
ಜೋಸ್ ಬಟ್ಲರ್
Jos Buttler: ಬಟ್ಲರ್ ಈ ಸೀಸನ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಜೊತೆಗೆ 4 ಶತಕಗಳನ್ನು ಗಳಿಸಿದರು. ಈ ಮೂಲಕ 2016ರ ಋತುವಿನಲ್ಲಿ 4 ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.
ಐಪಿಎಲ್ 2022 (IPL 2022)ರಲ್ಲಿ, ಯಾವುದೇ ಒಬ್ಬ ಆಟಗಾರ ಹೆಚ್ಚಿನ ಜನರ ತುಟಿಗಳಲ್ಲಿ ಉಳಿದಿದ್ದರೆ, ಅದು ಜೋಸ್ ಬಟ್ಲರ್(Jos Buttler). ಇಂಗ್ಲೆಂಡ್ನ ಈ ಬಲಿಷ್ಠ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಲೀಗ್ನ 15 ನೇ ಋತುವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡರು. ರಾಜಸ್ಥಾನ್ ರಾಯಲ್ಸ್ನ ಈ ಆರಂಭಿಕ ಆಟಗಾರ ಸೀಸನ್ ಆರಂಭದಿಂದಲೂ ಬಹಳಷ್ಟು ರನ್ಗಳನ್ನು ಮಾಡಿ, ಪ್ರತಿ ಇನ್ನಿಂಗ್ಸ್ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ಹಾಗೂ ಹಳೆಯ ದಾಖಲೆಗಳನ್ನು ಸರಿಗಟ್ಟಿದ. ಗುಜರಾತ್ ಟೈಟಾನ್ಸ್ (GT vs RR Final) ವಿರುದ್ಧದ ಫೈನಲ್ನಲ್ಲಿ ಬಟ್ಲರ್ಗೆ ಬಿಗ್ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ, ಆದರೆ ಸೀಸನ್ನ ಕೊನೆಯ ಪಂದ್ಯದಲ್ಲೂ ಬಟ್ಲರ್ ತಮ್ಮ ಹೆಸರನ್ನು ದಾಖಲೆ ಪುಸ್ತಕದಲ್ಲಿ ಸೇರಿಸುವುದನ್ನು ಮರೆಯಲಿಲ್ಲ.
ಮೇ 29 ರ ಭಾನುವಾರದಂದು ಅಹಮದಾಬಾದ್ನಲ್ಲಿ ನಡೆದ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ನಲ್ಲಿ ಜೋಸ್ ಬಟ್ಲರ್ ಕೂಡ ಉತ್ತಮವಾಗಿ ಪ್ರಾರಂಭಿಸಿದ್ದರು. ಆದರೆ ಈ ಬಾರಿ ಅವರಿಗೆ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. 35 ಎಸೆತಗಳಲ್ಲಿ ಅವರ ಬ್ಯಾಟ್ನಿಂದ ಕೇವಲ 39 ರನ್ಗಳು ಬಂದವು. ಆದಾಗ್ಯೂ, ಈ ಸಣ್ಣ ಇನ್ನಿಂಗ್ಸ್ನಲ್ಲೂ, ಬಟ್ಲರ್ ತನ್ನ ಹೆಸರಿನಲ್ಲಿ ಕೆಲವು ವಿಶೇಷ ದಾಖಲೆಗಳನ್ನು ಮಾಡಿದರು.