#GoodNews ಅಪ್ಪು ಅಭಿಮಾನಿಗಳಿಗೆ ಜೇಮ್ಸ್​​ ತಂಡದಿಂದ ಸಿಹಿಸುದ್ದಿ; ನೀವಿದನ್ನ ನೋಡ್ಲೇಬೇಕ್..!


ನಾವು ರೆಡಿ ಇದ್ದೀವಿ. ಜೇಮ್ಸ್ ಚಿತ್ರತಂಡದವರು ಹೂ ಅಂದ್ರೆ ಸಾಕು ಹಬ್ಬ; ದಾಖಲೆಯ ಹಬ್ಬವನ್ನೇ ಮಾಡಿ ಬಿಡ್ತೀವಿ ಅಂತ ಪವರ್ ಸ್ಟಾರ್ ಅಪ್ಪು ಅಭಿಮಾನಿ ದೇವರುಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಟೈಮ್​​ನಲ್ಲೇ ರೆಡಿಯಾಯ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾದ ಪ್ರಮೋಷನ್ ಬ್ಲೂ ಪ್ರಿಂಟ್. ಅಧಿಕೃತವಾಗಿ ಇನ್ನೂ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿದೆ.

ಕೋಟಿ ಕೋಟಿ ಅಭಿಮಾನಿ ಅಪ್ಪು ಅಭಿಮಾನಿ ದೇವರುಗಳಿಗೆ ಈಗ ಒಂದೇ ಗುರಿ ಒಂದೇ ದಾರಿ. ಅಪ್ಪು ಅವರ ಕೊನೆಯ ಸಿನಿಮಾಗಳಲ್ಲೊಂದಾಗಿರುವ ಜೇಮ್ಸ್ ಸಿನಿಮಾವನ್ನ ನ್ಯಾಷನಲ್ ಲೆವಲ್​ನಲ್ಲಿ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿಸ್ಕೊಂಡು ಮೆರವಣಿಗೆ ಮಾಡಬೇಕು ಅಂತ ಅಭಿಮಾನಿ ನಿಂತಿದ್ದಾರೆ.. ಗಣರಾಜ್ಯೋತ್ಸವ ದಿನ ಪವರ್ ಸ್ಟಾರ್ ಅಪ್ಪು ಅವರ ಪವರ್ ಫುಲ್ ಸೈನಿಕನ ಗೆಟಪ್​ ಅನ್ನ ಚಿತ್ರತಂಡ ಬಿಡುಗಡೆ ಮಾಡಿ ಅಪ್ಪು ಅಭಿಮಾನಿ ಸಾಗರಕ್ಕೆ ಪುಳಕವನ್ನ ನೀಡಿತ್ತು.. ಈಗ ಅದಕ್ಕೂ ದೊಡ್ಡದೊಂದು ಪುಳಕವನ್ನ ನೀಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಫಿಕ್ಸ್ ಆಯ್ತು ಅಪ್ಪು ಜೇಮ್ಸ್ ಟೀಸರ್ ರಿಲೀಸ್ ಮುಹೂರ್ತ
ಮಾರ್ಚ್ 17ನೇ ತಾರೀಖ್ ಅಪ್ಪು ಅವರ ಆಸೆಯಂತೆ ಅಭಿಮಾನಿಗಳ ಕನಸಿನಂತೆ ಜೇಮ್ಸ್ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜರತ್ನನ ಜನ್ಮದಿನದ ಸವಿ ನೆನಪಿನ ಉತ್ಸವದ ಜೊತೆಗೆ ಜೇಮ್ಸ್ ಸಿನಿಮಾ ರಾಜಬೀದಿ ಉತ್ಸವವನ್ನ ಜೋರಾಗಿಯೇ ಅಭಿಮಾನಿಗಳು ಮಾಡಲು ಶಪಥ ಮಾಡಿದ್ದಾರೆ. 10 ಹೆಲೆಕ್ಯಾಪ್ಟರ್​ಗಳಲ್ಲಿ ಪುಷ್ಪಾರ್ಚನೆ, ದಿನವಿಡಿ ಅನ್ನಸಂತರ್ಪಣೆ, 30 ಕಟೌಟ್, ರಕ್ತದಾನ , ನೇತ್ರದಾನ ಹಿಂಗೆ ನಾನಾ ವಿಧದ ಅಭಿಮಾನೋತ್ಸವನ್ನೇ ಅಪ್ಪು ಅಭಿಮಾನಿ ದೇವರುಗಳು ಮಾರ್ಚ್ 17ರಂದು ಮಾಡಲಿದ್ದಾರೆ.. ಅಭಿಮಾನಿಗಳ ಜೋಶ್​​ಗೆ ಈಗ ಮತ್ತೊಂದಿಷ್ಟು ಪವರ್ ಫೆಬ್ರವರಿ 11ನೇ ತಾರೀಖ್ ಬರಲಿದೆ.

