Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನ ಬೆಳ್ಳಿ ದರ ಮತ್ತೆ ಇಳಿಕೆ – Gold and Silver Price in Bangaluru Delhi Kolkata Chennai and Mumbai on November 22nd Business News in Kannada


Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ; ಚಿನ್ನ ಬೆಳ್ಳಿ ದರ ಮತ್ತೆ ಇಳಿಕೆ

ಸಾಂದರ್ಭಿಕ ಚಿತ್ರ

Gold Silver Price on 22 November 2022 | ಬೆಂಗಳೂರು: ವಿದೇಶಿ ಮಾರುಕಟ್ಟೆಗಳ ಅನಿಶ್ಚಿತತೆ, ದೇಶೀಯ ಷೇರುಪೇಟೆಗಳ ವಹಿವಾಟು ಕುಸಿತ, ರೂಪಾಯಿ ಮೌಲ್ಯದಲ್ಲಿ ಕುಸಿತದ ಟ್ರೆಂಡ್ ಮುಂದುವರಿದಿದೆ. ಚಿನ್ನವನ್ನು ಪ್ರಮುಖ ಹೂಡಿಕೆ ಸಾಧನವಾಗಿ ಪರಿಗಣಿಸುತ್ತಿರುವ ಈ ಸಂದರ್ಭದಲ್ಲಿ ಮಾರುಕಟ್ಟೆ ಅನಿಶ್ಚಿತತೆಯು ದೇಶೀಯ ಬುಲಿಯನ್ ಮಾರುಕಟ್ಟೆ (Bullion Market) ಮೇಲೂ ಪ್ರಭಾವ ಬೀರಿದೆ. ಚಿನ್ನ (Gold Price) ಹಾಗೂ ಬೆಳ್ಳಿ ದರ (Silver Price) ಮತ್ತೆ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಉತ್ತಮ ಅವಕಾಶ ಒದಗಿಸಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿಯೂ ಉಭಯ ಲೋಹಗಳ ದರ ಇಳಿಕೆಯಾಗಿತ್ತು. ಇಂದೂ ಸಹ ಚಿನ್ನ, ಬೆಳ್ಳಿ ದರ ಇಳಿಕೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ 100 ರೂ. ಇಳಿಕೆಯಾಗಿ 48,500 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 100 ರೂ. ಇಳಿಕೆಯಾಗಿ 52,920 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 400 ರೂ. ಇಳಿಕೆಯಾಗಿ 60,600 ರೂಪಾಯಿ ಆಗಿದೆ.

TV9 Kannada


Leave a Reply

Your email address will not be published.