Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಧಾರಣೆ ಇಲ್ಲಿದೆ – Gold and Silver Price in Bangalore, Delhi, Kolkata, Chennai, and Mumbai on November 10th, Business News in Kannada


Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನ, ಬೆಳ್ಳಿ ಬೆಲೆ ಏರಿಕೆ; ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಧಾರಣೆ ಇಲ್ಲಿದೆ

ಸಾಂದರ್ಭಿಕ ಚಿತ್ರ

Gold Silver Price on 10 November 2022 | ಬೆಂಗಳೂರು: ದೇಶದ ಬುಲಿಯನ್ ಮಾರುಕಟ್ಟೆ (Bullion Market) ವಹಿವಾಟಿನಲ್ಲಿ ಚಿನ್ನ (Gold Price), ಬೆಳ್ಳಿ ದರ (Silver Price) ಏರಿಳಿತಗಳ ಟ್ರೆಂಡ್ ಇಂದೂ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನದ ಬೆಲೆ ತುಸು ಇಳಿಕೆಯಾಗಿದ್ದರೆ, ಬೆಳ್ಳಿ ದರ ಹೆಚ್ಚಳವಾಗಿತ್ತು. ಆದರೆ ಇಂದು ಉಭಯ ಲೋಹಗಳ ದರ ಹೆಚ್ಚಳವಾಗಿದೆ. ಷೇರುಪೇಟೆಯ ಓಟಕ್ಕೆ ಬುಧವಾರ ತಡೆಬಿದ್ದಿರುವುದು, ರೂಪಾಯಿ ಮೌಲ್ಯ ವೃದ್ಧಿಯಾಗಿರುವುದು ಬುಲಿಯನ್ ಮಾರುಕಟ್ಟೆ ಮೇಲೂ ತುಸು ಪರಿಣಾಮ ಬೀರಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 560 ರೂ. ಹೆಚ್ಚಳವಾಗಿ 47,360 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 620 ರೂ. ಏರಿಕೆಯಾಗಿ 51,670 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 850 ರೂ. ಹೆಚ್ಚಳವಾಗಿ 61,700 ರೂಪಾಯಿ ಆಗಿದೆ.

TV9 Kannada


Leave a Reply

Your email address will not be published.