Gold Price Today: ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಏರಿಳಿತವಿಲ್ಲ; ಬೆಳ್ಳಿ ದರ 500 ರೂ. ಕುಸಿತ | Gold Price Today Gold Rate Unchanged on June 14 Silver Price Today Down


Gold Price Today: ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಏರಿಳಿತವಿಲ್ಲ; ಬೆಳ್ಳಿ ದರ 500 ರೂ. ಕುಸಿತ

ಚಿನ್ನದ ಬೆಲೆ

Silver Price Today: ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 62,000 ರೂ. ಇದ್ದುದು ಇಂದು 61,500 ರೂ. ಆಗಿದೆ. ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ.

ಬೆಂಗಳೂರು: ಭಾರತದಲ್ಲಿ ನಿನ್ನೆ ಹೆಚ್ಚಳವಾಗಿದ್ದ ಚಿನ್ನದ ಬೆಲೆ (Gold Rate) ಇಂದು ಯಥಾಸ್ಥಿತಿಯಲ್ಲಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 500 ರೂ. ಇಳಿಕೆಯಾಗಿದೆ. ಬಂಗಾರದ ಬೆಲೆ ದಿನವೂ ಏರಿಳಿತವಾಗುತ್ತಲೇ ಇರುತ್ತದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 2 ದಿನಗಳ ಹಿಂದೆ 22 ಕ್ಯಾರೆಟ್ ಚಿನ್ನದ ಬೆಲೆ 48,350 ರೂ. ಇದ್ದುದು 48,360 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,750 ರೂ. ಇದ್ದುದು 52,760 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,430 ರೂ. ಮುಂಬೈ- 48,360 ರೂ, ದೆಹಲಿ- 48,360 ರೂ, ಕೊಲ್ಕತ್ತಾ- 48,360 ರೂ, ಬೆಂಗಳೂರು- 48,360 ರೂ, ಹೈದರಾಬಾದ್- 48,360 ರೂ, ಕೇರಳ- 48,360 ರೂ, ಪುಣೆ- 48,410 ರೂ, ಮಂಗಳೂರು- 48,360 ರೂ, ಮೈಸೂರು- 48,360 ರೂ. ಇದೆ. (Source)

TV9 Kannada


Leave a Reply

Your email address will not be published.