ಆರ್ಬಿಐ ಬಿಡುಗಡೆ ಮಾಡುವ ಸವರಿನ್ ಗೋಲ್ಡ್ ಬಾಂಡ್ಗಳು ಮತ್ತು ಮ್ಯೂಚುವಲ್ ಫಂಡ್ ಹೌಸ್ಗಳು ಬಿಡುಗಡೆ ಮಾಡುವ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ ಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶವಿದೆ. ಈ ಪೈಕಿ ಯಾವುದರಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಎಂಬ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಚಿನ್ನ ಖರೀದಿ ಭಾರತದಲ್ಲಿ ಬಹಳ ಹಿಂದಿನಿಂದಲೂ ಜನರ ನೆಚ್ಚಿನ ಹೂಡಿಕೆಯ (Investment) ತಾಣವಾಗಿದೆ. ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಚಿನ್ನದ (Gold) ಮೇಲಿನ ಹೂಡಿಕೆ ವಿಧಾನಗಳು ಬದಲಾಗಿವೆ. ಚಿನ್ನ ಖರೀದಿಯ ಟ್ರೆಂಡ್ ಮುಂದುವರಿದಿರುವುದರ ಜತೆಗೆ ಡಿಜಿಟಲ್ ಚಿನ್ನದ (Digital Gold) ಮೇಲಿನ ಹೂಡಿಕೆಯ ಆಕರ್ಷಣೆ ಹೆಚ್ಚಾಗುತ್ತಿದೆ. ಸಮಯ ಮತ್ತು ಪ್ರಯೋಜನಗಳನ್ನು ಗಮನಿಸಿದರೆ ಡಿಜಿಟಲ್ ಚಿನ್ನದ ಮೇಲಿನ ಹೂಡಿಕೆಯೇ ಸೂಕ್ತವಾಗಿದೆ. ಆರ್ಬಿಐ ಬಿಡುಗಡೆ ಮಾಡುವ ಸವರಿನ್ ಗೋಲ್ಡ್ ಬಾಂಡ್ಗಳು (SGBs) ಮತ್ತು ಮ್ಯೂಚುವಲ್ ಫಂಡ್ ಹೌಸ್ಗಳು ಬಿಡುಗಡೆ ಮಾಡುವ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ಸ್ (ETFs) ಗಳಲ್ಲಿಯೂ ಹೂಡಿಕೆ ಮಾಡಲು ಅವಕಾಶವಿದೆ. ಈ ಪೈಕಿ ಯಾವುದರಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ ಎಂಬ ಮಾಹಿತಿ ಇಲ್ಲಿದೆ.
ದೀರ್ಘಾವಧಿಯ ತೆರಿಗೆ ಪ್ರಯೋಜನಗಳನ್ನು ಎದುರುನೋಡುವ ವ್ಯಕ್ತಿಗಳು ಸವರಿನ್ ಗೋಲ್ಡ್ ಬಾಂಡ್ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಬಾಂಡ್ಗಳು ಭಾರತ ಸರ್ಕಾರ ಬೆಂಬಲಿತ ಬಾಂಡ್ಗಳಾಗಿವೆ. ಭೌತಿಕ ಚಿನ್ನಕ್ಕೆ ಪರ್ಯಾಯವಾಗಿ ದೊರೆಯುವ ಸವರಿನ್ ಗೋಲ್ಡ್ ಬಾಂಡ್ ಇಶ್ಯೂ ದರಕ್ಕಿಂತ ವಾರ್ಷಿಕ ಶೇಕಡಾ 2.5ರಷ್ಟು ರಿಟರ್ನ್ಸ್ ತಂದುಕೊಡುತ್ತದೆ. ಖರೀದಿಯ ದಿನ ಯಾವ ಮೊತ್ತ ಇತ್ತೋ ಅದಕ್ಕೆ ಅನುಗುಣವಾಗಿ ರಿಟರ್ನ್ಸ್ ದೊರೆಯುತ್ತದೆ. ಈ ಬಾಂಡ್ಗಳನ್ನು 8 ವರ್ಷಗಳ ಅವಧಿಗೆ ಬಿಡುಗಡೆ ಮಾಡಲಾಗುತ್ತದೆ. 5ನೇ ವರ್ಷದ ನಂತರ ಮರಳಿಸಲು ಅವಕಾಶವಿದೆ. ಇದಕ್ಕಾಗಿ ಆರ್ಬಿಐ ಬೈಬ್ಯಾಕ್ ವಿಂಡೋ ತೆರೆಯುತ್ತದೆ. ನಿಶ್ಚಿತ ಬಡ್ಡಿ ದರ ಬಯಸುವವರಿಗೆ ಈ ಬಾಂಡ್ಗಳಲ್ಲಿನ ಹೂಡಿಕೆ ಉತ್ತಮವಾಗಿದೆ ಎಂದಿದ್ದಾರೆ ವೈಯಕ್ತಿಕ ಹಣಕಾಸು ತಜ್ಞರು.