Gold Price Today: ಇದ್ದಕ್ಕಿದ್ದಂತೆ ಭಾರೀ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರ 500 ರೂ. ಕುಸಿತ | Gold Price Today Gold Rate Rises again on May 25 Silver Price Down by 500 Rs


Gold Price Today: ಇದ್ದಕ್ಕಿದ್ದಂತೆ ಭಾರೀ ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ದರ 500 ರೂ. ಕುಸಿತ

ಚಿನ್ನದ ಬೆಲೆ

Silver Price Today: ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,150 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,430 ರೂ. ಇದ್ದುದು 52,090 ರೂ. ಆಗಿದೆ. ಇಂದು ಬೆಳ್ಳಿ ದರ 500 ರೂ. ಇಳಿಕೆಯಾಗಿದೆ.

ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಕ್ರಮೇಣ ಏರಿಕೆಯಾಗುತ್ತಿದೆ. ಇಂದು ಚಿನ್ನದ ಬೆಲೆ 10 ಗ್ರಾಂಗೆ 660 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಕೂಡ ಕೊಂಚ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 500 ರೂ. ಇಳಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,150 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,430 ರೂ. ಇದ್ದುದು 52,090 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,350 ರೂ. ಮುಂಬೈ- 47,750 ರೂ, ದೆಹಲಿ- 47,750 ರೂ, ಕೊಲ್ಕತ್ತಾ- 47,750 ರೂ, ಬೆಂಗಳೂರು- 47,750 ರೂ, ಹೈದರಾಬಾದ್- 47,750 ರೂ, ಕೇರಳ- 47,750 ರೂ, ಪುಣೆ- 47,800 ರೂ, ಮಂಗಳೂರು- 47,750 ರೂ, ಮೈಸೂರು- 47,750 ರೂ. ಇದೆ. (Source)

TV9 Kannada


Leave a Reply

Your email address will not be published. Required fields are marked *