Google: ಜೂನ್​ನಲ್ಲಿ 11 ಲಕ್ಷಕ್ಕೂ ಅಧಿಕ ಕಂಟೆಂಟ್ ಅನ್ನು ತೆಗೆದು ಹಾಕಿದ ಗೂಗಲ್ | Google removed 1,11,493 harmful pieces of content in June of this year


ಬಳಕೆದಾರರಿಂದ ಬಂದ ವರದಿಗಳ ಜೊತೆಗೆ, ಸ್ವಯಂಚಾಲಿತ ಪತ್ತೆ ಕ್ರಮದ ಪರಿಣಾಮವಾಗಿ ಗೂಗಲ್ ಜೂನ್​ (June) ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ವಿವಾದಿತ ಅಂಶಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಈ ವರ್ಷದ ಜೂನ್ ತಿಂಗಳಲ್ಲಿ ಗೂಗಲ್ (Google) ಸಂಸ್ಥೆ ದೂರುಗಳನ್ನು ಆಧರಿಸಿ 1,11,493 ವಿಷಯದ ತುಣುಕುಗಳನ್ನು ತೆಗೆದುಹಾಕಿದೆ. ಗೂಗಲ್ ಸಂಸ್ಥೆ 32,717 ದೂರುಗಳನ್ನು ಸ್ವೀಕರಿಸಿದ್ದು, ಮಾಸಿಕ ಪಾರದರ್ಶಕ ವರದಿಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಬಳಕೆದಾರರಿಂದ ಬಂದ ವರದಿಗಳ ಜೊತೆಗೆ, ಸ್ವಯಂಚಾಲಿತ ಪತ್ತೆ ಕ್ರಮದ ಪರಿಣಾಮವಾಗಿ ಗೂಗಲ್ ಜೂನ್​ (June) ತಿಂಗಳಲ್ಲಿ 1 ಲಕ್ಷಕ್ಕೂ ಅಧಿಕ ವಿವಾದಿತ ಅಂಶಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕಳೆದ ವರ್ಷ ಮೇ ಯಲ್ಲಿ ಜಾರಿಗೆ ಬಂದ ಭಾರತದ ಐಟಿ ನಿಯಮಗಳನ್ನು (IT Rules) ಪಾಲಿಸುವ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಮೂಲದ ದೈತ್ಯ ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷ ಜಾರಿಗೆ ಬಂದ ಹೊಸ ಐಟಿ ನಿಯಮಗಳ ಅನುಸಾರವಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಮಾಸಿಕವಾಗಿ ಬಳಕೆದಾರರಿಂದ ಸ್ವೀಕರಿಸಿದ ದೂರು ಹಾಗೂ ಅದಕ್ಕೆ ಸ್ಪಂದಿಸಿದ ವರದಿಗಳನ್ನು ಬಹಿರಂಗಗೊಳಿಸಬೇಕಾಗುತ್ತದೆ. ಸ್ಥಳೀಯ ಕಾನೂನುಗಳು ಅಥವಾ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಆರೋಪದ ಮೇಲೆ ಭಾರತದ ವೈಯಕ್ತಿಕ ಬಳಕೆದಾರರಿಂದ ಹೆಚ್ಚು ದೂರುಗಳು ಬಂದಿವೆ. ಹಾಗೆಯೇ ಇದರಿಂದಾಗಿ ಮಾನಹಾನಿ, ಆಕ್ಷೇಪಾರ್ಹ ವಿಚಾರಗಳನ್ನು ರಿಮೂವ್ ಮಾಡಿದ್ದೇವೆ ಎಂದು ಸಂಸ್ಥೆ​ ತಿಳಿಸಿದೆ.

ಗೂಗಲ್​ನಿಂದ ಎಚ್ಚರಿಕೆ:

ವಾರಗಳ ಹಿಂದೆಯಷ್ಟೆ ಗೂಗಲ್ ತನ್ನ ಪ್ಲೇ ಸ್ಟೋರ್​ನಲ್ಲಿ ಕಂಡುಬಂದಿದ್ದ ಅಪಾಯಕಾರಿ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅವುಗಳನ್ನು ನೀವು ಇನ್​ಸ್ಟಾಲ್ ಮಾಡಿದ್ದರೆ ತಕ್ಷಣವೇ ಡಿಲೀಟ್​ ಮಾಡುವಂತೆ ಸೂಚನೆ ನೀಡಿತ್ತು. ಇದೀಗ ಮತ್ತೆ ಪ್ಲೇ ಸ್ಟೋರ್​ನಲ್ಲಿ ಫೇಕ್ ಆ್ಯಪ್ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್, ಪ್ಲೇಸ್ಟೋರ್​ನಲ್ಲಿ ಕೆಲ ಅಪಾಯಕಾರಿ ಮಾಲ್‌ವೇರ್ ಹೊಂದಿರುವ ಕೆಲ ಅಂಡ್ರಾಯ್ಡ್​ ಅಪ್ಲಿಕೇಶನ್​ಗಳು ಕಂಡು ಬಂದಿದೆ. ಇದನ್ನು ಅನೇಕರು ಡೌನ್ ಲೋಡ್ ಕೂಡ ಮಾಡಿದ್ದಾರೆ. ಆದರೆ ಈ ಆ್ಯಪ್​ಗಳು ಅಂಡ್ರಾಯ್ಡ್​ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅಪಾಯವನ್ನುಂಟು ಮಾಡಲಿದೆ. ಹೀಗಾಗಿ ಅಂತಹ ಕೆಲ ಅಪ್ಲಿಕೇಶನ್​ಗಳನ್ನು ಅಪಾಯಕಾರಿ ಎಂದು ಘೋಷಿಸಲಾಗಿದ್ದು, ಅವುಗಳನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಇದಾಗ್ಯೂ ಈ ಆ್ಯಪ್​ಗಳು ನಿಮ್ಮ ಫೋನ್​ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ತಿಳಿಸಿದೆ. ಅದರಂತೆ ಈ ಕೆಳಗಿನ ಆ್ಯಪ್​ಗಳು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದ ತಕ್ಷಣವೇ ಡಿಲೀಟ್ ಮಾಡಿ.

TV9 Kannada


Leave a Reply

Your email address will not be published. Required fields are marked *