
Image Credit source: Vedix
Beauty Tips : ಗ್ಲಿಸರಿನ್ ನೈಸರ್ಗಿಕ ಉತ್ಪನ್ನವಾಗಿದೆ. ಆದರೂ ಕೆಲವೊಬ್ಬರಿಗೆ ಇದರಿಂದ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಗ್ಲಿಸರಿನ್ ಬಳಸುವಾಗ ನಿಮಗೆ ಕೆಂಪು ಗುಳ್ಳೆ, ತುರಿಕೆಗಳಾದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ.
ಬೇಸಿಗೆಯಲ್ಲಿ ದೇಹದ ಚರ್ಮ ಶುಷ್ಕವಾಗುತ್ತದೆ. ಹೀಗಾಗಿ, ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಚರ್ಮದ ಕಾಂತಿಯನ್ನು ಕಾಪಾಡಲು ಗ್ಲಿಸರಿನ್ (Glycerin) ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಗ್ಲಿಸರಾಲ್ ಎಂದೂ ಕರೆಯಲ್ಪಡುವ ಗ್ಲಿಸರಿನ್ ಸಸ್ಯಜನ್ಯ ಎಣ್ಣೆಗಳು ಅಥವಾ ಪ್ರಾಣಿಗಳ ಕೊಬ್ಬಿನಿಂದ ಪಡೆದ ನೈಸರ್ಗಿಕ ಸಂಯುಕ್ತವಾಗಿದೆ. ಇದು ಟ್ರಾನ್ಸ್ಪರೆಂಟ್ ಆಗಿದ್ದು, ಬಣ್ಣರಹಿತ, ವಾಸನೆ ರಹಿತವಾದ ಒಂದು ದ್ರವವಾಗಿದೆ. ಗ್ಲಿಸರಿನ್ ಒಂದು ಹ್ಯೂಮೆಕ್ಟಂಟ್ ಆಗಿದೆ. ಚರ್ಮದ ಆರೈಕೆಯ ಉತ್ಪನ್ನಗಳಲ್ಲಿ ಗ್ಲಿಸರಿನ್ ಬಳಸಲಾಗುತ್ತದೆ. ಗ್ಲಿಸರಿನ್ನಿಂದ ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಗ್ಲಿಸರಿನ್ ಬಳಸುವುದು ಹೇಗೆ?:
ಗ್ಲಿಸರಿನ್ ನೈಸರ್ಗಿಕ ಉತ್ಪನ್ನವಾಗಿದೆ. ಆದರೂ ಕೆಲವೊಬ್ಬರಿಗೆ ಇದರಿಂದ ಅಲರ್ಜಿಯಾಗುವ ಸಾಧ್ಯತೆಯೂ ಇರುತ್ತದೆ. ಗ್ಲಿಸರಿನ್ ಬಳಸುವಾಗ ನಿಮಗೆ ಕೆಂಪು ಗುಳ್ಳೆ, ತುರಿಕೆಗಳಾದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ. ಗ್ಲಿಸರಿನ್ ಬಳಸುವ ಮೊದಲು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಂತರ ಹತ್ತಿ ಪ್ಯಾಡ್ ಮೇಲೆ ಗ್ಲಿಸರಿನ್ ಹಾಕಿ ಅದನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ರಬ್ ಮಾಡಿ. ಹಾಗೇ ಗ್ಲಿಸರಿನ್ ಅನ್ನು ಕೆಲವು ನಿಮಿಷಗಳ ಕಾಲ ನಿಮ್ಮ ಚರ್ಮ ಹೀರಿಕೊಳ್ಳಲು ಬಿಡಿ. ನಂತರ ಗ್ಲಿಸರಿನ್ ಅನ್ನು ನೀರಿನಿಂದ ನಿಧಾನವಾಗಿ ತೊಳೆಯಿರಿ.