Gold and Silver Rate: ಆಭರಣ ಕೊಳ್ಳುವವರಿಗೆ ಶಾಕ್! ಚಿನ್ನ, ಬೆಳ್ಳಿ ದರ ಭಾರಿ ಏರಿಕೆ | India Major Cities Including Bangalore Chennai Hyderabad Gold And Silver Rate As On February 13th


Gold and Silver Rate: ಆಭರಣ ಕೊಳ್ಳುವವರಿಗೆ ಶಾಕ್! ಚಿನ್ನ, ಬೆಳ್ಳಿ ದರ ಭಾರಿ ಏರಿಕೆ

ಪ್ರಾತಿನಿಧಿಕ ಚಿತ್ರ

Gold and Silver Price Today| ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಹೆಚ್ಚು ಮದುವೆ ಸಮಾರಂಭಗಳು ನಡೆಯುತ್ತಿವೆ. ಮದುವೆ ಎಂದಾಗ ಆಭರಣ ತುಂಬಾ ಮುಖ್ಯವಾಗುತ್ತದೆ. ಮದುವೆಗೆ ದಿನಾಂಕ ನಿಗದಿಯಾದಾಗ ಚಿನ್ನ, ಬೆಳ್ಳಿ ದರ ಬೆಲೆ ಎಷ್ಟಿದೆ? ಯಾವ ಯಾವ ನಗರದಲ್ಲಿ ದರ ಹೇಗಿದೆ? ಎಂಬ ಕುತೂಹಲ ಹೆಚ್ಚಾಗಿರುತ್ತದೆ. ಇಂದು ಭಾನುವಾರ. ಇಂದು (ಫೆ.13) ಆಭರಣ ಕೊಳ್ಳುವವರಿಗೆ ಚಿನ್ನದ ದರ (Gold Price) ಹಾಗೂ ಬೆಳ್ಳಿ ದರ (Silver Price) ಬೆಲೆ ಎಷ್ಟಿದೆ ಅಂತ ನಾವು ತಿಳಿಸುತ್ತೇವೆ. ಪ್ರತಿದಿನ ಆಭರಣದ ಬೆಲೆ ಸ್ಥಿರವಾಗಿರಲ್ಲ. ನಿನ್ನೆಗಿಂತೆ ಜಾಸ್ತಿ ಆಗಬಹುದು. ಅಥವಾ ಕಡಿಮೆಯೂ ಆಗಬಹುದು. ಕೆಲವೊಮ್ಮೆ ಮಾತ್ರ ಬೆಲೆ ಸ್ಥಿರವಾಗಿರುತ್ತದೆ. ಹಾಗಾದರೆ ಇಂದು ಆಭರಣದ ಬೆಲೆ ಎಷ್ಟಿರಬಹುದು? ನೀವೇ ನೋಡಿ.

ಬೆಂಗಳೂರಿನಲ್ಲಿ ಆಭರಣದ ಬೆಲೆ ಹೀಗಿದೆ (Bangalore Gold Price):
ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 1,000 ರೂ. ಏರಿಕೆಯಾಗಿದೆ. ನಿನ್ನೆ 10 ಗ್ರಾಂಗೆ 45,800 ರೂ. ಇತ್ತು. ಆದರೆ ಇಂದು 46.800 ರೂ. ನಿಗದಿಯಾಗಿದೆ. 22 ಕ್ಯಾರೆಟ್ 100 ಗ್ರಾಂ ಚಿನ್ನಕ್ಕೆ ಇಂದು 4,68,000 ರೂ. ಇದೆ. ನಿನ್ನೆ ಇದೇ ಚಿನ್ನ 100 ಗ್ರಾಂಗೆ 4,58,000 ರೂಪಾಯಿ ಇತ್ತು. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದು 51,050 ರೂ. ಇದೆ. ನಿನ್ನೆ 49,970 ರೂ. ಇತ್ತು. ಅಂದರೆ ಇಂದು ಈ ಚಿನ್ನಕ್ಕೆ 10 ಗ್ರಾಂ ಮೇಲೆ 1,080 ರೂ. ದರ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 67,400 ರೂಪಾಯಿ ಇದೆ. ಇಂದು ಕೆಜಿಗೆ 500 ರೂಪಾಯಿ ಏರಿಕೆಯಾಗಿದೆ.

ದೆಹಲಿಯಲ್ಲಿ ಆಭರಣದ ಬೆಲೆ ಎಷ್ಟಿದೆ? (Delhi Gold price):
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,800 ರೂ. ಇದ್ದು. ಇದೇ ಚಿನ್ನ 100 ಗ್ರಾಂಗೆ 4,68,00 ರೂ. ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 51,050 ರೂ. ಇದ್ದರೆ 100 ಗ್ರಾಂಗೆ 5,10.500 ರೂ. ಇದೆ. ನಗರದಲ್ಲಿ ಒಂದು ಕೆಜಿ ಬೆಳ್ಳಿಗೆ ಇಂದು 67,400 ರೂ. ಇದೆ. ನಿನ್ನೆಗಿಂತ ಇಂದು 4,800 ರೂಪಾಯಿ ದರ ಹೆಚ್ಚಾಗಿದೆ.

ಮುಂಬೈನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? (Mumbai Gold price) :
22 ಕ್ಯಾರೆಟ್ 10 ಗ್ರಾಂಗೆ 46,800 ರೂ. ಇದ್ದರೆ, 100 ಗ್ರಾಂಗೆ 4,68,000 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 51,050 ರೂಪಾಯಿ ಇದೆ. ಮತ್ತು ಇದೇ ಚಿನ್ನ 100 ಗ್ರಾಂಗೆ 5,10,500 ರೂಪಾಯಿ ಇದೆ. ಇಲ್ಲಿ ಒಂದು ಕೆಜಿ ಬೆಳ್ಳಿಗೆ 63,000 ರೂಪಾಯಿ ಇದೆ. ನಿನ್ನೆಗಿಂತ 1 ಕೆಜಿ ಬೆಳ್ಳಿಗೆ 400 ರೂಪಾಯಿ ಏರಿಕೆಯಾಗಿದೆ.

ಹೈದರಾಬಾದ್ನಲ್ಲಿ ಆಭರಣದ ಬೆಲೆ ಹೀಗಿದೆ (Hyderabad Gold price):
22 ಕ್ಯಾರೆಟ್ 10 ಗ್ರಾಂಗೆ 46,800 ರೂ. ಇದ್ದರೆ 100 ಗ್ರಾಂಗೆ 4,68,000 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 51,050 ರೂ. ಇದ್ದು, 100 ಗ್ರಾಂಗೆ 5,10,500 ರೂಪಾಯಿ ದರ ನಿಗದಿಯಾಗಿದೆ. ಇನ್ನು ಒಂದು ಕೆಜಿ ಬೆಳ್ಳಿಗೆ ಇಂದು 67,400 ರೂಪಾಯಿ ಇದೆ.

TV9 Kannada


Leave a Reply

Your email address will not be published.