Gold Price Today: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ; ಒಂದೇ ದಿನದಲ್ಲಿ ಬೆಳ್ಳಿ ದರ 4,400 ರೂ. ಹೆಚ್ಚಳ! | Gold price Today Gold Rate Hiked on October 5th Silver Price Today Increased by 4400 Rs


Silver Price Today: ಬೆಳ್ಳಿ ದರ ಇಂದು 4,400 ರೂ. ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,400 ರೂ. ಇದ್ದುದು ಇಂದು 61,800 ರೂ. ಆಗಿದೆ.

Gold Price Today: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಏರಿಕೆ; ಒಂದೇ ದಿನದಲ್ಲಿ ಬೆಳ್ಳಿ ದರ 4,400 ರೂ. ಹೆಚ್ಚಳ!

ಚಿನ್ನದ ಬೆಲೆ

Image Credit source: Financial Express

Gold Price on 5th October 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಏರಿಕೆಯಾಗುತ್ತಲೇ ಇದೆ. ಇಂದು ಬಂಗಾರದ ಬೆಲೆ ಬರೋಬ್ಬರಿ 550 ರೂ. ಏರಿಕೆಯಾಗಿದೆ. ಬೆಳ್ಳಿ ಬೆಲೆ (Silver Price) ಕೂಡ ಒಂದೇ ದಿನದಲ್ಲಿ 4,400 ರೂ. ಹೆಚ್ಚಳವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಭಾರೀ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,850 ರೂ. ಇದ್ದುದು ಇಂದು 47,350 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,110 ರೂ. ಇದ್ದುದು 51,660 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,750 ರೂ. ಮುಂಬೈ- 47,350 ರೂ, ದೆಹಲಿ- 47,500 ರೂ, ಕೊಲ್ಕತ್ತಾ- 47,350 ರೂ, ಬೆಂಗಳೂರು- 47,400 ರೂ, ಹೈದರಾಬಾದ್- 47,350 ರೂ, ಕೇರಳ- 47,350 ರೂ, ಪುಣೆ- 47,380 ರೂ, ಮಂಗಳೂರು- 47,400 ರೂ, ಮೈಸೂರು- 47,400 ರೂ. ಆಗಿದೆ.

TV9 Kannada


Leave a Reply

Your email address will not be published.