Gold and Silver Price: ಚಿನ್ನ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ನಿಮ್ಮೂರಿನ ದರ ವಿವರ ಇಲ್ಲಿದೆ ಚೆಕ್​ ಮಾಡಿ | Gold Price today on 2022 February 20 check silver price in bangalore mumbai delhi and major city


Gold and Silver Price: ಚಿನ್ನ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ನಿಮ್ಮೂರಿನ ದರ ವಿವರ ಇಲ್ಲಿದೆ ಚೆಕ್​ ಮಾಡಿ

ಸಾಂದರ್ಭಿಕ ಚಿತ್ರ

Gold and Silver Price Today| ಬೆಂಗಳೂರು: ಚಿನ್ನ, ಬೆಳ್ಳಿ ಕೊಳ್ಳುವುದೆಂದರೆ ಎಲ್ಲರಿಗೂ ಆಸಕ್ತಿಯ ವಿಷಯ. ಅದರಲ್ಲೂ ಮಹಿಳೆಯರಿಗೆ ಹೊಸ ಹೊಸ ಶೈಲಿಯ ಆಭರಣಗಳನ್ನು ಖರೀದಿಸಬೇಕು ಎಂಬ ಬಯಕೆ ಸದಾ ಇರುತ್ತದೆ. ಇದಕ್ಕಾಗಿಯೇ ತಾವು ವೃತ್ತಿ ಜೀವನಕ್ಕೆ ಕಾಲಿಟ್ಟನಂತರ ಒಡವೆ ಮಾಡಿಸಲು ಒಂದಷ್ಟು ಹಣ ಕೂಡಿಡುತ್ತಾರೆ. ಕೇವಲ ಆಭರಣದ ದೃಷ್ಟಿಯಿಂದಲ್ಲದೇ ಹೂಡಿಕೆಯ ರೂಪದಲ್ಲಿಯೂ ಚಿನ್ನ ಉತ್ತಮ ಆಯ್ಕೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೇ ಬಹಳಷ್ಟು ಜನರಿಗೆ ಆಪತ್ಕಾಲದಲ್ಲಿ ಸಕಾಲಕ್ಕೆ ಆಪತ್ಬಾಂಧವನಾಗಿ ಒದಗುವುದು ಕೂಡಿಟ್ಟ ಆಭರಣಗಳು. ಆದರೆ ಆಭರಣಗಳ ಖರೀದಿಗೆ ಸರಿಯಾದ ಸಮಯ ಯಾವುದು ಎಂಬ ಬಗ್ಗೆ ಮಾತ್ರ ಗೊಂದಲ ಇರುತ್ತದೆ. ಹೀಗಾಗಿ ಚಿನ್ನ, ಬೆಳ್ಳಿ ಖರೀದಿಸುವ ಮುನ್ನ ದರ ನಿಗದಿಯ ಬಗ್ಗೆ ಒಮ್ಮೆ ಪರಿಶೀಲಿಸಿ. ಪ್ರತಿನಿತ್ಯ ಚಿನ್ನ (Gold price), ಬೆಳ್ಳಿ ಬೆಲೆ (Silver Price) ಎಷ್ಟಿದೆ? ಎಂಬ ಕುರಿತಾಗಿ ಕುತೂಹಲ ಇರುತ್ತದೆ. ಹೀಗಿರುವಾಗ ಇಂದು (ಫೆಬ್ರವರಿ 20, ಭಾನುವಾರ) ಚಿನ್ನ ದರ ದೇಶದ ನಗರಗಳಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ಬೆಲೆ ಏರಿಕೆಯಾಗಿದೆ. ಯಾವ ಯಾವ ನಗರಗಳಲ್ಲಿ ಎಷ್ಟಿದೆ? ಎಂಬ ವಿವರ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ (Bangalore Gold Price)

ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,000 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,60,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 3,000 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 50,190 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 5,01,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 3,200 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 70,000 ರೂಪಾಯಿ ದಾಖಲಾಗಿದೆ. ಸುಮಾರು 1,400 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.

TV9 Kannada


Leave a Reply

Your email address will not be published. Required fields are marked *