Gold Price Today: ಚಿನ್ನದ ಬೆಲೆ ಕೊಂಚ ಹೆಚ್ಚಳ; ಒಂದೇ ದಿನ 1,300 ರೂ. ಏರಿಕೆಯಾದ ಬೆಳ್ಳಿ ದರ | Gold Price Today Gold Rate Rises on June 4 Silver Price Hiked by 1300 Rs


Gold Price Today: ಚಿನ್ನದ ಬೆಲೆ ಕೊಂಚ ಹೆಚ್ಚಳ; ಒಂದೇ ದಿನ 1,300 ರೂ. ಏರಿಕೆಯಾದ ಬೆಳ್ಳಿ ದರ

ಚಿನ್ನದ ಬೆಲೆ

Image Credit source: Live Mint

Silver Price Today: ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, 1 ಕೆಜಿಗೆ 1,300 ರೂ. ಹೆಚ್ಚಳವಾಗಿದೆ. ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 51,930 ರೂ. ಇದ್ದುದು 52,470 ರೂ. ಆಗಿದೆ.

ಬೆಂಗಳೂರು: ಭಾರತದಲ್ಲಿ ಚಿನ್ನದ ಬೆಲೆ (Gold Rate) ಇಂದು ಮತ್ತೆ ಏರಿಕೆಯಾಗಿದೆ. ಪ್ರಮುಖ ನಗರಗಳಲ್ಲಿ ಚಿನ್ನದ ದರ ಇಂದು 540 ರೂ. ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ (Silver Price) ಕೂಡ ಇಂದು 1,300 ರೂ. ಏರಿಕೆಯಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,600 ರೂ. ಇದ್ದುದು 48,100 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,930 ರೂ. ಇದ್ದುದು 52,470 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,200 ರೂ. ಮುಂಬೈ- 48,100 ರೂ, ದೆಹಲಿ- 48,100 ರೂ, ಕೊಲ್ಕತ್ತಾ- 48,100 ರೂ, ಬೆಂಗಳೂರು- 48,100 ರೂ, ಹೈದರಾಬಾದ್- 48,100 ರೂ, ಕೇರಳ- 48,100 ರೂ, ಪುಣೆ- 48,180 ರೂ, ಮಂಗಳೂರು- 48,100 ರೂ, ಮೈಸೂರು- 48,100 ರೂ. ಇದೆ. (Source)

TV9 Kannada


Leave a Reply

Your email address will not be published. Required fields are marked *