Google Pixel 7: ಹೊಚ್ಚ ಹೊಸ ಗೂಗಲ್‌ ಪಿಕ್ಸಲ್‌ 7 ಸ್ಮಾರ್ಟ್​ಫೋನ್ ಮೇಲೆ ಬಂಪರ್ ಡಿಸ್ಕೌಂಟ್: ಈ ಆಫರ್ ಮಿಸ್ ಮಾಡ್ಬೇಡಿ – Flipkart is offering host of deals on the new flagship phone Google Pixel 7 check discount price Kaannada Tech News


Flipkart Offer: ಇತ್ತೀಚೆಗಷ್ಟೆ ಬಿಡುಗಡೆ ಆಗಿ ಯಶಸ್ಸು ಸಾಧಿಸುತ್ತಿರುವ ಗೂಗಲ್ ಪಿಕ್ಸೆಲ್ 7 (Google Pixel 7) ಸ್ಮಾರ್ಟ್​ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಕೇವಲ 40,000 ರೂ. ಒಳಗೆ ಈ ಸ್ಮಾರ್ಟ್​ಫೋನ್ ಅನ್ನು ನಿಮ್ಮದಾಗಿಸಬಹುದು.

ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್​ನಲ್ಲಿ (Flipkart) ಯಾವುದೇ ಮೇಳ ಆಯೋಜಿಸಿಲ್ಲವಾದರೂ ಸ್ಮಾರ್ಟ್​ಫೋನ್​ಗಳು ಬಂಪರ್ ಡಿಸ್ಕೌಂಟ್​ಗೆ ಮಾರಾಟ ಆಗುತ್ತಿದೆ. ಮುಖ್ಯವಾಗಿ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಯಶಸ್ಸು ಸಾಧಿಸುತ್ತಿರುವ ಗೂಗಲ್ ಪಿಕ್ಸೆಲ್ 7 (Google Pixel 7) ಸ್ಮಾರ್ಟ್​ಫೋನ್ ಆಕರ್ಷಕ ರಿಯಾಯಿತಿ ದರದಲ್ಲಿ ಸೇಲ್ ಆಗುತ್ತಿದೆ. ಕೇವಲ 40,000 ರೂ. ಒಳಗೆ ಈ ಸ್ಮಾರ್ಟ್​ಫೋನ್ ಅನ್ನು ನಿಮ್ಮದಾಗಿಸಬಹುದು. ಗೂಗಲ್‌ ಪಿಕ್ಸಲ್‌ 7 ಆಕರ್ಷಕ ಫೀಚರ್​ಗಳೊಂದಿಗೆ ಗ್ರಾಹಕರನ್ನು ಸೆಳೆದಿದೆ. ಈ ಫೋನ್ ತನ್ನ ಕ್ಯಾಮೆರಾ ಮೂಲಕವೇ ಟೆಕ್ ಪ್ರಿಯರ ಹುಬ್ಬೇರುವಂತೆ ಮಾಡಿತ್ತು. ಹಾಗಾದರೆ ಗೂಗಲ್‌ ಪಿಕ್ಸಲ್‌ 7 ಈಗ ಎಷ್ಟು ರೂಪಾಯಿಗೆ ಮಾರಾಟ ಆಗುತ್ತಿದೆ?, ಇದರ ವಿಶೇಷತೆ ಏನೇನು ಎಂಬುದನ್ನು ನೋಡೋಣ.

ಗೂಗಲ್‌ ಪಿಕ್ಸಲ್‌ 7 ಸ್ಮಾರ್ಟ್​ಫೋನ್​ನ ಮೂಲಬೆಲೆ 59,999 ರೂ. ಆದರೀಗ ಫ್ಲಿಪ್‌ಕಾರ್ಟ್​ನಲ್ಲಿ ಆಯ್ದ ಕೆಲ ಬ್ಯಾಂಕ್‌ಗಳಿಂದ ಆಕರ್ಷಕ ರಿಯಾಯಿತಿ ಕೊಡುಗೆಗಳು ಸಿಗಲಿವೆ. ಖರೀದಿದಾರರು ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ ಮೂಲಕ ಖರೀದಿಸಿದರೆ 7,000 ರೂ. ವರೆಗೂ ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಹಾಗೆಯೇ 19,000 ರೂ. ವರೆಗೆ ಆಕರ್ಷಕ ಎಕ್ಸ್‌ಚೇಂಜ್ ಕೊಡುಗೆ ಸಹ ಲಭ್ಯವಾಗಲಿದೆ. ನಿಮ್ಮ ಹಳೆಯ ಫೋನ್ ಕನಿಷ್ಠ 12,000 ರೂ. ಗೆ ಮಾರಾಟ ಆದರೂ 40,000 ರೂ. ಒಳಗೆ ಗೂಗಲ್‌ ಪಿಕ್ಸಲ್‌ 7 ಸ್ಮಾರ್ಟ್​ಫೋನ್​ ಅನ್ನು ನಿಮ್ಮದಾಗಿಸಬಹುದು.

ಇನ್ನು ಈ ಸ್ಮಾರ್ಟ್‌ಫೋನಿನ ವಿಶೇಷತೆ ಬಗ್ಗೆ ಗಮನಿಸುವುದಾದರೆ, ಇದು 6.32 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಟೆನ್ಸರ್ G2 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ.

ಇದರಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ನೀಡಲಾಗಿದ್ದು, ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. 10.8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಜೊತೆಗೆ ಕ್ಯಾಮೆರಾ ಮೂಲಕ ವಿಡಿಯೋ ರೆಕಾರ್ಡ್‌ ಮಾಡುವಾಗ ಬ್ಲರ್‌ ಎಫೆಕ್ಟ್‌ ನೀಡುವ ‘ಸಿನಿಮ್ಯಾಟಿಕ್ ಬ್ಲರ್’ ಫೀಚರ್ಸ್‌ ಪಡೆದುಕೊಂಡಿರುವುದು ವಿಶೇಷ.

TV9 Kannada


Leave a Reply

Your email address will not be published. Required fields are marked *