Gold Price Today: ಚಿನ್ನದ ಬೆಲೆ ಇಂದು ಮತ್ತೆ ಏರಿಕೆ; ಬೆಳ್ಳಿ ದರ 200 ರೂ. ಹೆಚ್ಚಳ | Gold Price Today: Gold Rate Hiked on August 5 Silver Price Today Kannada News


Silver Price Today: ಬೆಳ್ಳಿ ಬೆಲೆ ಇಂದು 200 ರೂ. ಏರಿಕೆಯಾಗಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ.

Gold Price Today: ಚಿನ್ನದ ಬೆಲೆ ಇಂದು ಮತ್ತೆ ಏರಿಕೆ; ಬೆಳ್ಳಿ ದರ 200 ರೂ. ಹೆಚ್ಚಳ

ಸಾಂದರ್ಭಿಕ ಚಿತ್ರ

Gold Price on 5 August 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಕುಸಿತವಾಗಿತ್ತು. ಆದರೆ, ಇಂದು ಚಿನ್ನದ ದರ 380 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 200 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,150 ರೂ. ಇದ್ದುದು 47,500 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,440 ರೂ. ಇದ್ದುದು 51,820 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,250 ರೂ. ಮುಂಬೈ- 47,500 ರೂ, ದೆಹಲಿ- 47,650 ರೂ, ಕೊಲ್ಕತ್ತಾ- 47,500 ರೂ, ಬೆಂಗಳೂರು- 47,550 ರೂ, ಹೈದರಾಬಾದ್- 47,500 ರೂ, ಕೇರಳ- 47,500 ರೂ, ಪುಣೆ- 47,530 ರೂ, ಮಂಗಳೂರು- 47,550 ರೂ, ಮೈಸೂರು- 47,550 ರೂ. ಇದೆ.

TV9 Kannada


Leave a Reply

Your email address will not be published. Required fields are marked *