ಹೌದು ಫೆಬ್ರವರಿ 11ನೇ ತಾರೀಖ್ 11 ಗಂಟೆ 11 ನಿಮಿಷಯಕ್ಕೆ ಜೇಮ್ಸ್ ಸಿನಿಮಾದ ಟೀಸರ್ ಲಾಂಚ್ ಆಗಲಿದೆ. ಅಪ್ಪು ಅವರ ಪಿ.ಆರ್.ಕೆ ಆಡಿಯೋದಲ್ಲೇ ಜೇಮ್ಸ್ ಸಿನಿಮಾದ ಟೀಸರ್ ಲಾಂಚ್ ಆಗಲಿದ್ದು ದೊಡ್ಡ ಮಟ್ಟಕ್ಕೆ ಸೌಂಡ್ ಅನ್ನೊದಕ್ಕಿಂತ ದೊಡ್ಡ ಮಟ್ಟದ ಅಭಿಮಾವನ್ನ ಮೇರೆಯಲು ಚಿತ್ರತಂಡ ಪ್ಲಾನ್ ಮಾಡಿಕೊಳ್ತಾ ಇದೆ.. ಟೀಸರ್ ಬಿಡುಗಡೆ ಯಾಗಿ ಕೆಲವೇ ದಿನಗಳಲ್ಲಿ ಅಪ್ಪು ಅವರ ಸೈನಿಕನ ಗೆಟಪ್​​ನಲ್ಲಿರುವ ಹಾಡೊಂದನ್ನ ಬಿಡುಗಡೆ ಮಾಡಲಿದೆ ನಿರ್ದೇಶಕ ಚೇತನ್ ಕುಮಾರ್ ಅವರ ಜೇಮ್ಸ್​​​ ಚಿತ್ರ ತಂಡ.

ಜೇಮ್ಸ್ ಸಿನಿಮಾವನ್ನ ಪ್ಯಾನ್ ಇಂಡಿಯನ್ ಲೆವಲ್​​ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ರೂಪಿಸಿದ್ದು ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಜೇಮ್ಸ್ ಸಿನಿಮಾವನ್ನ ಬಿಡುಗಡೆ ಮಾಡಲಿದ್ದಾರೆ ನಿರ್ಮಾಪಕ ಕಿಶೋರ್.. ಒಟ್ಟಿನಲ್ಲಿ ಜೇಮ್ಸ್ ಸಿನಿಮಾ ತಂಡ ಅಪ್ಪು ಅವರಿಗೆ ಭಾವಪೂರ್ವಕ ಅಭಿಮಾನ ಪೂರ್ವಕ ನಮನವನ್ನ ಸಲ್ಲಿಸಲು ಸಕಲ ಸಿದ್ಧತೆಯನ್ನ ಮಾಡಿಕೊಳ್ತಿದೆ.

The post #GoodNews ಅಪ್ಪು ಅಭಿಮಾನಿಗಳಿಗೆ ಜೇಮ್ಸ್​​ ತಂಡದಿಂದ ಸಿಹಿಸುದ್ದಿ; ನೀವಿದನ್ನ ನೋಡ್ಲೇಬೇಕ್..! appeared first on News First Kannada.

News First Live Kannada


Leave a Reply

Your email address will not be published.