Gold Price Today: ಚಿನ್ನಾಭರಣ ಪ್ರಿಯರಿಗೆ ಸಂತೋಷದ ಸುದ್ದಿ​; ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ | Gold Price today on 2021 november 24 check silver price in bangalore mumbai delhi and major city


Gold Price Today: ಚಿನ್ನಾಭರಣ ಪ್ರಿಯರಿಗೆ ಸಂತೋಷದ ಸುದ್ದಿ​; ಚಿನ್ನ, ಬೆಳ್ಳಿ ದರದಲ್ಲಿ ಇಳಿಕೆ

ಸಂಗ್ರಹ ಚಿತ್ರ

ಬೆಂಗಳೂರು: ಗ್ರಾಹಕರಿಗೆ ಸಮಾಧಾನ ತರುವ ವಿಷಯವೆಂದರೆ ಇಂದು ಬುಧವಾರ (ನವೆಂಬರ್ 24) ಚಿನ್ನ, ಬೆಳ್ಳಿ ದರ ಇಳಿಕೆ ಆಗಿದೆ. ನೀವು ಚಿನ್ನಾಭರಣ ಖರೀದಿಸಬೇಕು ಅಂದುಕೊಂಡು ಹಣವನ್ನು ಕೂಡಿಟ್ಟಿದ್ದರೆ, ನೀವು ಅಂದುಕೊಂಡ ಚಿನ್ನ ಖರೀಸಿದಿಸಲು ಬೆಲೆ ಹೊಂದುವುದಾದರೆ ಆ ಕುರಿತಾಗಿ ಯೋಚಿಸಬಹುದು. ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಚಿನ್ನ, ಬೆಳ್ಳಿ ದರ ಇಳಿಕೆ ಆಗಿದೆ. ಹಾಗಿರುವಾಗ 10 ಗ್ರಾಂ ಚಿನ್ನಕ್ಕೆ ಎಷ್ಟಿದೆ ಬೆಲೆ? ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ಚಿನ್ನ ಖರೀದಿಸಲು ಸುಸಮಯ ಅನಿಸಿದರೆ ಆ ಕುರಿತಾಗಿ ಯೋಚಿಸಿ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,050 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನಕ್ಕೆ 4,50,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 6,900 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,150 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,91,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ 7,500 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಆಗಿದ್ದು, ಕೆಜಿ ಬೆಳ್ಳಿಗೆ 64,000 ರೂಪಾಯಿ ನಿಗದಿಯಾಗಿದೆ. ಸುಮಾರು 1,600 ರೂಪಾಯಿ ಇಳಿಕೆ ಕಂಡು ಬಂದಿದೆ.

TV9 Kannada


Leave a Reply

Your email address will not be published. Required fields are marked *