Gold Price Today: ಚಿನ್ನ, ಬೆಳ್ಳಿಯ ಆಭರಣ ಕೊಳ್ಳುವ ಮನಸ್ಸಿದ್ದರೆ ಇಂದಿನ ದರ ವಿವರ ಮಾಹಿತಿ ಪರಿಶೀಲಿಸಿ | Gold price fall down today 2021 October 18 check silver rate in Bengaluru Chennai Delhi and major city

Gold Price Today: ಚಿನ್ನ, ಬೆಳ್ಳಿಯ ಆಭರಣ ಕೊಳ್ಳುವ ಮನಸ್ಸಿದ್ದರೆ ಇಂದಿನ ದರ ವಿವರ ಮಾಹಿತಿ ಪರಿಶೀಲಿಸಿ

ಸಾಂದರ್ಭಿಕ ಚಿತ್ರ

Gold And Silver Price Today| ಬೆಂಗಳೂರು: ಸಾಮಾನ್ಯವಾಗಿ ಚಿನ್ನ, ಬೆಳ್ಳಿ ಆಭರಣ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ? ಕೇವಲ ದುಬಾರಿ ಆಭರಣಗಳನ್ನು ಧರಿಸಿ ಸಂತೋಷ ಪಡುವುದೊಂದೇ ಅಲ್ಲದೇ, ಹೂಡಿಕೆಯ ದೃಷ್ಟಿಯಿಂದಲೂ ಚಿನ್ನ ಖರೀದಿಸುತ್ತಾರೆ. ಹಾಗಾಗಿಯೇ ಚಿನ್ನ, ಬೆಳ್ಳಿ ದರ ಎಷ್ಟಿದೆ? ದೈನಂದಿನ ದರ ಬದಲಾವಣೆಯಲ್ಲಿ ಏರಿದೆಯೋ? ಇಳಿಕೆ ಆಗಿದೆಯೋ? ಎಂಬೆಲ್ಲಾ ಕುತೂಹಲ ಕೆರಳುತ್ತದೆ. ಹೀಗಿರುವಾಗ ನೀವು ಇಂದು (ಅಕ್ಟೋಬರ್ 18, ಸೋಮವಾರ) ಚಿನ್ನ. ಬೆಳ್ಳಿಯ ಆಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಪ್ರಮುಖ ನಗರಗಳಲ್ಲಿ ಎಷ್ಟಿದೆ ದರ? ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ನಿನ್ನೆ ಕೂಡಾ ಬೆಂಗಳೂರಿನಲ್ಲಿ ಚಿನ್ನದ ದರ ಕೊಂಚ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿತ್ತು. ಆ ಬಳಿಕ ಇಂದು ಸಹ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,180 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,41,800 ರೂಪಾಯಿ ನಿಗದಿಯಾಗಿದೆ. ಸುಮಾರು 100 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಇನ್ನು, 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,200 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,82,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 200 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಗಳಿಲ್ಲ. ಕೆಜಿ ಬೆಳ್ಳಿಗೆ 63,600 ರೂಪಾಯಿ ಇದೆ.

TV9 Kannada

Leave a comment

Your email address will not be published. Required fields are marked *