Gold Price Today: ಒಂದೇ ದಿನದಲ್ಲಿ ಬೆಳ್ಳಿ ಬೆಲೆ 1,700 ರೂ. ಕುಸಿತ; ಚಿನ್ನ ಖರೀದಿಸುವವರೂ ತಡ ಮಾಡಬೇಡಿ! | Gold Price Today Gold Rates Slips again Bengaluru Silver Price Today April 21


Gold Price Today: ಒಂದೇ ದಿನದಲ್ಲಿ ಬೆಳ್ಳಿ ಬೆಲೆ 1,700 ರೂ. ಕುಸಿತ; ಚಿನ್ನ ಖರೀದಿಸುವವರೂ ತಡ ಮಾಡಬೇಡಿ!

ಚಿನ್ನದ ಬೆಲೆ

ಬೆಂಗಳೂರು: ಕಳೆದ ವಾರ ಏರಿಕೆಯಾಗಿದ್ದ ಚಿನ್ನದ ಬೆಲೆ ಕಳೆದೆರಡು ದಿನಗಳಿಂದ ಕುಸಿತವಾಗುತ್ತಿದೆ. ಇಂದು ಚಿನ್ನದ ದರ (Gold Rate) ಬರೋಬ್ಬರಿ 760 ರೂ. ಇಳಿಕೆ ಕಂಡಿದೆ. ಬೆಳ್ಳಿಯ ಬೆಲೆ (Silver Price) ಕೂಡ ಇಂದು ಒಂದೇ ದಿನದಲ್ಲಿ 1,700 ರೂ. ಇಳಿಕೆಯಾಗಿದೆ. ಭಾರತದ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ ಕಂಡಿದೆ. ನೀವೇನಾದರೂ ಬಂಗಾರ ಖರೀದಿಸುವವರಾದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 49,850 ರೂ. ಇದ್ದುದು 49,150 ರೂ.ಗೆ ಕುಸಿದಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 54,380 ರೂ. ಇದ್ದುದು 53,620 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,630 ರೂ. ಮುಂಬೈ- 49,150 ರೂ, ದೆಹಲಿ- 49,150 ರೂ, ಕೊಲ್ಕತ್ತಾ- 49,150 ರೂ, ಬೆಂಗಳೂರು- 49,150 ರೂ, ಹೈದರಾಬಾದ್- 49,150 ರೂ, ಕೇರಳ- 49,150 ರೂ, ಪುಣೆ- 49,180 ರೂ, ಮಂಗಳೂರು- 49,150 ರೂ, ಮೈಸೂರು- 49,150 ರೂ. ಇದೆ.

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 54,140 ರೂ, ಮುಂಬೈ- 53,620 ರೂ, ದೆಹಲಿ- 53,620 ರೂ, ಕೊಲ್ಕತ್ತಾ- 53,620 ರೂ, ಬೆಂಗಳೂರು- 53,620 ರೂ, ಹೈದರಾಬಾದ್- 53,620 ರೂ, ಕೇರಳ- 53,620 ರೂ, ಪುಣೆ- 53,650 ರೂ, ಮಂಗಳೂರು- 53,620 ರೂ, ಮೈಸೂರು- 53,620 ರೂ. ಆಗಿದೆ.

ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿಯೂ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎನ್ನಲಾಗಿದೆ. ಆದರೆ, ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ (Silver Price) ಭಾರೀ ಇಳಿಕೆಯಾಗಿದೆ.

ಇಂದಿನ ಬೆಳ್ಳಿಯ ದರ:
ಇಂದು ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 1,700 ರೂ. ಕುಸಿತವಾಗಿದೆ. ಭಾರತದಲ್ಲಿ 1 ಕೆಜಿ ಬೆಳ್ಳಿಯ ದರ 70,000 ರೂ. ಇದ್ದುದು ಇಂದು 68,300 ರೂ.ಗೆ ಇಳಿಕೆಯಾಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 73,300 ರೂ, ಮೈಸೂರು- 73,300 ರೂ., ಮಂಗಳೂರು- 73,300 ರೂ., ಮುಂಬೈ- 68,300 ರೂ, ಚೆನ್ನೈ- 73,300 ರೂ, ದೆಹಲಿ- 68,300 ರೂ, ಹೈದರಾಬಾದ್- 73,300 ರೂ, ಕೊಲ್ಕತ್ತಾ- 68,300 ರೂ. ಆಗಿದೆ.

TV9 Kannada


Leave a Reply

Your email address will not be published.