ಚಿನ್ನ
ಮುಂಬೈ: ಚಿನ್ನದ ಬೆಲೆ(Gold Rate) ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇಂದು 10 ಗ್ರಾಂ ಬಂಗಾರದ ಬೆಲೆ 51,960 ರೂ. ಆಗುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಮೂಲಕ ಚಿನ್ನದ ಬೆಲೆಯ ಏರಿಕೆ ಬಂಗಾರ ಖರೀದಿಸುವವರಿಗೆ ಬಿಗ್ ಶಾಕ್ ನೀಡಿದೆ. ಇನ್ನೇನು ಮದುವೆ ಸೀಸನ್ ಶುರುವಾಗುವುದರಿಂದ ಚಿನ್ನ ಖರೀದಿಸುವರ ಸಂಖ್ಯೆಯೂ ಹೆಚ್ಚುತ್ತದೆ. ಆದರೆ, ಇದೀಗ 10 ಗ್ರಾಂ ಚಿನ್ನದ ಬೆಲೆ 51 ಸಾವಿರದ ಗಡಿ ದಾಟಿರುವುದರಿಂದ ಕೆಳ ಮತ್ತು ಮಧ್ಯಮ ವರ್ಗದವರಿಗೆ ಮತ್ತಷ್ಟು ಹೊರೆಯಾಗಲಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 51,960 ರೂ. ಆಗಿದೆ.