Gold Price Today: 3 ದಿನಗಳ ಬಳಿಕ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 1,600 ರೂ. ಹೆಚ್ಚಳ | Gold Price Today: Gold Rate Hiked on August 10 Silver Price Today Increased Kannada News


Silver Price Today: ಬೆಳ್ಳಿ ಬೆಲೆ ಕೂಡ ಇಂದು ಭಾರೀ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,400 ರೂ. ಇದ್ದುದು ಇಂದು 59,000 ರೂ. ಆಗಿದೆ.

Gold Price Today: 3 ದಿನಗಳ ಬಳಿಕ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 1,600 ರೂ. ಹೆಚ್ಚಳ

ಚಿನ್ನದ ಬೆಲೆ

Image Credit source: google

Gold Price on 10th August 2022 | ಬೆಂಗಳೂರು: ಭಾರತದಲ್ಲಿ ಕಳೆದೆರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ (Gold Rate) ಇಂದು ಭಾರೀ ಏರಿಕೆ ಕಂಡಿದೆ. ಬೆಳ್ಳಿಯ ಬೆಲೆ (Silver Price) ಇಂದು ದಾಖಲೆಯ ಏರಿಕೆ ಕಂಡಿದ್ದು, 1 ಕೆಜಿಗೆ 1,600 ರೂ. ಏರಿಕೆಯಾಗಿದೆ. ನೀವು ಸಹ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಹೆಚ್ಚಳವಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,550 ರೂ. ಇದ್ದುದು 47,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,870 ರೂ. ಇದ್ದುದು 52,310 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 48,800 ರೂ. ಮುಂಬೈ- 47,950 ರೂ, ದೆಹಲಿ- 48,100 ರೂ, ಕೊಲ್ಕತ್ತಾ- 47,950 ರೂ, ಬೆಂಗಳೂರು- 48,000 ರೂ, ಹೈದರಾಬಾದ್- 47,950 ರೂ, ಕೇರಳ- 47,950 ರೂ, ಪುಣೆ- 47,980 ರೂ, ಮಂಗಳೂರು- 48,000 ರೂ, ಮೈಸೂರು- 48,000 ರೂ. ಇದೆ.

TV9 Kannada


Leave a Reply

Your email address will not be published. Required fields are marked *