ಸಾಂದರ್ಭಿಕ ಚಿತ್ರ
Gold and Silver Price Today | ಬೆಂಗಳೂರು: ದೀಪಾವಳಿ ಹಬ್ಬನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬಕ್ಕೆ ಹೊಸ ಉಡುಗೆ ತೊಟ್ಟು ಅಲಂಕಾರಗೊಂಡು ವಿಶೇಷವಾಗಿ ಆಚರಿಸಲಾಗುತ್ತಿದೆ. ಹೀಗಿರುವಾಗ ಹಬ್ಬದ ದಿನ ಚಿನ್ನಾಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಇಂದು ಶುಕ್ರವಾರ (ನವೆಂಬರ್ 5) ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.
ಹಬ್ಬ ಹರಿದಿನಗಳ ಶುಭ ಸಂದರ್ಭದಲ್ಲಿ ಚಿನ್ನಾಭರಣ ಕೊಳ್ಳುವುದು ಸಾಂಪ್ರದಾಯಿಕವಾಗಿ ಒಳ್ಳೆಯದು ಜೊತೆಗೆ ಮನೆಯಲ್ಲಿ ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಮೊದಲಿನಿಂದಲೂ ಆಚರಿಣೆಯಲ್ಲಿದೆ. ಜೊತೆಗೆ ಶುಕ್ರವಾರವೂ ಆದ್ದರಿಂದ ಈ ದಿನ ಚಿನ್ನ ಖರೀದಿಸುವುದು ಒಳ್ಳೆಯದೂ ಹೌದು. ಇಂದು ನೀವು ಚಿನ್ನ, ಬೆಳ್ಳಿ ಖರೀದಿಸಬೇಕು ಅಂದುಕೊಂಡಿದ್ದರೆ ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಚಿನ್ನಾಭರಣದ ದರ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,550 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,45,500 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,600 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,86,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿಯ ಕಂಡು ಬಂದಿಲ್ಲ. ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಆಗಿದ್ದು, ಕೆಜಿ ಬೆಳ್ಳಿ ಬೆಲೆ 62,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 100 ರೂಪಾಯಿಯಷ್ಟು ಏರಿಕೆ ಆಗಿದೆ.