Gold Price Today: ಸತತ 2ನೇ ದಿನವೂ ಚಿನ್ನದ ಬೆಲೆ ಹೆಚ್ಚಳ; ಬೆಳ್ಳಿ ದರ 680 ರೂ. ಏರಿಕೆ | Gold Price Today Gold Rate Hiked on September 7 Silver Price Today


ಬೆಳ್ಳಿ ಬೆಲೆ ಇಂದು 680 ರೂ. ಏರಿಕೆಯಾಗಿದೆ. ನಿನ್ನೆ 1 ಕೆಜಿ ಬೆಳ್ಳಿ ಬೆಲೆ 53,220 ರೂ. ಇದ್ದುದು ಇಂದು 53,900 ರೂ. ಆಗಿದೆ.

Gold Price Today: ಸತತ 2ನೇ ದಿನವೂ ಚಿನ್ನದ ಬೆಲೆ ಹೆಚ್ಚಳ; ಬೆಳ್ಳಿ ದರ 680 ರೂ. ಏರಿಕೆ

ಚಿನ್ನದ ಬೆಲೆ

Image Credit source: News18

Gold Price on 7th September 2022 | ಬೆಂಗಳೂರು: ಭಾರತದಲ್ಲಿ 2 ದಿನಗಳಿಂದ ಚಿನ್ನದ ಬೆಲೆ (Gold Rate) ಏರಿಕೆಯಾಗುತ್ತಿದೆ. ಚಿನ್ನದ ದರ ಇಂದು 160 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆ (Silver Price) ಇಂದು 680 ರೂ. ಹೆಚ್ಚಳವಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 46,750 ರೂ. ಇದ್ದುದು 46,900 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,000 ರೂ. ಇದ್ದುದು 51,160 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,500 ರೂ. ಮುಂಬೈ- 46,900 ರೂ, ದೆಹಲಿ- 47,050 ರೂ, ಕೊಲ್ಕತ್ತಾ- 46,900 ರೂ, ಬೆಂಗಳೂರು- 46,950 ರೂ, ಹೈದರಾಬಾದ್- 46,900 ರೂ, ಕೇರಳ- 46,900 ರೂ, ಪುಣೆ- 46,930 ರೂ, ಮಂಗಳೂರು- 46,950 ರೂ, ಮೈಸೂರು- 46,950 ರೂ. ಇದೆ.

TV9 Kannada


Leave a Reply

Your email address will not be published.