Grenade: ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆ, ಉಪ್ಪಿನಂಗಡಿ ಠಾಣೆ ಪೊಲೀಸರಿಂದ ತನಿಖೆ ಶುರು | Five grenade found in road in ilanthila dakshina kannada


Grenade: ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆ, ಉಪ್ಪಿನಂಗಡಿ ಠಾಣೆ ಪೊಲೀಸರಿಂದ ತನಿಖೆ ಶುರು

ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಬಳಿ ದಾರಿಯಲ್ಲಿ 5 ಗ್ರೆನೇಡ್‌ಗಳು ಪತ್ತೆಯಾಗಿವೆ. ಉಪ್ಪಿನಂಗಡಿ ಠಾಣೆ ಪೊಲೀಸರು ಗ್ರೆನೇಡ್‌ ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಇಳಂತಿಲ ಗ್ರಾಮದ ದಾರಿಯಲ್ಲಿ ಐದು ಗ್ರಾನೈಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್‌ನಲ್ಲಿ SCO ಆಗಿ ನಿವೃತ್ತಿ ಆಗಿರುವ ಜಯಕುಮಾರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಗ್ರೆನೇಡ್ ವಶಕ್ಕೆ ಪಡೆದಿದ್ದಾರೆ. ಮೊದಲಿಗೆ ಜಯಕುಮಾರ್ ದಾರಿಯಲ್ಲಿ ಹೋಗುವಾಗ ದಾರಿಯಲ್ಲಿ ಗ್ರಾನೈಡ್ಗಳು ಪತ್ತೆಯಾಗಿವೆ. ಬಳಿಕ ತಕ್ಷಣವೇ ಅವುಗಳನ್ನು ಮನೆಯ ಅಂಗಳದ ಬಳಿ ಇಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಕ್ಕ ಮೇಲೆ ಸ್ಥಳಕ್ಕೆ ಪೊಲೀಸರು ಬಂದು ಗ್ರಾನೈಡ್ ವಶಕ್ಕೆ‌ ಪಡೆದಿದ್ದಾರೆ. ಸದ್ಯ ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ತನಿಖೆಯ ಬಳಿಕ ಮತ್ತಷ್ಟು ಮಾಹಿತಿ ಹೊರ ಬಿಳಬೇಕಿದೆ.

ಇದನ್ನೂ ಓದಿ: ಎಂದಿಗೂ ಮುಗಿಯದ ಪುನೀತ್​ ರಾಜ್​ಕುಮಾರ್​ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು

TV9 Kannada


Leave a Reply

Your email address will not be published. Required fields are marked *