Gold Price Today: ವೀಕೆಂಡ್​ನಲ್ಲಿ ಆಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಚಿನ್ನ, ಬೆಳ್ಳಿ ದರ ವಿವರ ಪರಿಶೀಲಿಸಿ | Gold Price today on 2021 october 10 check silver price in bangalore mumbai delhi and major city

Gold Price Today: ವೀಕೆಂಡ್​ನಲ್ಲಿ ಆಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಚಿನ್ನ, ಬೆಳ್ಳಿ ದರ ವಿವರ ಪರಿಶೀಲಿಸಿ

ಸಾಂದರ್ಭಿಕ ಚಿತ್ರ

Gold and Silver Price Today | ಬೆಂಗಳೂರು: ನಿನ್ನೆ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿ ಚಿನ್ನದ ದರ ಕೊಂಚ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ದರ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಆದರೆ ಇಂದು ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರವಾಗಿದೆ. ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ. ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ? ಇಂದಿನ ದರದಲ್ಲಿ ಚಿನ್ನ ಕೊಳ್ಳುವುದು ಸೂಕ್ತ ಅನಿಸುವುದೇ? ಈ ಕುರಿತಾದ ಕೆಲವೊಂದಿಷ್ಟು ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ. ನೀವು ಕೂಡಿಟ್ಟ ಹಣದಲ್ಲಿ ಚಿನ್ನಾಭರಣ ಖರೀದಿಸಬಹುದು ಎಂದೆನಿಸಿದರೆ ಯೋಚಿಸಿ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,900 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,39,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,890 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,78,900 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 65,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 4,700 ರೂಪಾಯಿ ಏರಿಕೆ ಕಂಡು ಬಂದಿದೆ.

TV9 Kannada

Leave a comment

Your email address will not be published. Required fields are marked *