Gold Price Today: ಮತ್ತೆ ಹೆಚ್ಚಾದ ಚಿನ್ನದ ಬೆಲೆ, ಯಥಾಸ್ಥಿತಿ ಕಾಯ್ದುಕೊಂಡ ಬೆಳ್ಳಿ; ಇಲ್ಲಿದೆ ದರ ವಿವರ – Gold and Silver Price in Bangaluru Delhi Kolkata Chennai and Mumbai on November 18th Business News in Kannada


Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಮತ್ತೆ ಹೆಚ್ಚಾದ ಚಿನ್ನದ ಬೆಲೆ, ಯಥಾಸ್ಥಿತಿ ಕಾಯ್ದುಕೊಂಡ ಬೆಳ್ಳಿ; ಇಲ್ಲಿದೆ ದರ ವಿವರ

ಚಿನ್ನದ ಬೆಲೆ

Image Credit source: Zee News

Gold Silver Price on 18 November 2022 | ಬೆಂಗಳೂರು: ದೇಶದ ಬುಲಿಯನ್ ಮಾರುಕಟ್ಟೆಯಲ್ಲಿ (Bullion Market) ಚಿನ್ನದ ದರ ಮತ್ತೆ ಹೆಚ್ಚಾಗುವ ಮೂಲಕ ಆಭರಣ ಪ್ರಿಯರಿಗೆ ಶಾಕ್ ನೀಡಿದೆ. ಅದೇ ರೀತಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಕೂಡ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಹಳದಿ ಲೋಹದ ಬೆಲೆ ಏರಿಳಿತ ಕಾಣುತ್ತಿದೆ. ಈ ಮಧ್ಯೆ, ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ ಚಿನ್ನದ ದರದಲ್ಲಿ (Gold Price) ಹೆಚ್ಚಳವಾಗಿದ್ದರೆ ಬೆಳ್ಳಿಯ ದರ (Silver Price) ಇಳಿಕೆಯಾಗಿತ್ತು. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 750 ರೂ. ಏರಿಕೆಯಾಗಿ 48,750 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 820 ರೂ. ಹೆಚ್ಚಳವಾಗಿ 53,180 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡು 62,000 ರೂಪಾಯಿ ಆಗಿದೆ.

TV9 Kannada


Leave a Reply

Your email address will not be published.