Gold Price Today: ಚಿನ್ನದ ಬೆಲೆ ಮತ್ತೆ 270 ರೂ. ಏರಿಕೆ; ಇಂದಿನ ಬೆಳ್ಳಿ ದರ ಹೀಗಿದೆ | Gold Price Today Gold Rate Hiked on August 3 Silver Price Today Kannada News


Silver Price Today: ಬೆಳ್ಳಿ ಬೆಲೆ ನಿನ್ನೆ 400 ರೂ. ಕುಸಿತವಾಗಿತ್ತು. ಆದರೆ, ಇಂದು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Gold Price Today: ಚಿನ್ನದ ಬೆಲೆ ಮತ್ತೆ 270 ರೂ. ಏರಿಕೆ; ಇಂದಿನ ಬೆಳ್ಳಿ ದರ ಹೀಗಿದೆ

ಚಿನ್ನದ ಬೆಲೆ

Gold Price on 3 August 2022 | ಬೆಂಗಳೂರು: ಭಾರತದಲ್ಲಿ ನಿನ್ನೆ ಚಿನ್ನದ ಬೆಲೆ (Gold Rate) ಕುಸಿತವಾಗಿತ್ತು. ಆದರೆ, ಇಂದು ಚಿನ್ನದ ದರ 270 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು ಯಾವುದೇ ಏರಿಳಿತವಾಗಿಲ್ಲ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,100 ರೂ. ಇದ್ದುದು 47,350 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,380 ರೂ. ಇದ್ದುದು 51,650 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,200 ರೂ. ಮುಂಬೈ- 47,350 ರೂ, ದೆಹಲಿ- 47,500 ರೂ, ಕೊಲ್ಕತ್ತಾ- 47,350 ರೂ, ಬೆಂಗಳೂರು- 47,400 ರೂ, ಹೈದರಾಬಾದ್- 47,350 ರೂ, ಕೇರಳ- 47,350 ರೂ, ಪುಣೆ- 47,380 ರೂ, ಮಂಗಳೂರು- 47,500 ರೂ, ಮೈಸೂರು- 47,500 ರೂ. ಇದೆ.

TV9 Kannada


Leave a Reply

Your email address will not be published. Required fields are marked *