Goa Assembly Election 2022: ಗೋವಾದಲ್ಲಿ ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಮಿತ್ ಪಾಲೇಕರ್​; ಅರವಿಂದ್ ಕೇಜ್ರಿವಾಲ್​ ಘೋಷಣೆ | Amit Palekar as Aam Aadmi Party chief ministerial candidate In Goa Assembly Election 2022


Goa Assembly Election 2022: ಗೋವಾದಲ್ಲಿ ಆಮ್​ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಮಿತ್ ಪಾಲೇಕರ್​; ಅರವಿಂದ್ ಕೇಜ್ರಿವಾಲ್​ ಘೋಷಣೆ

ಅಮಿತ್ ಪಾಲೇಕರ್​ ಜತೆ ಅರವಿಂದ್ ಕೇಜ್ರಿವಾಲ್​

ಫೆ.10ರಿಂದ ಪ್ರಾರಂಭವಾಗಲಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ  ಪಂಜಾಬ್​, ಉತ್ತರಾಖಂಡ ಮತ್ತು ಗೋವಾ ರಾಜ್ಯಗಳ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ನಿನ್ನೆಯಷ್ಟೇ ಪಂಜಾಬ್​​ನಲ್ಲಿ ಆಪ್​ ಮುಖ್ಯಮಂತ್ರಿ ಅಭ್ಯರ್ಥಿಯ ಘೋಷಣೆಯಾಗಿತ್ತು. ಹಾಗೇ, ಇಂದು ಗೋವಾದಲ್ಲಿ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಅದರಂತೆ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಆಪ್​ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್ ಪಾಲೇಕರ್.  ಇಂದು ಸುದ್ದಿಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್​ ಈ ಘೋಷಣೆ ಮಾಡಿದ್ದು, ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಲ್ಲಿ ಆಮ್​ ಆದ್ಮಿ ಪಾರ್ಟಿ ಸ್ಪರ್ಧಿಸಲಿದೆ ಎಂದೂ ಹೇಳಿದ್ದಾರೆ. ಅಂದಹಾಗೆ, ಈ ಪಕ್ಷ 2017ರ ಗೋವಾ ಚುನಾವಣೆಯಲ್ಲಿ ಒಂದೇ ಒಂದೂ ಕ್ಷೇತ್ರವನ್ನೂ ಗೆದ್ದಿರಲಿಲ್ಲ.

TV9 Kannada


Leave a Reply

Your email address will not be published. Required fields are marked *