೆ ಮನರಂಜನಾ ಗಾಂಜಾ ಕಾನೂನುಬಾಹಿರವಾಗಿದೆ
ಫ್ರಾನ್ಸ್: ಇಲ್ಲಿ ಎಲ್ಲಾ ಗಾಂಜಾ ಬಳಕೆ ಕಾನೂನುಬಾಹಿರವಾಗಿದ್ದು ಔಷಧೀಯ ಗಾಂಜಾ ಪ್ರಯೋಗಗಳು ಕಳೆದ ವರ್ಷ ಪ್ರಾರಂಭವಾಯಿತು.

ಪೋರ್ಚುಗಲ್: 2001ರಲ್ಲಿ ರಾಜ್ಯವು ಎಲ್ಲಾ ಅಕ್ರಮ ಔಷಧಿಗಳ ಕಡಿಮೆ ಮಟ್ಟದ ವೈಯಕ್ತಿಕ ಬಳಕೆಯನ್ನು ಅನುಮತಿ ನೀಡಿತ್ತು. ಗಾಂಜಾ ವ್ಯಾಪಾರವು ಕಾನೂನುಬಾಹಿರವಾಗಿದೆ, ಆದರೆ ಔಷಧಿ ತಯಾರಿಗೆ ಗಾಂಜಾ ಕಾನೂನುಬದ್ಧವಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.