Good roads leads to Rise In Accidents says Madhya Pradesh BJP MLA Narayan Patel | ರಸ್ತೆ ಅಪಘಾತ ಜಾಸ್ತಿಯಾಗುವುದಕ್ಕೆ ಉತ್ತಮ ರಸ್ತೆಗಳೇ ಕಾರಣ: ಮಧ್ಯಪ್ರದೇಶದ ಬಿಜೆಪಿ ಶಾಸಕ


ಕೆಲವು ಚಾಲಕರು ಸಹ ತಪ್ಪಿತಸ್ಥರು, ಅವರಲ್ಲಿ ಹಲವರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಾರೆ ಎಂದು ಖಾಂಡ್ವಾ ಜಿಲ್ಲೆಯ ಮಂಧಾನ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನಾರಾಯಣ ಪಟೇಲ್ ಹೇಳಿದ್ದಾ

ರಸ್ತೆ ಅಪಘಾತ ಜಾಸ್ತಿಯಾಗುವುದಕ್ಕೆ ಉತ್ತಮ ರಸ್ತೆಗಳೇ ಕಾರಣ: ಮಧ್ಯಪ್ರದೇಶದ ಬಿಜೆಪಿ ಶಾಸಕ

ನಾರಾಯಣ್ ಪಟೇಲ್

ಖಾಂಡ್ವಾ: ಉತ್ತಮ ರಸ್ತೆಗಳು ಹೆಚ್ಚಿನ ವೇಗದ ಸಂಚಾರಕ್ಕೆ ಕಾರಣವಾಗುತ್ತವೆ. ಹೀಗಾಗಿ ಚಾಲಕರು ವಾಹನಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಅಪಾಯವುಂಟು ಮಾಡುತ್ತಾರೆ ಎಂದು ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ (Road Accident) ಬಗ್ಗೆ ಮಧ್ಯಪ್ರದೇಶದ (Madhya Pradesh) ಬಿಜೆಪಿ (BJP) ಶಾಸಕರೊಬ್ಬರು ಹೇಳಿದ್ದಾರೆ. ಕೆಲವು ಚಾಲಕರು ಸಹ ತಪ್ಪಿತಸ್ಥರು, ಅವರಲ್ಲಿ ಹಲವರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಾರೆ ಎಂದು ಖಾಂಡ್ವಾ ಜಿಲ್ಲೆಯ ಮಂಧಾನ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ನಾರಾಯಣ ಪಟೇಲ್ ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ರಸ್ತೆಗಳು ಉತ್ತಮವಾಗಿವೆ ಮತ್ತು ವಾಹನಗಳು ಹೆಚ್ಚಿನ ವೇಗದಲ್ಲಿ ಚಲಿಸುತ್ತವೆ. ಹೀಗೆ ಚಲಿಸುವಾಗನಿಯಂತ್ರಣವನ್ನು ಕಳೆದುಕೊಳ್ಳುವ ಅಪಾಯವನ್ನುಂಟುಮಾಡುತ್ತದೆ. ನಾನು ಇದನ್ನು ಅನುಭವಿಸಿದ್ದೇನೆ. ಕೆಲವು ಚಾಲಕರು, ಎಲ್ಲರೂ ಅಲ್ಲ, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಾರೆ. ಇದು ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್ ಹೇಳಿದ್ದಾರೆ.

ಕೆಟ್ಟ ರಸ್ತೆಗಳು ಕಡಿಮೆ ರಸ್ತೆ ಅಪಘಾತಗಳಿಗೆ ಕಾರಣವಾಗುತ್ತವೆ ಎಂದು ನೀವು ನಂಬುತ್ತೀರಾ ಎಂದು ಪತ್ರಕರ್ತರು ಕೇಳಿದ್ದಕ್ಕೆ ಅವರು ಈ ರೀತಿ ಉತ್ತರಿಸಿದ್ದಾರೆ.ರಾಜ್ಯದಲ್ಲಿ ಹೆಚ್ಚುತ್ತಿರುವ ಅಪಘಾತಗಳು ಮತ್ತು ಹದಗೆಟ್ಟ ರಸ್ತೆಗಳ ಬಗ್ಗೆ ದೂರುಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆಯು ಮಹತ್ವವನ್ನು ಪಡೆದುಕೊಂಡಿದೆ. ಖಾಂಡ್ವಾ ಜಿಲ್ಲೆಯೊಂದರಲ್ಲೇ ಈ ವರ್ಷ ನಾಲ್ಕು ಪ್ರಮುಖ ಅಪಘಾತಗಳು ಸಂಭವಿಸಿವೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *