Gold Price Today: ಚಿನ್ನದ ದರ ಇಂದೂ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ಪ್ರಮುಖ ನಗರಗಳ ದರ – Gold and Silver Price in Bangaluru Delhi Kolkata Chennai and Mumbai on November 23rd Business News in Kannada


Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನದ ದರ ಇಂದೂ ಇಳಿಕೆ, ಬೆಳ್ಳಿ ಬೆಲೆ ಏರಿಕೆ; ಇಲ್ಲಿದೆ ಪ್ರಮುಖ ನಗರಗಳ ದರ

ಚಿನ್ನದ ಬೆಲೆ

Gold Silver Price on 23rd November 2022 | ಬೆಂಗಳೂರು: ದೇಶೀಯ ಮಾರುಕಟ್ಟೆಗಳ ವಹಿವಾಟಿನಲ್ಲಿ ತುಸು ಚೇತರಿಕೆ, ರೂಪಾಯಿ ಮೌಲ್ಯ ವೃದ್ಧಿ ನಡುವೆ ಚಿನ್ನದ ದರ (Gold Price) ಇಂದೂ ಇಳಿಕೆಯಾಗಿದೆ. ಬೆಳ್ಳಿ ದರ (Silver Price) ತುಸು ಏರಿಕೆಯಾಗಿದೆ. ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಕಳೆದ ಕೆಲವು ದಿನಗಳಿಂದ ಏರಿಳಿಕೆಯ ಟ್ರೆಂಡ್ ಕಂಡುಬಂದಿದ್ದು, ಹಾಗೆಯೇ ಮುಂದುವರಿಯುತ್ತಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದಲ್ಲಿ ಉಭಯ ಲೋಹಗಳ ದರ ಇಳಿಕೆಯಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ 150 ರೂ. ಇಳಿಕೆಯಾಗಿ 48,350 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 170 ರೂ. ಇಳಿಕೆಯಾಗಿ 52,750 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 600 ರೂ. ಹೆಚ್ಚಳವಾಗಿ 61,200 ರೂಪಾಯಿ ಆಗಿದೆ.

TV9 Kannada


Leave a Reply

Your email address will not be published.